Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯನ್‌ ಓಪನ್‌ ಬ್ಯಾಡ್ಮಿಂಟನ್‌: 2ನೇ ಸುತ್ತಿನಲ್ಲಿ ಪಿ.ವಿ ಸಿಂಧೂಗೆ ಆಘಾತ

Australian Open: P.V. Sindhu crashes out of Australian Open

ಸಿಡ್ನಿ, ಜೂನ್‌ 06: ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ ಸಿಂಧೂ, ಇಲ್ಲಿ ನಡೆಯುತ್ತಿರು ಆಸ್ಟ್ರೇಲಿಯನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಮಹಿಳಾ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನಲ್ಲಿ ಸೋಲುಂಡು ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಸಿಂಧೂ, ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಆಟಗಾರ್ತಿ ನಿಚಾನನ್‌ ಜಿಂದಪೊಲ್‌ ಎದುರು 50 ನಿಮಿಷಗಳ ಕಾಲ ಹೋರಾಟ ನಡೆಸಿ 19-21, 18-21 ಅಂತರದ ನೇರ ಗೇಮ್‌ಗಳ ಅಂತರದ ಸೋಲುಂಡರು.

ಮತ್ತೊಂದೆಡೆ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ 6ನೇ ಶ್ರೇಯಾಂಕಿತ ಆಟಗಾರ ಭಾರತದ ಸಮೀರ್‌ ವರ್ಮಾ ಕೂಡ ಸೋತು ಸ್ಪರ್ಧೆಯಿಂದ ನಿರ್ಗಮಿಸಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಗೆಲುವಿಗಾಗಿ ಸಂಪೂರ್ಣ ಹೋರಾಟ ನಡೆಸಿದ ಸಮೀರ್‌, 16-21, 17-7, 13-21 ಅಂತರದಲ್ಲಿ ತೈವಾನ್‌ನ ಆಟಗಾರ ವ್ಯಾಂಗ್‌ ತ್ಸು ವೈ ಎದುರು ಸೋಲಿಗೆ ಶರಣಾದರು.

ಇದೇ ವರ್ಷ ಸ್ವಿಸ್‌ ಓಪನ್‌ ಟೂರ್ನಿಯಲ್ಲಿ ರನ್ನರ್‌ಅಪ್‌ ಸ್ಥಾನ ಪಡೆದಿದ್ದ ಭಾರತದ ಅನುಭವಿ ಆಟಗಾರ ಸಾಯ್‌ ಪ್ರಣೀತ್‌ ಅವರ ಸಾವಲು ಕೂಡ ಎರಡನೇ ಸುತ್ತಿಗೆ ಕೊನೆಗೊಂಡಿದೆ. ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸುವಲ್ಲಿ ವಿಫಲರಾದ ಪ್ರಣೀತ್‌, ಇಂಡೋನೇಷ್ಯಾದ ತಾರೆ ಆಂಥೋನಿ ಸಿನಿಸುಕಾ ವಿರುದ್ಧ 23-25, 9-21 ಅಂತರದ ನೇರ ಗೇಮ್‌ಗಳ ಸೋಲನುಭವಿಸಿದರು.

Story first published: Thursday, June 6, 2019, 17:05 [IST]
Other articles published on Jun 6, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+