Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕನ್ನಡಿಗ ಆಯುಷ್ ಶೆಟ್ಟಿಗೆ ಭರ್ಜರಿ ಜಯ: ಕ್ವಾರ್ಟರ್‌ ಫೈನಲ್‌ನಲ್ಲಿ ಲಕ್ಷ್ಯ ಸೇನ್‌ ವಿರುದ್ಧ ಕಾದಟ

ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಕರ್ನಾಟಕ ಮೂಲದ ಆಯುಷ್‌ ಶೆಟ್ಟಿ ಹಾಂಗ್‌ ಕಾಂಗ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ತಮಗಿಂತ ಹೆಚ್ಚಿನ ಶ್ರೇಯಾಂಕಿತ ಜಪಾನ್‌ನ ಕೊಡೈ ನರೋಕ ವಿರುದ್ಧ ಭರ್ಜರಿ ಜಯ ಸಾಧಿಸಿ ಮುನ್ನಡೆ ಪಡೆದುಕೊಂಡಿದ್ದಾರೆ.

ಗುರುವಾರ ತಡ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ 20 ವರ್ಷದ ಆಯುಷ್ ಶೆಟ್ಟಿ 21-19, 12-21, 21-14ರಿಂದ ಜಪಾನ್‌ನ ಕೊಡೈ ನರೋಕ ವಿರುದ್ಧ 1 ಗಂಟೆ 12 ನಿಮಿಷದ ಕಾದಾಟದಲ್ಲಿ ಜಯ ಸಾಧಿಸಿದರು. ಈ ಮೂಲಕ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದವರೇ ಆದ ಲಕ್ಷ್ಯ ಸೇನ್ ವಿರುದ್ಧ ಕಾದಟ ನಡೆಸಲಿದ್ದಾರೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಆಟಗಾರ ಸೆಮಿಫೈನಲ್‌ ಪ್ರವೇಶಿಸಲಿದ್ದಾರೆ.

Ayush Shetty stuns Kodai Naraoka sets up quarterfinal clash with Lakshya Sen

ಆರಂಭದಲ್ಲಿ ಜಪಾನ್‌ ಆಟಗಾರ ಭರ್ಜರಿ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದರು. ಈ ಅವಧಿಯಲ್ಲಿ 5-2 ರಿಂದ ಮುನ್ನಡೆ ಸಾಧಿಸಿದ್ದರು. ಈ ಅವಧಿಯಲ್ಲಿ ಆಯುಷ್ ಸತತ ನಾಲ್ಕು ಅಂಕಗಳನ್ನು ಗಳಿಸಿ ಭರ್ಜರಿ ಪುನರಾಗಮನ ಮಾಡಿದರು. ಆದರೆ ಫಸ್ಟ್‌ ಆಫ್‌ನಲ್ಲಿ ಆಯುಷ್‌ಗೆ ಮೇಲುಗೈ ಸಾಧಿಸಲು ಸಾಧ್ಯವೇ ಆಗಲಿಲ್ಲ. ಸೆಕೆಂಡ್‌ ಹಾಫ್‌ನಲ್ಲಿ ಆಯುಷ್‌ 13-15ರಿಂದ ಹಿನ್ನಡೆ ಅನುಭವಿಸುತ್ತಿದ್ದರು. ಆದರೆ ಬ್ಯಾಕ್‌ ಟು ಬ್ಯಾಕ್‌ ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಅಲ್ಲದೆ ಮೊದಲ ಗೇಮ್‌ ಸುಲಭವಾಗಿ ಗೆದ್ದರು.

ಎರಡನೇ ಗೇಮ್‌ನ ಆರಂಭದಿಂದಲೂ ಜಪಾನ್‌ ಆಟಗಾರ ಮುನ್ನಡೆ ಕಾಯ್ದುಕೊಂಡಿದ್ದರು. ಈ ಅವಧಿಯಲ್ಲಿ ಪುಟಿದೇಳುವಲ್ಲಿ ಭಾರತೀಯ ಆಟಗಾರ ವಿಫಲರಾದರು. ಈ ಗೇಮ್‌ನಲ್ಲಿ ಆಯುಷ್‌ 12-21 ರಿಂದ ಹಿನ್ನಡೆ ಅನುಭವಿಸಿದರು. ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಆಯುಷ್‌ ಸ್ಥಿರ ಪ್ರದರ್ಶನ ನೀಡಿ ಎಲ್ಲರೂ ಹುಬ್ಬೇರುವಂತೆ ಮಾಡಿದರು. ಈ ಗೇಮ್‌ನಲ್ಲಿ ಆಯುಷ್‌ ಅಂಕಗಳಿಕೆಯಲ್ಲಿ ಅಂತರವನ್ನು ಕಾಯ್ದುಕೊಂಡು ಭರ್ಜರಿ ಗೆಲುವು ದಾಖಲಿಸಿದರು.

Ayush Shetty stuns Kodai Naraoka sets up quarterfinal clash with Lakshya Sen

ಲಕ್ಷ್ಯ ಸೇನ್‌ಗೆ ಜಯ

ಇನ್ನೊಂದು ಪುರಷರ ಸಿಂಗಲ್ಸ್‌ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ ಲಕ್ಷ್ಯ ಸೇನ್‌ 15-21, 21-18, 21-10 ರಿಂದ ಭಾರತದವರೇ ಆದ ಎಚ್‌ಎಸ್‌ ಪ್ರಣಯ್ ಅವರನ್ನು ಮಣಿಸಿ ಮುನ್ನಡೆ ಸಾಧಿಸಿದರು. ಪುರುಷರ ಡಬಲ್ಸ್‌ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಸಾತ್ವಿಕ್‌ ಸಾಯಿ ರಾಜ್‌ ರಿಂಕು ರೆಡ್ಡಿ ಹಾಗೂ ಚಿರಾಜ್‌ ಶೆಟ್ಟಿ 21-14, 20-22, 21-16 ರಿಂದ ಮಲೇಷ್ಯಾ ಜೋಡಿಯನ್ನು ಮಣಿಸಿ ಸೆಮಿಫೈನಲ್‌ ತಲುಪಿದೆ.

Story first published: Friday, September 12, 2025, 13:17 [IST]
Other articles published on Sep 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+