For Quick Alerts
ALLOW NOTIFICATIONS  
For Daily Alerts

Badminton Asia Championship: ಸಿಂಧು ಸೋತರೂ, ಭಾರತದ ವನಿತೆಯರ ತಂಡ ಫೈನಲ್‌ಗೆ

ರೋಚಕ ಸೆಮಿಫೈನಲ್ ನಲ್ಲಿ ಎರಡು ಬಾರಿಯ ಮಾಜಿ ಚಾಂಪಿಯನ್ ಜಪಾನ್ ತಂಡವನ್ನು 3-2 ರಿಂದ ಮಣಿಸಿ ತನ್ನ ಕನಸಿನ ಪಯಣವನ್ನು ಭಾರತ ಮಹಿಳಾ ತಂಡ ಮುಂದುವರಿಸಿದೆ. ಈ ಮೂಲಕ ಚೊಚ್ಚಲ ಬಾರಿಗೆ ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್ ಷಿಪ್ ನಲ್ಲಿ ಫೈನಲ್ ಪ್ರವೇಶಿಸಿದೆ.

ವಿಶ್ವದ 23ನೇ ಶ್ರೇಯಾಂಕದ ಜೋಡಿ ತ್ರಿಶಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಮೊದಲ ಡಬಲ್ಸ್, ವಿಶ್ವದ 53ನೇ ಶ್ರೇಯಾಂಕದ ಅಸ್ಮಿತಾ ಚಲಿಹಾ ಎರಡನೇ ಸಿಂಗಲ್ಸ್ ಮತ್ತು 17 ವರ್ಷದ ಅನ್ಮೋಲ್ ಖರಾಬ್ ನಿರ್ಣಾಯಕ ಸಿಂಗಲ್ಸ್ ಗೆದ್ದು ಫೈನಲ್ ಕೊಂಡೊಯ್ಯುವಲ್ಲಿ ಸಹಾಯ ಮಾಡಿದರು.

Badminton Asia Championship: Indian Womens Badminton Team secures historic place in final

ಇದೀಗ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ. ಜಪಾನ್ ತಂಡವು ವಿಶ್ವದ ನಾಲ್ಕನೇ ಶ್ರೇಯಾಂಕಿತ ಅಕಾನೆ ಯಮಗುಚಿ, ವಿಶ್ವದ ಏಳನೇ ಕ್ರಮಾಂಕಿತೆ ಯೂಕಿ ಫುಕುಶಿಮಾ ಮತ್ತು ಸಯಾಕಾ ಹಿರೋಟಾ ಮತ್ತು ವಿಶ್ವದ ಎಂಟನೇ ಕ್ರಮಾಂಕದ ಮಯೂ ಮತ್ಸುಮೊಟೊ ಮತ್ತು ವಕಾನಾ ನಗಾಹರಾ ​​ ಇಲ್ಲದೆ ಆಡುತ್ತಿತ್ತು. ಆದರೆ ಇದರ ಹೊರತಾಗಿಯೂ ಭಾರತಕ್ಕೆ ಕಠಿಣ ಸವಾಲನ್ನು ಒಡ್ಡಿತು.

ಗಾಯದ ಸಮಸ್ಯೆಯಿಂದ ಬಹಳ ಸಮಯದ ನಂತರ ಮೈದಾನಕ್ಕೆ ವಾಪಸ್ ಆಗಿದ್ದ ಪಿವಿ ಸಿಂಧು ಮೊದಲ ಸಿಂಗಲ್ಸ್‌ನಲ್ಲಿ ಅಯಾ ಒಹೊರಿ ವಿರುದ್ಧ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಸಿಂಧು 13-21, 20-22 ರಿಂದ ಸೋತರು.

Badminton Asia Championship: Indian Womens Badminton Team secures historic place in final

ತ್ರಿಶಾ ಮತ್ತು ಗಾಯತ್ರಿ ಮೊದಲ ಡಬಲ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು ಮತ್ತು 21-17, 16-21, 22-20 ರಿಂದ ವಿಶ್ವದ ಆರನೇ ಶ್ರೇಯಾಂಕದ ಜೋಡಿಯಾದ ನಮಿ ಮತ್ಸುಯಾಮಾ ಮತ್ತು ಚಿಹಾರು ಶಿದಾ ವಿರುದ್ಧ 73 ನಿಮಿಷಗಳಲ್ಲಿ ಜಯಗಳಿಸುವ ಮೂಲಕ ಭಾರತದ ಪರ ಸಮಬಲದ ಪ್ರದರ್ಶನ ನೀಡಿದರು.

ಅಸ್ಮಿತಾ ಚಲಿಹಾ ಮಾಜಿ ವಿಶ್ವ ಚಾಂಪಿಯನ್ ನೊಜೊಮಿ ಒಕುಹರಾ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಭಾರತೀಯ ಆಟಗಾರ ತನ್ನ ಕ್ರಾಸ್ ಶಾಟ್‌ಗಳು ಮತ್ತು ಸ್ಮ್ಯಾಷ್‌ಗಳನ್ನು ಅದ್ಭುತವಾಗಿ ಬಳಸಿ 21-17, 21-14 ಅಂತರದ ಗೆಲುವಿನೊಂದಿಗೆ 2-1 ಮುನ್ನಡೆ ಸಾಧಿಸಿದರು.

ತನಿಶಾ ಕ್ರಾಸ್ಟೊ ಗಾಯಗೊಂಡಿದ್ದರಿಂದ, ಸಿಂಧು ಅಶ್ವಿನಿ ಪೊನ್ನಪ್ಪ ಅವರೊಂದಿಗೆ ಕಣಕ್ಕೆ ಇಳಿದದರು. ಆದರೆ ವಿಶ್ವದ 11 ನೇ ಶ್ರೇಯಾಂಕದ ಜೋಡಿಯಾದ ರೆನಾ ಮಿಯುರಾ ಮತ್ತು ಅಯಾಕೊ ಸಕುರಾಮೊಟೊ ಅವರ ಸವಾಲನ್ನು ಮೀರಿನಿಲ್ಲಲು ಸಾಧ್ಯವಾಗಲಿಲ್ಲ. ಭಾರತದ ಜೋಡಿ 43 ನಿಮಿಷಗಳಲ್ಲಿ 14-21 11-21 ರಿಂದ ಸೋಲು ಕಂಡಿತು. ಇದೀಗ ಎರಡೂ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದ್ದವು.

ವಿಶ್ವದ 29ನೇ ಆಟಗಾರ್ತಿ ನಟ್ಸುಕಿ ನ್ಡೈರಾ ಅವರನ್ನು ಸೋಲಿಸುವ ಜವಾಬ್ದಾರಿಯನ್ನು ಅನ್ಮೋಲ್‌ ಪಡೆದರು. ಈ ಭಾರತೀಯ ಆಟಗಾರ್ತಿ 21-14, 21-18 ರಿಂದ 52 ನಿಮಿಷಗಳಲ್ಲಿ ಪಂದ್ಯ ಗೆದ್ದು ಭಾರತವನ್ನು ಮೊದಲ ಬಾರಿಗೆ ಫೈನಲ್‌ಗೆ ಕೊಂಡೊಯ್ಯುವ ಮೂಲಕ ನಿರೀಕ್ಷೆಗೆ ತಕ್ಕಂತೆ ಆಡಿದರು. ಭಾರತ ಈಗ ಈ ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಮೊದಲ ಚಿನ್ನದ ಪದಕ ಗೆಲ್ಲಲು ಪ್ರಯತ್ನಿಸುತ್ತಿದೆ.

Story first published: Saturday, February 17, 2024, 14:55 [IST]
Other articles published on Feb 17, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+