Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯನ್ ಓಪನ್: ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ ಹೆಚ್‌ಎಸ್ ಪ್ರಣಯ್

ಭಾರತದ ಅಗ್ರ ಶ್ರೇಯಾಂಕದ ಸಿಂಗಲ್ಸ್ ಆಟಗಾರ ಎಚ್‌ಎಸ್ ಪ್ರಣಯ್ ಆಸ್ಟ್ರೇಲಿಯನ್ ಓಪನ್‌ ಬ್ಯಾಡ್ಮಿಂಟನ್‌ನ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ. ಅವರು ಆಗಸ್ಟ್ 6ರ ಭಾನುವಾರ ಸೂಪರ್ 500 ಟೂರ್ನಮೆಂಟ್ ಆಗಿರುವ ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ನಲ್ಲಿ ಚೀನಾದ ವೆಂಗ್ ಹಾಂಗ್ಯಾಂಗ್ ವಿರುದ್ಧ 9-21, 23-21, 20-22 ಅಂತರದಿಂದ ಸೋಲು ಕಾಣುವ ಮೂಲಕ ಟೈಟಲ್ ಎತ್ತಿ ಹಿಡಿಯುವ ಅವಕಾಶ ಕಳೆದುಕೊಂಡಿದ್ದಾರೆ.

ಚೀನಾ ಆಟಗಾರ ಆರಂಭದಲ್ಲಿಯೇ ವೆಂಗ್ ಆರಂಭದಲ್ಲಿಯೇ ಅದ್ಭುತ ಆಟದ ಮೂಲಕ ಮೇಲುಗೈ ಸಾಧಿಸಿ 3-0 ಅಂತರದ ಮುನ್ನಡೆ ಪಡೆದುಕೊಂಡಿದ್ದರು. ಆದರೆ, ಭಾರತದ ಆಟಗಾರ ಕೂಡ ಉತ್ತಮ ಹೋರಾಟ ಪ್ರದರ್ಶಿಸಿ ಬಳಿಕ ಅಂತರವನ್ನು 3-5ಕ್ಕೆ ಇಳಿಸುವಲ್ಲಿ ಯಶಸ್ವಿಯಾದರು. ಆದರೆ ವೆಂಗ್ ಅವರ ಆಕ್ರಮಣಕಾರಿ ವಾಲಿಯಿಂಗ್‌ಗೆ ಪ್ರಣಯ್ ಅವರಲ್ಲಿ ಪರಿಣಾಮಕಾರಿ ಉತ್ತರ ಇರಲಿಲ್ಲ. ಮೊದಲ ಸುತ್ತಿನಲ್ಲಿ ಸತತ 7 ಅಂಕಗಳನ್ನು ಕುಡ ಸೇರ್ಪಡೆಗೊಳಿಸವಲ್ಲಿ ಚೀನಾದ ಆಟಗಾರ ಯಶಸ್ವಿಯಾದರು. ಹೀಗಾಗಿ ಮೊದಲ ಗೇಮ್ ಅನ್ನು 21-9 ಅಂತರದಿಂದ ಸುಲಭವಾಗಿ ವಶಕ್ಕೆ ಪಡೆದುಕೊಂಡರು.

Badminton Australian Open: HS Prannoy loses final match against Chinas Weng Hongyang

ಎರಡನೇ ಗೇಮ್‌ನಲ್ಲಿ ಆಟಗಾರರ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿತ್ತು. ವೆಂಗ್ ಆರಂಭದಲ್ಲಿ 3-0 ಮುನ್ನಡೆ ಸಾಧಿಸಿದರೂ ಪ್ರಣಯ್ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಇಬ್ಬರೂ ಆಟಗಾರರು ಕೌಶಲ್ಯಪೂರ್ಣ ಆಟ ಪ್ರದರ್ಶಿಸಿದ್ದರಿಂದ ತೀವ್ರ ಜಿದ್ದಾಜಿದ್ದಿನ ಪ್ರದರ್ಶನಗಳು ಏರ್ಪಟ್ಟಿದ್ದವು. ಈ ಗೇಮ್‌ನಲ್ಲಿ ಪ್ರಣಯ್ ಅದ್ಭುತ ಹೋರಾಟ ನೀಡಿ 19-19 ಅಂತರದಿಂದ ಸಮಬಲಗೊಳಿಸಿದರು. ನಂತರ ವೆಂಗ್ ವೈದ್ಯಕೀಯ ನೆರವಿನ ಮೊರೆಹೋದರು. ನಂತರವೂ ಪ್ರಣಯ್ ಹೋರಾಟ ಮುಂದುವರಿಯಿತು. ಅಂತಿಮವಾಗಿ 23-21 ಅಂತರದಿಂದ ಎರಡನೇ ಗೇಮ್‌ ಅನ್ನು ತಮ್ಮ ವಶಕ್ಕೆ ಪಡೆದುಕೊಂಡರು.

ಇನ್ನು ನಿರ್ಣಾಯಕ ಗೇಮ್‌ನಲ್ಲಿಯೂ ಪ್ರಣಯ್ ಅದ್ಭುತ ಹೋರಾಟ ಪ್ರದರ್ಶಿಸಿದರು. ಅರಂಭದಲ್ಲಿ ಪ್ರಣಯ್ ಮೇಲುಗೈ ಸಾಧಿಸಿದರು ಕೂಡ ನಂತರ ವೆಂಗ್ ಅಮೋಘ ಕಮ್‌ಬ್ಯಾಕ್ ಮಾಡಿ 22-20 ಅಂತರದಿಂದ ಗೆದ್ದುಕೊಂಡರು. ಈ ಮೂಲಕ ಚೀನಾದ ಆಟಗಾರ ಆಸ್ಟ್ರೆಲಿಯನ್ ಓಪನ್‌ನ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.

ಆಗಸ್ಟ್ 5 ಶನಿವಾರ ನಡೆದ ಸೆಮಿಫೈನಲ್ ಸೆಣೆಸಾಟದಲ್ಲಿ ಭಾರತದ ಪ್ರಿಯಾಂಶು ರಾಜಾವತ್ ಅವರನ್ನು ಸೋಲಿಸಿ ಪ್ರಣಯ್ ಆಸ್ಟ್ರೇಲಿಯನ್ ಓಪನ್ 2023 ಫೈನಲ್‌ಗೆ ಮುನ್ನಡೆದಿದ್ದರು. ಓರ್ಲಿಯನ್ಸ್ ಮಾಸ್ಟರ್ಸ್ ಚಾಂಪಿಯನ್ ರಾಜಾವತ್ ಮೊದಲ ಗೇಮ್‌ನಲ್ಲಿ ಪ್ರಬಲ ಹೋರಾಟ ನಡೆಸಿದ್ದರಾದರೂ ಪ್ರಣಯ್ ಅವರ ಅನುಭವವುದ ಮುಂದೆ ಯುವ ಆಟಗಾರನ ನಡೆಯಲಿಲ್ಲ.

Story first published: Sunday, August 6, 2023, 15:32 [IST]
Other articles published on Aug 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+