ಪಿವಿ ಸಿಂಧು ಡೆನ್ಮಾರ್ಕ್ ಓಪನ್ ಫೈನಲ್ ತಲುಪಿದ್ದೇ ಗ್ರೇಟ್!
ಒಡೆನ್ಸೆ, ಅ.19: ಭಾರತದ ಭರವಸೆಯ ಬಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಮೊದಲ ಬಾರಿಗೆ ಡೆನ್ಮಾರ್ಕ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದೇ ಸಾಧನೆಯಾಗಿದೆ. ಅಂತಿಮ ಹಣಾಹಣಿಯಲ್ಲಿ ಚೀನಾದ ಎದುರಾಳಿ ವಿರುದ್ಧ ಸಿಂಧು ಸೋಲೊಪ್ಪಿಕೊಂಡಿದ್ದಾರೆ.
ಸುಮಾರು 6,50,000 ಯುಎಸ್ ಡಾಲರ್ ಮೌಲ್ಯದ ಸೂಪರ್ ಸರಣಿ ಪ್ರೀಮಿಯರ್ ಬಾಡ್ಮಿಂಟನ್ ಟೂರ್ನಿಯ ಅಂತಿಮ ಹಣಾಹಣಿಯಲ್ಲಿ ಚೀನಾದ ಒಲಿಂಪಿಕ್ ಚಾಂಪಿಯನ್ ಲಿ ಕ್ಸುರೆಯಿ ಅವರ ವಿರುದ್ಧ ಪಿವಿ ಸಿಂಧು ಸೋಲುಂಡಿದ್ದಾರೆ.

ಸುಮಾರು 47 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಲಿ ಅವರು 21-19, 21-12ರ ಅಂತರದಲ್ಲಿ ಗೆಲುವು ಸಾಧಿಸಿದರು. ಮೊದಲ ಗೇಮ್ ನಲ್ಲಿ ಹೋರಾಟ ನಡೆಸಿದರೂ ಎರಡನೇ ಗೇಮ್ ನಲ್ಲಿ ಸುಲಭವಾಗಿ ಬಿಟ್ಟುಕೊಟ್ಟರು.
ಇದಕ್ಕೂ ಮುನ್ನ ವಿಶ್ವ ನಂ.13. ಪಿವಿ ಸಿಂಧು 21-15, 18-21, 21-17 ಗೇಮ್ ಗಳಿಂದ ವಿಶ್ವ ನಂ.2, ಹಾಲಿ ವಿಶ್ವ ಚಾಂಪಿಯನ್ ಹಾಗೂ ಆಲ್ ಇಂಗ್ಲೆಂಡ್ ಚಾಂಪಿಯನ್ ಕೂಡ ಆಗಿರುವ ಸ್ಪೇನಿನ ಕ್ಯಾರೊಲಿನಾ ಮರಿನ್ ವಿರುದ್ಧ ಜಯ ಸಾಧಿಸಿದ್ದರು.
ಡೆನ್ಮಾರ್ಕ್ ಓಪನ್ನಲ್ಲಿ ಸವಾಲು ಉಳಿಸಿಕೊಂಡಿರುವ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ. ಪ್ರಸಕ್ತ ವರ್ಷದ ನಡೆದ ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ ಹಾಗೂ ವಿಶ್ವ ಚಾಂಪಿಯನ್ಷಿಪ್ ಫೈನಲ್ ಪಂದ್ಯಗಳಲ್ಲಿ ವಿಶ್ವ ನಂ.1 ಆಟಗಾರ್ತಿ, ಭಾರತದ ಸೈನಾ ನೆಹ್ವಾಲ್ ವಿರುದ್ಧ ಜಯ ಸಾಧಿಸಿದ್ದ ಕ್ಯಾರೊಲಿನಾ ಮರಿನ್, ಮೇಲ್ನೋಟಕ್ಕೆ ಫೇವರಿಟ್ ಆಗಿಯೇ ಅಂಕಣಕ್ಕಿಳಿದಿದ್ದರು.
ಕಳೆದ ತಿಂಗಳು ಭಾರತದ ಅಜಯ್ ಜಯರಾಮ್ ಅವರು ಕೊರಿಯಾ ಓಪನ್ ಸೂಪರ್ ಸೀರಿಸ್ ಫೈನಲ್ ತಲುಪಿದ್ದು ಹಾಗೂ ಡಚ್ ಗ್ರ್ಯಾಂಡ್ ಪ್ರೀನಲ್ಲಿ ಟೈಟಲ್ ಉಳಿಸಿಕೊಂಡ ಸಾಧನೆ ನಂತರ ಪಿವಿ ಸಿಂಧು ಅವರು ಡೆನ್ಮಾರ್ಕ್ ಸೀರಿಸ್ ಗೆಲ್ಲುವ ಆಸೆ ಹುಟ್ಟಿಸಿದ್ದರು. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications