ಕೆನಡಾ ಓಪನ್ ಗೆದ್ದ ಅಶ್ವಿನಿ- ಜ್ವಾಲಾ ಜೋಡಿ
ಕೆನಡಾ, ಜೂ.29: ಭಾರತದ ಬಾಡ್ಮಿಂಟನ್ ತಾರೆಯರಾದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಕೆನಡಾ ಓಪನ್ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಂತಿಮ ಹಣಾಹಣಿಯಲ್ಲಿ ಡಚ್ ಜೋಡಿ ಎಫಿ ಮಸ್ಕೆನ್ಸ್ ಹಾಗೂ ಸೆಲೆನಾ ಪೀಕ್ ಅವರನ್ನು ಸೋಲಿಸಿದರು.
ಸುಮಾರು 50,000 ಯುಎಸ್ ಡಾಲರ್ ಬಹುಮಾನ ಮೊತ್ತದ ಕೆನಡಾ ಓಪನ್ ಗ್ರಾನ್ ಪ್ರೀ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದ ಅಶ್ವಿನಿ ಹಾಗೂ ಜ್ವಾಲಾ ಅವರು ಕೇವಲ 35 ನಿಮಿಷದಲ್ಲೇ ಎದುರಾಳಿಗಳಿಗೆ ಸೋಲಿನ ಕಹಿ ಉಣಿಸಿದರು.[ಮಾಸ್ಟರ್ ಬ್ಲಾಸ್ಟರ್ ಜತೆ ನಂ.1 ಕ್ರೀಡಾಪಟು]

ಮೂರನೇ ಸೀಡ್ ನ ಅಶ್ವಿನಿ-ಜ್ವಾಲಾ ಅವರು 21-19,21-16 ರ ಅಂತರದಲ್ಲಿ ಡಚ್ ಜೋಡಿಯನ್ನು ಸೋಲಿಸಿದರು. ರೋಚಕ ಹಣಾಹಣಿ ಒಂದು ಸಮಯದಲ್ಲಿ 19-19ರಲ್ಲಿ ಸಮಬಲ ಕಂಡಿತ್ತು. ಆದರೆ, ಎರಡನೇ ಗೇಮ್ ನ ಆರಂಭದಿಂದಲೇ 5-0 ಮುನ್ನಡೆ ಪಡೆದ ಭಾರತದ ಜೋಡಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. [ಕಾಮನ್ ವೆಲ್ತ್ : ಅಂತಿಮ ದಿನವೂ ಭಾರತಕ್ಕೆ ಶುಭಕರ]
ಲಂಡನ್ ಒಲಿಂಪಿಕ್ಸ್ 2012 ನಂತರ ಅಶ್ವಿನಿ ಪೊನ್ನಪ್ಪ- ಜ್ವಾಲಾ ಗುಟ್ಟಾ ಜೋಡಿ ಗೆದ್ದಿರುವ ಮೊದಲ ಪ್ರಶಸ್ತಿ ಇದಾಗಿದೆ. ಶನಿವಾರ ನಡೆದ ಸೆಮಿ ಫೈನಲ್‌ನಲ್ಲಿ ಜ್ವಾಲಾ-ಅಶ್ವಿನಿ ಜೋಡಿ, ಜಪಾನ್‌ನ ಶಿಹೊ ಟನಕಾ ಹಾಗೂ ಕೊಹರು ಯೊನೆಮೊಟೊರನ್ನು 21-17, 21-16 ಸೆಟ್‌ಗಳಿಂದ ಮಣಿಸಿದ್ದರು. [ಜ್ವಾಲಾಗೆ ಸಿಕ್ತು ವಿಚ್ಛೇದನ: ಮತ್ತೆ ಸ್ವಚ್ಚಂದ ಹಕ್ಕಿ!]
ವಿಶ್ವದ 13ನೇ ಶ್ರೇಯಾಂಕಿತ ಅಶ್ವಿನಿ-ಜ್ವಾಲಾ ಜೋಡಿ 2011ರಲ್ಲಿ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದರು. ನಂತರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಟಾಪ್ ಸೀಡೆಡ್ ಡಚ್ ಜೋಡಿಯನ್ನು ಮಣಿಸಿ ಕೆನಡಾ ಓಪನ್ ಗೆದ್ದು ಸಂಭ್ರಮಿಸಿದ್ದಾರೆ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications