ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ ಆಸ್ಪತ್ರೆಗೆ ದಾಖಲು

ಬೆಂಗಳೂರು: ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ ಅವರು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಕೋವಿಡ್-19 ಪಾಸಿಟಿವ್ ಬಂದಿರುವುದರಿಂದ ಪಡುಕೋಣೆ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದು ಬಂದಿದೆ. ಸದ್ಯ ಪ್ರಕಾಶ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವುದಾಗಿ ವರದಿಯಾಗಿದೆ.

ಕೊರೊನಾ ಕಂಟಕ, 2021ರ ಐಪಿಎಲ್ ರದ್ದುಗೊಳಿಸಿದ ಬಿಸಿಸಿಐ!ಕೊರೊನಾ ಕಂಟಕ, 2021ರ ಐಪಿಎಲ್ ರದ್ದುಗೊಳಿಸಿದ ಬಿಸಿಸಿಐ!

'ಸುಮಾರು 10 ದಿನಗಳ ಹಿಂದೆ ಪ್ರಕಾಶ್ ಪಡುಕೋಣೆ, ಅವರ ಪತ್ನಿ ಉಜ್ವಲಾ ಮತ್ತು ದ್ವಿತೀಯ ಪುತ್ರಿ ಅನಿಶಾಗೆ ಕೊರೊನಾವೈರಸ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಅವರು ಪರೀಕ್ಷಿಸಿದಾಗ ಅವರಿಗೆ ಕೊರೊನಾ ಸೋಂಕಿರುವುದು ಕಂಡುಬಂದಿತ್ತು,' ಎಂದು ಪ್ರಕಾಶ್ ಅವರ ಸ್ನೇಹಿತ ವಿಮಲ್ ಕುಮಾರ್ ಪಿಟಿಐಗೆ ಮಾಹಿತಿ ನೀಡಿದ್ದಾರೆ.

'ಪ್ರಕಾಶ್ ಆರೋಗ್ಯ ಸ್ಥಿತಿ ಈಗ ಸುಧಾರಿಸಿದೆ. ಅವರ ಎಲ್ಲಾ ಪ್ಯಾರಾಮೀಟರ್‌ಗಳೂ ಸರಿಯಾಗಿವೆ. ಅವರ ಪತ್ನಿ ಮತ್ತು ಪುತ್ರಿ ಸದ್ಯ ಮನೆಯಲ್ಲಿದ್ದಾರೆ. ಪ್ರಕಾಶ್ ಕೂಡ 2-3 ದಿನಗಳಲ್ಲಿ ಡಿಚ್‌ಚಾರ್ಜ್‌ ಆಗಲಿದ್ದಾರೆ,' ಎಂದು ವಿಮಲ್ ಹೇಳಿದ್ದಾರೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ತಂದೆ ಈ ಪ್ರಕಾಶ್ ಪಡುಕೋಣೆ.

ಐಪಿಎಲ್ ರದ್ದಾಯಿತು ; ಟಿ ಟ್ವೆಂಟಿ ವಿಶ್ವಕಪ್ ಕೂಡ ಅನುಮಾನ!ಐಪಿಎಲ್ ರದ್ದಾಯಿತು ; ಟಿ ಟ್ವೆಂಟಿ ವಿಶ್ವಕಪ್ ಕೂಡ ಅನುಮಾನ!

ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯ ನಿರ್ದೇಶಕರಾಗಿರುವ ಪ್ರಕಾಶ್, 1980ರಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದಿದ್ದರು. 1983ರಲ್ಲಿ ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ಪಡುಕೋಣೆ ಭಾರತೀಯರ ಪರ ಈ ಪದಕ ಗೆದ್ದ ಮೊದಲ ಸಾಧಕನಾಗಿ ಗುರುತಿಸಿಕೊಂಡಿದ್ದರು. ಪ್ರಕಾಶ್‌ಗೀಗ 65ರ ಹರೆಯ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, May 4, 2021, 14:55 [IST]
Other articles published on May 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X