Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬ್ಯಾಡ್ಮಿಂಟನ್: ಆಕರ್ಷಕ ಆಟದೊಂದಿಗೆ ಸಿಂಧು ಪ್ರಿ-ಕ್ವಾ.ಫೈನಲ್ ಪ್ರವೇಶ

Badminton: PV Sindhu shows top form to enter pre-quarters

ನಾನ್ಜಿಂಗ್, ಆಗಸ್ಟ್ 2: ಚೀನಾದ ನಾನ್ಜಿಂಗ್ ನಲ್ಲಿ ಬುಧವಾರ ನಡೆದ ಬ್ಯಾಡ್ಮಿಂಟನ್ ವರ್ಲ್ಡ್ ಚಾಂಪಿಯನ್ ಶಿಪ್ ನ ಮಹಿಳಾ ಸಿಂಗಲ್ಸ್ ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಆಕರ್ಷಕ ಗೇಮ್ ನೊಂದಿಗೆ ಪ್ರಿ-ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದಾರೆ.

ಒಲಿಂಪಿಕ್ಸ್ ಬೆಳ್ಳಿ ವಿಜೇತೆ ಸಿಂಧು ಇಂಡೋನೇಷ್ಯಾದ ಫಿಟ್ರಿಯಾನಿ ವಿರುದ್ಧ 21-14, 21-9ರ ನೇರ ಸೆಟ್ ಜಯದೊಂದಿಗೆ ಮುನ್ನಡೆ ಸಾಧಿಸಿದರು. ಆರಂಭದಿಂದಲೇ ಉತ್ತಮ ಆಟ ಪ್ರದರ್ಶಿಸಿದ ಸಿಂಧು ಎದುರಾಳಿಯನ್ನು ಹಿಮ್ಮೆಟ್ಟಿಸುತ್ತ ಸಾಗಿದರು.

ಪಂದ್ಯಾರಂಭದಲ್ಲಿ ಸಿಂಧು ಮೊದಲು ಪಾಯಿಂಟ್ ಗಳಿಸಿದರು. ಫಿಟ್ರಿಯಾನಿ ಅವರೂ ಉತ್ತಮ ಪೈಪೋಟಿ ನೀಡಿದರಾದರೂ ಭಾರತದ ಬಲಾಡ್ಯೆಯೆದುರು ಗೆಲುವು ಸಾಧಿಸಲಾಗಲಿಲ್ಲ.

ಪಂದ್ಯಾಟ ಆರಂಭವಾಗುವುದಕ್ಕೂ ಮುನ್ನವೇ ಸಿಂಧು ಪ್ರಶಸ್ತಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದು, ಈಗಿನ ಅವರ ಮುನ್ನಡೆ ಭಾರತೀಯರಲ್ಲಿ ಇನ್ನಷ್ಟು ನಿರೀಕ್ಷೆ ಮೂಡಿಸಿದೆ. ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಸಿಂಧು, ಸೌತ್ ಕೊರಿಯಾ ಆಟಗಾರ್ತಿ ಸುಂಗ್ ಜಿ ಹ್ಯುನ್ ಅವರ ಸವಾಲು ಸ್ವೀಕರಿಸಲಿದ್ದಾರೆ.

Story first published: Thursday, August 2, 2018, 11:56 [IST]
Other articles published on Aug 2, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+