ಮಲೇಷಿಯಾ ಮಾಸ್ಟರ್ಸ್ ಚಿನ್ನದ ಪದಕ ಗೆದ್ದ ಪಿವಿ ಸಿಂಧು
ಪೆನಾಂಗ್, ಜ. 24: ಎರಡು ಬಾರಿ ವಿಶ್ವ ಚಾಂಪಿಯನ್ ಶಿಪ್ ಕಂಚಿನ ಪದಕ ವಿಜೇತೆ, ಭಾರತದ ಬಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಭಾನುವಾರ ಮಲೇಷಿಯಾ ಮಾಸ್ಟರ್ಸ್ ಗ್ರಾನ್ ಪ್ರೀ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಪೆನಾಂಗ್ ನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಮೂರನೇ ಸೀಡ್ ನ ಸಿಂಧು ಅವರು ಸ್ಕಾಟೆಂಡಿನ ಕ್ರಿಸ್ಟಿ ಗಿಲ್ಮೋರ್ ಅವರನ್ನು 21-15, 21-9 ಅಂತರದ ನೇರ ಸೆಟ್ ಗಳಲ್ಲಿ 32ನಿಮಿಷಗಳ ಆಟದಲ್ಲಿ ಗೆಲುವು ದಾಖಲಿಸಿದ್ದಾರೆ. 2013ರಲ್ಲಿ ಫ್ರೆಂಚ್ ಓಪನ್ ನಲ್ಲಿ ಗಿಲ್ಮೋರ್ ವಿರುದ್ಧ ಸೋಲು ಕಂಡಿದ್ದ ಸಿಂಧು ಇಂದು ಸೇಡು ತೀರಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಸೆಮಿಫೈನಲ್ ಪಂದ್ಯದಲ್ಲಿ ಕೊರಿಯಾದ ಟಾಪ್ ಸೀಡ್ ಆಟಗಾರ್ತಿ ಜಿ ಹ್ಯುಮ್ ಸಂಗ್ ಅವರನ್ನು 21-19,12-21,21-10 ಅಂತರದಲ್ಲಿ ಸಿಂಧು ಸೋಲಿಸಿದ್ದರು. ಈ ಮೂಲಕ 1,20,000 ಯುಎ ಡಾಲರ್ ಮೊತ್ತದ ಪ್ರಶಸ್ತಿ ಸುತ್ತ್ತಿಗೆ ಪ್ರವೇಶಿಸಿದ್ದರು.
ಸಿಂಧು ಅವರು ಎರಡನೇ ಬಾರಿಗೆ ಮಲೇಷಿಯಾ ಮಾಸ್ಟರ್ಸ್ ಗ್ರಾನ್ ಪ್ರೀ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮುಂಚೆ 2013ರಲ್ಲಿ ಚಿನ್ನವನ್ನು ಕೊರಳಿಗೇರಿಸಿಕೊಂಡಿದ್ದರು. ಕಳೆದ ವರ್ಷ ಮಕಾವ್ ಓಪನ್ ಗ್ರಾನ್ ಪ್ರೀನಲ್ಲಿ (2013, 2014 ಹಾಗೂ 2015) ಚಿನ್ನ ಗೆಲ್ಲುವ ಮೂಲಕ ಹ್ಯಾಟ್ರಿಕ್ ದಾಖಲಿಸಿದ್ದಾರೆ. ಒಟ್ಟಾರೆ ಸಿಂಧು ಅವರು ಐದು ಗ್ರಾನ್ ಪ್ರೀ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.(ಪಿಟಿಐ)
Story first published: Wednesday, January 3, 2018, 10:14 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications