Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಮಿಳು ನಟನ ಜೊತೆಗೆ ಬಾಡ್ಮಿಂಟನ್ ತಾರೆ ಜ್ವಾಲಾ ಮದುವೆ?

Badminton star Gutta Jwala to Marry Tamil actor Vishnu Vishal

ಹೈದರಾಬಾದ್, ಜೂನ್ 09: ಹೈದರಾಬಾದ್ ಮೂಲದ ಜ್ವಾಲಾ ಗುಟ್ಟಾ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಜ್ವಾಲಾ ಮತ್ತೊಮ್ಮೆ ಮದುವೆ ಬಗ್ಗೆ ಸೀರಿಯಸ್ ಆಗಿದ್ದಾರೆ. ಚೆನ್ನೈನ ಸಿನಿಮಾ ತಾರೆ ವಿಷ್ಣು ವಿಶಾಲ್ ಜೊತೆಗಿನ ಗೆಳೆತನಕ್ಕೆ ಮದುವೆ ಮುದ್ರೆ ಒತ್ತಲು ಇಬ್ಬರು ಮುಂದಾಗಿರುವ ಸುದ್ದಿ ಬಂದಿದೆ.

ಇಬ್ಬರ ನಡುವೆ ಗಾಢ ಗೆಳೆತನವಿರುವುದು ಈಗ ಗುಟ್ಟಾಗೇನು ಉಳಿದಿಲ್ಲ. ಅನೇಕ ಬಾರಿ ಗೆಳೆಯರ ಸ್ನೇಹ ಕೂಟದಲ್ಲಿ ಇಬ್ಬರ ಜೋಡಿ ಸಂಭ್ರಮದಿಂದ ಓಡಾಡಿಕೊಂಡಿದ್ದನ್ನು ಕಂಡು ಅನೇಕ ಮಾಧ್ಯಮಗಳ ಗಾಸಿಪ್ ಕಾಲಂನಲ್ಲಿ ಟ್ರೆಂಡ್ ಆಗಿತ್ತು.

ಈ ಬಗ್ಗೆ ಆಪ್ತರೊಬ್ಬರು ಪ್ರಶ್ನಿಸಿದಾಗ, ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ 'Brewed' ಎಂದು ಬರೆದು ಇಬ್ಬರ ನಡುವಿನ ಸಂಬಂಧವನ್ನು ಒಪ್ಪಿಕೊಂಡಿದ್ದರು. ಟಾಲಿವುಡ್ ಹಾಗೂ ಸಿನಿಮಾ ಜಗತ್ತು ಜ್ವಾಲಾ ಗುಟ್ಟಾಗೆ ಹೊಸದೇನಲ್ಲ. ನಿತಿನ್ ಅಭಿನಯದ 'ಗುಂಡೇ ಜಾರಿ ಗಲ್ಲಾಂಥೈಯಿಂದೆ' ಚಿತ್ರದ ಐಟಂ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದರು. ಸಿನಿಮಾ ಮಂದಿಯ ಸಕ್ಸಸ್ ಪಾರ್ಟಿಗಳಲ್ಲೂ ಕಾಣಿಸಿಕೊಂಡಿದ್ದಾರೆ.

ವಿಚ್ಛೇದನ : ಚೇತನ್ ಗೆ ಟಾಟಾ ಹೇಳಿದ ಜ್ವಾಲಾ

ಇಬ್ಬರಿಗೂ ಎರಡನೇ ಮದ್ವೆ: 2011ರಲ್ಲಿ ಪತಿ ಚೇತನ್ ಆನಂದ್ ರಿಂದ ವಿವಾಹ ವಿಚ್ಛೇದನ ಪಡೆದ ಜ್ವಾಲಾ ಅವರ ಹೆಸರು ಅಜರುದ್ದೀನ್ ಪುತ್ರನ ಜೊತೆಗೂ ಕೇಳಿ ಬಂದಿತ್ತು. ಇನ್ನು ವಿಷ್ಣು ವಿಶಾಲ್ ಅವರು ತಮ್ಮ ಪತಿಗೆ ಕಳೆದ ವರ್ಷ ಸೋಡಾಚೀಟಿ ನೀಡಿದ್ದಾರೆ. ಮುಂದಿನ ವರ್ಷದೊಳಗೆ ಜ್ವಾಲಾ ಹಾಗು ವಿಷ್ಣು ಮದುವೆ ನಡೆಯುವ ಸುಳಿವು ಸಿಕ್ಕಿದೆ.

Story first published: Sunday, June 9, 2019, 14:28 [IST]
Other articles published on Jun 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+