ವೃತ್ತಿ ಜೀವನದ ಅತ್ಯುನ್ನತ 2ನೇ ಶ್ರೇಯಾಂಕಕ್ಕೇರಿದ ಸಾತ್ವಿಕ್- ಚಿರಾಗ್ ಜೋಡಿ
ಬ್ಯಾಡ್ಮಿಂಟನ್‌ನ ಸ್ಟಾರ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಭಾರತದ ಈ ಜೋಡಿ ಪುರುಷರ ಡಬಲ್ಸ್‌ನಲ್ಲಿ ಎರಡನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದು ವೃತ್ತಿ ಜೀವನದ ಅತ್ಯಯನ್ನತ ಶ್ರೇಯಾಂಕವನ್ನು ಪಡೆದುಕೊಂಡಂತಾಗಿದೆ.
ಕೊರಿಯಾ ಓಪನ್ ಗೆದ್ದು ಭಾರತದ ಪುರುಷರ ವಿಭಾಗದ ಈ ಅಗ್ರ ಡಬಲ್ಸ್ ಜೋಡಿ ಈ ವಿಶೇಷ ಸಾಧನೆ ಮಾಡಿದ್ದಾರೆ. ಪುರುಷರ ಡಬಲ್ಸ್ ಸರ್ಕ್ಯೂಟ್‌ನಲ್ಲಿ ಈ ಉನ್ನತ ಶ್ರೇಯಾಂಕವನ್ನು ಸಾಧಿಸಲು ಸಾತ್ವಿಕ್ ಮತ್ತು ಚಿರಾಗ್ ಕಳೆದ ವಾರ ಕೊರಿಯಾ ಓಪನ್ ಸೆಮಿಫೈನಲ್‌ನಲ್ಲಿ ಚೀನಾದ ಜೋಡಿಯಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ಅವರನ್ನು ಮಣಿಸಿದ್ದರು.

ಈ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಈ ಜೋಡಿ ಪ್ರಸಕ್ತ ಋತುವಿನಲ್ಲಿ ಕೊರಿಯಾ ಓಪನ್ (ಸೂಪರ್ 500), ಸ್ವಿಸ್ ಓಪನ್ (ಸೂಪರ್ 300) ಮತ್ತು ಇಂಡೋನೇಷ್ಯಾ ಓಪನ್ (ಸೂಪರ್ 1000) ಪ್ರಶಸ್ತಿಗಳನ್ನು ಗೆದ್ದ ಏಷ್ಯನ್ ಚಾಂಪಿಯನ್ಸ್ ಈಗ 87,211 ಅಂಕಗಳನ್ನು ಹೊಂದಿದ್ದಾರೆ.
ವರ್ಷದ ನಾಲ್ಕನೇ ಫೈನಲ್‌ನಲ್ಲಿ ಆಡುತ್ತಿರುವ ಸಾತ್ವಿಕ್ ಮತ್ತು ಚಿರಾಗ್ ಕಳೆದ ವಾರ ಕೊರಿಯಾ ಓಪನ್‌ನಲ್ಲಿ ವಿಶ್ವದ ನಂಬರ್ ಒನ್ ಜೋಡಿಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮದ್ ರಿಯಾನ್ ಅರ್ಡಿಯಾಂಟೊ ಅವರನ್ನು ಸೋಲಿಸಲು ಭರ್ಜರಿ ಪೈಪೋಟಿ ನಡೆಸಿದರು.
ಈ ಮಧ್ಯೆ ಕೊರಿಯಾ ಓಪನ್‌ನಿಂದ ಬೇಗನೆ ನಿರ್ಗಮಿಸಿದ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಸಿಂಗಲ್ಸ್ ಪಟ್ಟಿಯಲ್ಲಿ 17 ನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications