ಥೋಮಸ್ ಆ್ಯಂಡ್ ಉಬರ್ ಕಪ್ ಫೈನಲ್ಸ್ ಮುಂದೂಡಿದ ಬಿಡ್ಲ್ಯೂಎಫ್

ನವದೆಹಲಿ: ಡೆನ್ಮಾರ್ಕಿನಲ್ಲಿ ನಡೆಯಲಿದ್ದ ದ ಥೋಮಸ್ ಆ್ಯಂಡ್ ಉಬರ್ ಕಪ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಮುಂದಿನ ವರ್ಷಕ್ಕೆ ಮುಂದೂಡಿದೆ. ಮಂಗಳವಾರ (ಸೆಪ್ಟೆಂಬರ್ 15) ಬಿಡ್ಲ್ಯೂಎಫ್ ಈ ನಿರ್ಧಾರ ಪ್ರಕಟಿಸಿದೆ.
ಕೊರೊನಾವೈರಸ್ ಭೀತಿಯ ಕಾರಣ ವಿಶ್ವದ ಪ್ರಮುಖ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲು ಹಿಂದೇಟು ಹಾಕಿದವು. ಅನೇಕ ತಂಡಗಳು ಟೂರ್ನಿಯಿಂದ ಹಿಂದೆ ಸರಿದವು. ಹೀಗಾಗಿ ಅಂತಿಮವಾಗಿ ಟೂರ್ನಿ ಮುಂದೂಡುವ ನಿರ್ಧಾರಕ್ಕೆ ಬಿಡ್ಲ್ಯೂಎಫ್ ಬಂದಿದೆ.
ಅಕ್ಟೋಬರ್ 3ರಿಂದ 11ರ ವರೆಗೆ ಡೆನ್ಮಾರ್ಕ್‌ನ ಆರ್ಹಸ್‌ನಲ್ಲಿ ನಡೆಯಲಿದ್ದ ಥೋಮಸ್ ಆ್ಯಂಡ್ ಉಬರ್ ಕಪ್ ಫೈನಲ್ಸ್ ಟೂರ್ನಿಗಾಗಿ ಭಾರತ ಪುರುಷರ ಹಾಗು ಮಹಿಳಾ ತಂಡಗಳನ್ನು ಪ್ರಕಟಿಸಿತ್ತು. ಆದರೆ 31ನೇ ಆವೃತ್ತಿಯ ಥೋಮಸ್ ಆ್ಯಂಡ್ ಉಬರ್ ಕಪ್ ಫೈನಲ್ಸ್ ಈ ಬಾರಿ ನಡೆಯುತ್ತಿಲ್ಲ.
'ಡೆನ್ಮಾರ್ಕಿನ ಆರ್ಹಸ್‌ನಲ್ಲಿ ನಡೆಯಬೇಕಿದ್ದ ಟೋಟಲ್ ಬಿಡಬ್ಲ್ಯೂಎಫ್ ಥೋಮಸ್ ಆ್ಯಂಡ್ ಉಬರ್ ಕಪ್ ಫೈನಲ್ಸ್ 2020 ಅನ್ನು ಮುಂದೂಡಲು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಮತ್ತು ಡೆನ್ಮಾರ್ಕ್ ಆಯೋಜಕರು ನಿರ್ಧರಿಸಿದ್ದಾರೆ,' ಎಂದು ಬಿಡಬ್ಲ್ಯೂಎಫ್ ಹೇಳಿಕೆಯ ಮೂಲಕ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications