ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಇತಿಹಾಸದಲ್ಲಿ ಪದಕ ಗೆದ್ದಿರುವ ಭಾರತೀಯರ ಪಟ್ಟಿ

1977ರಲ್ಲಿ ಆರಂಭವಾದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಕಳೆದ ವರ್ಷ ನಡೆದ ಆವೃತ್ತಿಯವರೆಗೂ ಒಟ್ಟು 26 ಬಾರಿ ಯಶಸ್ವಿಯಾಗಿ ಜರುಗಿದೆ.
ಇನ್ನು ಈ ವರ್ಷದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಜಪಾನ್ ದೇಶದ ಟೋಕಿಯೋ ನಗರದಲ್ಲಿರುವ ಟೋಕಿಯೋ ಜಿಮ್ನೇಸಿಯನ್‌ನಲ್ಲಿ ನಡೆಯಲಿದೆ. ಆಗಸ್ಟ್ 22ರಂದು ಆರಂಭವಾಗಲಿರುವ ಈ 27ನೇ ಆವೃತ್ತಿಯ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಟೂರ್ನಿ ಆಗಸ್ಟ್ 28ರಂದು ನಡೆಯಲಿರುವ ಫೈನಲ್ ಹಣಾಹಣಿಗಳ ಮೂಲಕ ಮುಕ್ತಾಯಗೊಳ್ಳಲಿದೆ.
ಆಗಸ್ಟ್ 22 ಹಾಗೂ 23ರಂದು ಮೊದಲ ಸುತ್ತಿನ ಪಂದ್ಯಗಳು ಜರುಗಿದರೆ ನಂತರದ ದಿನಗಳಲ್ಲಿ ದ್ವಿತೀಯ ಹಾಗೂ ತೃತೀಯ ಸುತ್ತುಗಳ ಪಂದ್ಯ, ಕ್ವಾರ್ಟರ್ ಫೈನಲ್ ಸುತ್ತಿನ ಪಂದ್ಯಗಳು ಹಾಗೂ ಸೆಮಿ ಫೈನಲ್ ಸುತ್ತಿನ ಪಂದ್ಯಗಳು ಜರುಗಲಿವೆ.
ಇನ್ನು ಈ ಬಾರಿಯ ಟೂರ್ನಿಯಲ್ಲಿ ಪದಕ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದ ಪಿವಿ ಸಿಂಧು ಗಾಯದ ಸಮಸ್ಯೆಯಿಂದಾಗಿ ಟೂರ್ನಿಗೆ ಅಲಭ್ಯರಾಗಿದ್ದು, ಟೂರ್ನಿಯಲ್ಲಿ ಭಾರತದ 6 ಸಿಂಗಲ್ಸ್ ಹಾಗೂ 10 ಡಬಲ್ಸ್ ಆಟಗಾರರು ಭಾಗವಹಿಸಲಿದ್ದಾರೆ. ಈ ಭಾರತೀಯ ಆಟಗಾರರು ಸೇರಿದಂತೆ ಟೂರ್ನಿಯಲ್ಲಿ 64 ಪುರುಷ ಹಾಗೂ 48 ಮಹಿಳಾ ಬ್ಯಾಡ್ಮಿಂಟನ್ ಪ್ಲೇಯರ್ಸ್ ಸೇರಿದಂತೆ ಒಟ್ಟು 112 ಸಿಂಗಲ್ಸ್ ಬ್ಯಾಡ್ಮಿಂಟನ್ ಪ್ಲೇಯರ್ಸ್ ಮತ್ತು 144 ಡಬಲ್ಸ್ ಜೋಡಿಗಳು ವಿಶ್ವದ ಮೂಲೆ ಮೂಲೆಗಳಿಂದ ಟೂರ್ನಿಗೆ ಆಗಮಿಸಲಿದ್ದಾರೆ.
ಇನ್ನು ಇಷ್ಟು ವರ್ಷ ನಡೆದಿರುವ ಚಾಂಪಿಯನ್ ಶಿಪ್ ಪೈಕಿ ಭಾರತದ ಪರ ಪದಕ ಗೆದ್ದಿರುವ ಆಟಗಾರರ ಸಂಪೂರ್ಣ ಪಟ್ಟಿ ಕೆಳಕಂಡಂತಿದೆ.
1983 - ಪ್ರಕಾಶ್ ಪಡುಕೋಣೆ (ಕಂಚು)
2011 - ಅಶ್ವಿನಿ ಪೊನ್ನಪ್ಪ / ಜ್ವಾಲಾ ಗುಟ್ಟಾ (ಕಂಚು)
2013 - ಪಿವಿ ಸಿಂಧು (ಕಂಚು)
2014 - ಪಿವಿ ಸಿಂಧು (ಕಂಚು)
2015 - ಸೈನಾ ನೆಹ್ವಾಲ್ (ಬೆಳ್ಳಿ)
2017 - ಪಿವಿ ಸಿಂಧು (ಬೆಳ್ಳಿ), ಸೈನಾ ನೆಹ್ವಾಲ್ (ಕಂಚು)
2018 - ಪಿವಿ ಸಿಂಧು (ಬೆಳ್ಳಿ)
2019 - ಪಿವಿ ಸಿಂಧು (ಚಿನ್ನ), ಬಿ ಸಾಯಿ ಪ್ರಣೀತ್ (ಕಂಚು)
2021 - ಕಿಡಂಬಿ ಶ್ರೀಕಾಂತ್ (ಬೆಳ್ಳಿ), ಲಕ್ಷ್ಯ ಸೇನ್ (ಕಂಚು )
ಹೀಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಇತಿಹಾಸದಲ್ಲಿ 1 ಚಿನ್ನದ ಪದಕ, 4 ಬೆಳ್ಳಿ ಪದಕಗಳು ಹಾಗೂ 7 ಕಂಚಿನ ಪದಕಗಳನ್ನು ಗೆದ್ದಿರುವ ಭಾರತ ಒಟ್ಟಾರೆ ಪದಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications