BWF World Championship 2023: ಕ್ವಾರ್ಟರ್ ಫೈನಲ್‌ಗೆ ಪ್ರಣಯ್, ಲಕ್ಷ್ಯ ಸೇನ್‌ಗೆ ಆಘಾತ
ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಆಟಗಾರರು ಪದಕದ ಆಸೆಯನ್ನು ಚಿಗುರಿಸಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ ಹಾಗೂ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಗುರುವಾರ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್ 16 ರ ಸುತ್ತಿನಲ್ಲಿಯೂ ಭರ್ಜರಿ ಪ್ರದರ್ಶನ ನೀಡಿ ಗೆದ್ದರು. ಕ್ವಾರ್ಟರ್ ಫೈನಲ್‌ಗಾಗಿ ನಡೆದ ಹೋರಾಟದಲ್ಲಿ ಒಂಬತ್ತನೇ ಶ್ರೇಯಾಂಕದ ಎಚ್‌ಎಸ್ ಪ್ರಣಯ್ ಮೂರು ಗೇಮ್‌ಗಳಲ್ಲಿ ವಿಶ್ವದ ಏಳನೇ ಶ್ರೇಯಾಂಕದ ಸಿಂಗಾಪುರದ ಲೋಹ್ ಕೀನ್ ಯೂ ಅವರನ್ನು 18-21, 21-15, 19-21 ರಿಂದ ಸೋಲಿಸಿ ಪಂದ್ಯಾವಳಿಯಲ್ಲಿ ಮುನ್ನಡೆ ಸಾಧಿಸಿದರು. ಈ ಮೂಲಕ ಮಾಜಿ ಚಾಂಪಿಯನ್ ಸಿಂಗಾಪುರದ ಲೋಹ್ ವಿರುದ್ಧ 4ನೇ ಬಾರಿ ಜಯ ಸಾಧಿಸಿದರು.

ಜಿದ್ದಾಜಿದ್ದಿನಿಂದ ಕೂಡಿದ್ದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರಣಯ್ ಅಮೋಘ ಆಟದ ಪ್ರದರ್ಶನ ನೀಡಿದರು. ಮೊದಲ ಗೇಮ್ ನ ಆರಂಭದಲ್ಲಿ ಅಂಕದ ಬೇಟೆಯಲ್ಲಿ ಸಿಂಗಾಪುರ ಆಟಗಾರ ಮೇಲುಗೈ ಸಾಧಿಸಿದರೂ ಸಹ, ನಂತರ ಪ್ರಣಯ್ ಭರ್ಜರಿ ಪ್ರದರ್ಶನ ನೀಡಿ ಗೇಮ್ ತಮ್ಮದಾಗಿಸಿಕೊಂಡರು. 15-16 ರಿಂದ ಒಂದು ಹಂತದಲ್ಲಿ ಹಿನ್ನಡೆ ಅನುಭಿಸುತ್ತಿದ್ದ ಪ್ರಣಯ್ ಸತತ ಅಂಕಗಳನ್ನು ಕಲೆ ಹಾಕಿದರು. ಎರಡನೇ ಗೇಮ್‌ನಲ್ಲಿ ಪ್ರಣಯ್ ನಿರಾಸೆ ಅನುಭವಿಸಿದರು.
ಮೂರನೇ ಗೇಮ್ ನಲ್ಲಿ ತಮ್ಮ ಕ್ಷಮತೆಯನ್ನು ಪ್ರದರ್ಶಿಸಿದ ಪ್ರಣಯ್ ಅಬ್ಬರಿಸಿದರು. ಮೊದಲಿನಿಂದಲೂ ಅಂಕದ ಬೇಟೆಯಲ್ಲಿ ಮುನ್ನಡೆ ಕಾಯ್ದುಕೊಂಡರು. ಅಲ್ಲದೆ ತಮ್ಮ ಶಿಸ್ತು ಬದ್ಧ ಆಟವನ್ನು ಪ್ರದರ್ಶಿಸಿದರು. ಒಂದು ಹಂತದಲ್ಲಿ 14-14, 17-17 ಹಾಗೂ 19-19 ಅಂಕಗಳಿಂದ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಪ್ರಣಯ್ ಸ್ಥಿರ ಆಟದ ಮೂಲಕ ಗೆಲುವು ಸಾಧಿಸಿದರು.
ಇನ್ನೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯ ಸೇನ್ ನಿರಾಸೆ ಅನುಭವಿಸಿದರು. ಲಕ್ಷ್ಯ 14-21, 21-16, 13-21 ರಿಂದ ಥಾಯ್ಲೆಂಡ್‌ನ ಕುನ್ಲವುಟ್ ವಿಟಿಡ್ಸಾರ್ನ್ ವಿರುದ್ಧ ಸೋಲು ಕಂಡರು.
ಸಾತ್ವಿಕ್-ಚಿರಾಗ್ ಜೋಡಿ ಅಬ್ಬರ
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಇಂಡೋನೇಷ್ಯಾದ ಲಿಯೊ ರೋಲಿ ಕಾರ್ನಾಂಡೋ ಮತ್ತು ಡೇನಿಯಲ್ ಮಾರ್ಟಿನ್ ಜೋಡಿಯನ್ನು 2-1 ಅಂತರದಿಂದ ಸೋಲಿಸಿದರು. ಹೋರಾಟ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು. ಸಾತ್ವಿಕ್ ಮತ್ತು ಚಿರಾಗ್ ಆಕ್ರಮಣಕಾರಿ ಆಟ ಪ್ರದರ್ಶಿಸಲು ಬಹಳ ಎಚ್ಚರಿಕೆಯಿಂದ ಆಡಿದರು.
ಚಿರಾಗ್ ಅದ್ಭುತ ಪ್ರದರ್ಶನ ನೀಡಿ ದಾಳಿಯನ್ನು ರಕ್ಷಿಸಿದರು. ಎದುರಾಳಿಯ ತಪ್ಪಿನ ಲಾಭ ಪಡೆಯುವ ಜತೆಗೆ ಪಾಯಿಂಟ್ಸ್ ಗಳನ್ನು ಬಾಚಿಕೊಂಡರು. ಸಾತ್ವಿಕ್-ಚಿರಾಗ್ ನಿಧಾನಗತಿಯ ಆರಂಭವನ್ನು ಹೊಂದಿದ್ದರು. ಆದರೆ ಶೀಘ್ರದಲ್ಲೇ ಇಬ್ಬರೂ ಆಟದ ಮೇಲೆ ಹಿಡಿತ ಸಾಧಿಸಿದರು. ಈ ಜೋಡಿಯು ಕ್ರಾಸ್ ಕೋರ್ಟ್ ಆಟವನ್ನು ಆಡಿತು.
ಇಂಡೋನೇಷ್ಯಾ ಜೋಡಿಯು ಕೆಲವು ಅಂಕಗಳೊಂದಿಗೆ ಕಮ್ ಬ್ಯಾಕ್ ಮಾಡಲು ಪ್ರಯತ್ನಿಸಿದರೂ ಭಾರತದ ರಕ್ಷಣಾ ಕೋಟೆಯನ್ನು ಬೇಧಿಸಲು ಆಗಲಿಲ್ಲ. ಸಾತ್ವಿಕ್-ಚಿರಾಗ್ 15-10 ರಿಂದ ಮುಂದಿದ್ದರು. ವೇಗವಾಗಿ ಏರುತ್ತಿರುವ ಬ್ಯಾಕ್‌ಹ್ಯಾಂಡ್ ಭಾರತೀಯರಿಗೆ 6 ಗೇಮ್ ಪಾಯಿಂಟ್‌ಗಳನ್ನು ನೀಡಿತು ಮತ್ತು 21-15 ಗೆಲುವು ಸಾಧಿಸಿತು.
ಎರಡನೇ ಗೇಮ್‌ನಲ್ಲಿ, ಸಾತ್ವಿಕ್-ಚಿರಾಗ್ ಉತ್ತಮವಾಗಿ ಆರಂಭಕಂಡರೂ, ಸೋಲು ಅನುಭವಿಸ ಬೇಕಾಯಿತು. ಮೂರನೇ ಗೇಮ್ ನಲ್ಲಿ ಸಾತ್ವಿಕ್-ಚಿರಾಗ್ ಸುಲಭವಾಗಿ ಗೇಮ್ ಗೆದ್ದುಕೊಂಡರು. ಮೊದಲು ಸ್ಕೋರ್ 4-4ರಲ್ಲಿ ಸಮಬಲವಾಗಿತ್ತು. ನಂತರ ಈ ಜೋಡಿಯು 21-9 ರಿಂದ ಸುಲಭವಾಗಿ ಗೇಮ್ ಗೆದ್ದುಕೊಂಡಿತು. ಇದರೊಂದಿಗೆ ಈ ಜೋಡಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ.
ಟ್ರೀಸಾ-ಗಾಯತ್ರಿ ಆಘಾತ
ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ತಲುಪಿದ್ದ ಮಹಿಳೆಯರ ಡಬಲ್ಸ್ ಜೋಡಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ 14-21, 9-21 ರಿಂದ ಚೀನಾದ ಅಗ್ರ ಶ್ರೇಯಾಂಕದ ಜೋಡಿಯಾದ ಚೆನ್ ಕ್ವಿಂಗ್ ಚೆನ್ ಮತ್ತು ಜಿಯಾ ಯಿ ಫ್ಯಾನ್ ವಿರುದ್ಧ 42 ನಿಮಿಷಗಳಲ್ಲಿ ಸೋತರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications