ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಭಾರತೀಯರ ಪಂದ್ಯಗಳು ಹಾಗೂ ನೇರಪ್ರಸಾರದ ಮಾಹಿತಿ

ಇದೇ ತಿಂಗಳ 22ರಿಂದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿ ಆರಂಭವಾಗಲಿದ್ದು, ಈ ಬಾರಿಯ ಚಾಂಪಿಯನ್‌ಶಿಪ್ ಜಪಾನ್ ದೇಶದ ಟೋಕಿಯೋ ನಗರದಲ್ಲಿರುವ ಟೋಕಿಯೋ ಜಿಮ್ನೇಸಿಯನ್‌ನಲ್ಲಿ ನಡೆಯಲಿದೆ. ಆಗಸ್ಟ್ 22 ಹಾಗೂ 23ರಂದು ನಡೆಯಲಿರುವ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳ ಮೂಲಕ ಈ ಬಾರಿಯ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಚಾಲನೆ ಪಡೆದುಕೊಳ್ಳಲಿದ್ದು, ನಂತರದ ದಿನಗಳಲ್ಲಿ ಎರಡನೇ ಹಾಗೂ ಮೂರನೇ ಸುತ್ತಿನ ಪಂದ್ಯಗಳು, ಕ್ವಾರ್ಟರ್ ಫೈನಲ್ ಸುತ್ತಿನ ಪಂದ್ಯಗಳು ಹಾಗೂ ಸೆಮಿ ಫೈನಲ್ ಪಂದ್ಯಗಳು ನಡೆಯಲಿವೆ. ಇನ್ನು ಆಗಸ್ಟ್ 28ರ ಭಾನುವಾರದಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಟೂರ್ನಿಗೆ ತೆರೆ ಬೀಳಲಿದೆ.
ಇನ್ನು ಈ ಟೂರ್ನಿಯಲ್ಲಿ 64 ಪುರುಷ ಹಾಗೂ 48 ಮಹಳಾ ಬ್ಯಾಡ್ಮಿಂಟನ್ ಪ್ಲೇಯರ್ಸ್ ಸೇರಿದಂತೆ ಒಟ್ಟು 112 ಸಿಂಗಲ್ಸ್ ಬ್ಯಾಡ್ಮಿಂಟನ್ ಪ್ಲೇಯರ್ಸ್ ಮತ್ತು 144 ಡಬಲ್ಸ್ ಜೋಡಿಗಳು ವಿಶ್ವದ ಮೂಲೆ ಮೂಲೆಗಳಿಂದ ಆಗಮಿಸಲಿದ್ದಾರೆ. ಭಾರತದ ಪರ 6 ಸಿಂಗಲ್ಸ್ ಹಾಗೂ 10 ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರರು ಭಾಗವಹಿಸಲಿದ್ದಾರೆ. ಹೀಗೆ ಎಂಟು ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಭಾರತೀಯರ ಪಂದ್ಯಗಳ ಪಟ್ಟಿ ಹಾಗೂ ನೇರಪ್ರಸಾರದ ಮಾಹಿತಿ ಕೆಳಕಂಡಂತಿದೆ.

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ವೇಳಾಪಟ್ಟಿ
ಮೊದಲ ಸುತ್ತು: ಸೋಮವಾರ, ಆಗಸ್ಟ್ 22, 2022 ಮತ್ತು ಮಂಗಳವಾರ, ಆಗಸ್ಟ್ 23, 2022
ಎರಡನೇ ಸುತ್ತು: ಬುಧವಾರ, ಆಗಸ್ಟ್ 24, 2022
ಮೂರನೇ ಸುತ್ತು: ಗುರುವಾರ, ಆಗಸ್ಟ್ 25, 2022
ಕ್ವಾರ್ಟರ್‌ಫೈನಲ್‌ಗಳು: ಶುಕ್ರವಾರ, ಆಗಸ್ಟ್ 26, 2022
ಸೆಮಿಫೈನಲ್‌ಗಳು: ಶನಿವಾರ, ಆಗಸ್ಟ್ 27, 2022
ಫೈನಲ್‌ಗಳು: ಭಾನುವಾರ, ಆಗಸ್ಟ್ 28, 2022

ಸಿಂಗಲ್ಸ್ ಮೊದಲ ಸುತ್ತಿನ ಭಾರತೀಯರ ಹಣಾಹಣಿಗಳು
ಭಾರತ ಪುರುಷರ ಸಿಂಗಲ್ಸ್:
● ಸಾಯಿ ಪ್ರಣೀತ್ ವಿರುದ್ಧ ಚೌ ಟಿಯೆನ್-ಚೆನ್
● ಕಿಡಂಬಿ ಶ್ರೀಕಾಂತ್ ವಿರುದ್ಧ ನ್ಯಾಟ್ ನ್ಗುಯೆನ್
● ಲಕ್ಷ್ಯ ಸೇನ್ ವಿರುದ್ಧ ಹ್ಯಾನ್ಸ್-ಕ್ರಿಸ್ಟಿಯನ್ ಸೋಲ್ಬರ್ಗ್ ವಿಟಿಂಗ್ಹಸ್
● ಎಚ್ಎಸ್ ಪ್ರಣಯ್ ವಿರುದ್ಧ ಲುಕಾ ವ್ರೇಬರ್
ಭಾರತ ಮಹಿಳಾ ಸಿಂಗಲ್ಸ್:
ಮಾಳವಿಕಾ ಬನ್ಸೋಡ್ vs ಲೈನ್ ಕ್ರಿಸ್ಟೋಫರ್ಸನ್
ಸೈನಾ ನೆಹ್ವಾಲ್ vs ಚೆಯುಂಗ್ ನ್ಗಾನ್ ಯಿ

ಮೊದಲ ಸುತ್ತಿನ ಭಾರತೀಯರ ಡಬಲ್ಸ್ ಹಾಗೂ ಮಿಶ್ರ ತಂಡಗಳ ಪಂದ್ಯಗಳು
ಪುರುಷರ ಡಬಲ್ಸ್ ಮೊದಲ ಸುತ್ತಿನ ಪಂದ್ಯಗಳು:
● ಎಂಆರ್ ಅರ್ಜುನ್ / ಧ್ರುವ ಕಪಿಲಾ ವಿರುದ್ಧ ಸುಪಕ್ ಜೋಮ್ಕೋಹ್ / ಕಿಟ್ಟಿನುಪಾಂಗ್ ಕೆಡ್ರೆನ್
● ಮನು ಅಟ್ರಿ / ಬಿ ಸುಮೀತ್ ರೆಡ್ಡಿ ವಿರುದ್ಧ ಹಿರೋಕಿ ಒಕಮುರಾ / ಮಸಾಯುಕಿ ಒನೊಡೆರಾ
● ಕೃಷ್ಣ ಪ್ರಸಾದ್ ಗರಗಾ / ವಿಷ್ಣುವರ್ಧನ್ ಗೌಡ್ ಪಂಜಾಲ ವಿರುದ್ಧ ಫ್ಯಾಬಿಯನ್ ಡೆಲ್ರೂ / ವಿಲಿಯಂ ರೊಂಡ್‌ವಿಲ್ಟ್
● ವಿಲಿಯಂ ರಾಜ್‌ವಿಲಿ ಸೋಲಿಸ್ ಜೊನಾಥನ್ / ಅನಿಬಲ್ ಮಾರೊಕ್ವಿನ್ ಅಥವಾ ಜೊನಾಥನ್ ಕರ್ಟಿನ್ / ಡೈಲನ್ ಸೊಯೆಡ್ಜಸಾ)
ಮಹಿಳಾ ಡಬಲ್ಸ್ ಮೊದಲ ಸುತ್ತಿನ ಪಂದ್ಯಗಳು:
● ಪೂಜಾ ದಂಡು / ಸಂಜನಾ ಸಂತೋಷ್ ವಿರುದ್ಧ ಇನೆಸ್ ಲೂಸಿಯಾ ಕ್ಯಾಸ್ಟಿಲ್ಲೊ ಸಲ್ಜಾರ್ / ಪೌಲಾ ದ ಲೀಗಲ್ ಟವರ್
● ಅಶ್ವಿನಿ ಪೊನ್ನಪ್ಪ / ಸಿಕ್ಕಿ ರೆಡ್ಡಿ ವಿರುದ್ಧ ಅಮೀನತ್ ನಬೀಹಾ ಅಬ್ದುಲ್ ರಜಾಕ್ / ಫಹಿಮತ್ ನಬಾಹಾ ಅಬ್ದುಲ್ ರಜಾಕ್
● ಟ್ರೀಸಾ ಜಾಲಿ / ಗಾಯತ್ರಿ ಗೋಪಿಚಂದ್ ವಿರುದ್ಧ ಲೋ ಯೀನ್ ಯುವಾನ್ / ವ್ಯಾಲೆರಿ ಸಿಯೋವ್
● ಅಶ್ವಿನಿ ಭಟ್ ಕೆ / ಶಿಖಾ ಗೌತಮ್ ವಿರುದ್ಧ ಮಾರ್ಟಿನಾ ಕೊರ್ಸಿನಿ / ಜುಡಿತ್ ಮೈರ್
ಭಾರತ ಮಿಶ್ರ ಮೊದಲ ಸುತ್ತಿನ ಪಂದ್ಯಗಳು
● ವೆಂಕಟ್ ಗೌರವ್ ಪ್ರಸಾದ್ / ಜೂಹಿ ದೇವಾಂಗನ್ vs ಗ್ರೆಗೊರಿ ಮೈರ್ಸ್ / ಜೆನ್ನಿ ಮೋರೆ
● ಇಶಾನ್ ಭಟ್ನಾಗರ್ / ತನಿಶಾ ಕ್ರಾಸ್ಟೊ vs ಪ್ಯಾಟ್ರಿಕ್ ಸ್ಕೀಲ್ / ಫ್ರಾನ್ಜಿಸ್ಕಾ ವೋಕ್ಮನ್

ನೇರಪ್ರಸಾರ
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಈವೆಂಟ್‌ಗಳ ಪ್ರಸಾರ ಹಕ್ಕುಗಳು ವಾಯಾಕಾಮ್18ಗೆ ಸೇರಿದ್ದು, ಸ್ಪೋರ್ಟ್ಸ್ಅ 18-1 ಮತ್ತು ವೂಟ್ ಸೆಲೆಕ್ಟ್‌ನಲ್ಲಿ ಭಾರತದಲ್ಲಿ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ನ್ನು ವೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications