ಬ್ಯಾಡ್ಮಿಂಟನ್: ಶ್ರೇಯಾಂಕಪಟ್ಟಿಯಲ್ಲಿ ಪಿವಿ ಸಿಂಧು ವಿಶೇಷ ಸಾಧನೆ: ಟಾಪ್ 10 ಸನಿಹದಲ್ಲಿ ಪ್ರಣಯ್

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು BWF ಶ್ರೇಯಾಂಕ ಪಟ್ಟಿಯಲ್ಲಿ ಮತ್ತೊಮ್ಮೆ ವಿಶೇಷ ಸಾಧನೆ ಮಾಡಿದ್ದಾರೆ. 3 ವರ್ಷಗಳ ನಂತರ ಮೊದಲ ಬಾರಿಗೆ ಮಹಿಳಾ ಸಿಂಗಲ್ಸ್ ಶಟ್ಲರ್‌ಗಳ ಪಟ್ಟಿಯಲ್ಲಿ ಟಾಪ್ 5 ಪಟ್ಟಿಯಲ್ಲಿ ಪಿವಿ ಸಿಂಧು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಿಂಧು ರಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಕ್ಯಾರೊಲಿನಾ ಮರಿನ್ ಅವರನ್ನು ಹಿಂದಿಕ್ಕಿದ್ದು ಪರಿಷ್ಕೃತ ಪಟ್ಟಿಯಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ 2019ರ ಸೆಪ್ಟೆಂಬರ್ ತಿಂಗಳಿನಲ್ಲಿ ಪಿವಿ ಸಿಂಧು ಟಾಪ್ 5 ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರು.
ಇನ್ನು ಕಳೆದ ಆಗಸ್ಟ್ ತಿಂಗಳಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಬಳಿಕ ಪಿವಿ ಸಿಂಧು ಯಾವುದೇ ಟೂರ್ನಿಯನ್ನು ಭಾಗವಹಿಸಲು ಸಾಧ್ಯವಾಗಿಲ್ಲ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅದಾದ ಬಳಿಕ ಗಾಯದ ಕಾರಣದಿಂದಾಗಿ ಟೋಕಿಯೋದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಿಂದ ಗಾಯದ ಕಾರಣ ಹೊರಗುಳಿದರು.
ಇನ್ನು ಬ್ಯಾಡ್ಮಿಂಟನ್ ವಿಶ್ವ ಟೂರ್‌ನಲ್ಲಿ ಯುರೋಪಿಯನ್ ವಿಭಾಗಕ್ಕೆ ಪ್ರವಾಸ ಕೈಗೊಳ್ಳಲು ಪಿವಿ ಸಿಂಧುಗೆ ಸಾಧ್ಯವಾಗಲಿಲ್ಲ. ಇಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೈನಾ ನೆಹ್ವಾಲ್ ಭಾರತ ಮಹಿಳೆಯರ ಸಿಂಗಲ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಸಿಂಧು ತನ್ನ ದಕ್ಷಿಣ ಕೊರಿಯಾದ ಕೋಚ್ ಪಾರ್ಕ್ ಟೇ ಸಾಂಗ್ ಅವರೊಂದಿಗೆ ತರಬೇತಿಗೆ ವಾಪಾಸಾಗಿದ್ದು ಈ ಬಗ್ಗೆ ಪಿವಿ ಸಿಂಧು ಕೋಚ್ ಸಾಮಾಜಿಕ ಜಾಲತಾಣದಲ್ಲಿ ಫೊಟೋವೊಂದನ್ನು ಹಂಚಿಕೊಂಡಿದ್ದರು.
ಈ ಮಧ್ಯೆ ಪುರುಷರ ಸಿಂಗಲ್ಸ್ ಶಟ್ಲರ್‌ಗಳ ಪರಿಷ್ಕೃತ BWF ಶ್ರೇಯಾಂಕ ಪಟ್ಟಿಯಲ್ಲಿ ಹೆಚ್‌ಎಸ್ ಪ್ರಣಯ್ ಉತ್ತಮ ಸಾಧನೆ ಮಾಡಿದ್ದಾರೆ. ಪ್ರಣಯ್ 12 ನೇ ಸ್ಥಾನಕ್ಕೆ ಜಿಗಿದಿದ್ದು ವರ್ಲ್ಡ್ ಟೂರ್ ಫೈನಲ್ಸ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ಮತ್ತೋರ್ವ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರಿಗಿಂತ ಒಂದು ಸ್ಥಾನ ಹಿಂದಿದ್ದಾರೆ. ಇನ್ನು ಲಕ್ಷ್ಯ ಸೇನ್ 8ನೇ ಶ್ರೇಯಾಂಕದಲ್ಲಿಯೇ ಮುಂಇವರಿಇದ್ದು ಭಾರತದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಶಟ್ಲರ್ ಆಗಿ ಮುಂದುವರಿದಿದ್ದಾರೆ.
ಕುತೂಹಲಕಾರಿ ಸಂಗತಿಯಂದರೆ ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್ ಮತ್ತು ಪ್ರಣಯ್ ಯುರೋಪಿಯನ್ ಪ್ರವಾಸದಲ್ಲಿ ಭಾರತ ತಂಡದ ಭಾಗವಾಗಿದ್ದಾರೆ. ಕಳೆದ ವಾರ ನಡೆದ ಡೆನ್ಮಾರ್ಕ್ ಓಪನ್‌ನಲ್ಲಿ ಶ್ರೀಕಾಂತ್ ಆರಂಭಿಕ ಪಂದ್ಯದಲ್ಲಿಯೇ ಸೋಲು ಅನುಭವಿಸಿ ನಿರ್ಗಮಿಸಿದರೆ ಲಕ್ಷ್ಯ ಸೇನ್ ಮತ್ತು ಪ್ರಣಯ್ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದರು. ಈ ಮುಖಾಮುಖಿಯಲ್ಲಿ ಲಕ್ಷ್ಯ ಸೇನ್ ಪ್ರಣಯ್‌ರನ್ನು ಸೋಲಿಸುವಲ್ಲಿ ಯಶಸ್ವುಯಾಗಿದ್ದರು. ಆದರೆ ನಂತರ ಲಕ್ಷ್ಯ ಸೇನ್ ಕ್ವಾರ್ಟರ್-ಫೈನಲ್‌ನಲ್ಲಿ ಜಪಾನ್‌ನ ಕೊಡೈ ನರೋಕಾ ವಿರುದ್ಧ ಸೋಲು ಅನುಭವಿಸಿ ಹೋರಾಟ ಅಂತ್ಯಗೊಳಿಸಿದರು.
ಇನ್ನು ಭಾರತದ ಅಗ್ರ ಶ್ರೇಯಾಂಕದ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 8ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications