Canada Open 2023: ಫೈನಲ್‌ಗೆ ಪ್ರವೇಶಿಸಿದ ಲಕ್ಷ್ಯ ಸೇನ್: ಪಿವಿ ಸಿಂಧು ಸೆಮಿಫೈನಲ್‌ನಿಂದ ಔಟ್
ಭಾರತೀಯ ಯುವ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಕೆನಡಾ ಓಪನ್‌ನಲ್ಲೊ ಭರ್ಜರಿ ಪ್ರದರ್ಶನ ಮುಂದುವರಿಸಿದ್ದು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಸೆಮಿಫೈನಲ್‌ನಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೋ ವಿರುದ್ಧ ಜಯಗಳಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇದು ಸುಮಾರು ಒಂದು ವರ್ಷದಲ್ಲಿ ಮೊದಲ ಬಾರಿಗೆ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್‌ನಲ್ಲಿ ಸೇನ್ ಕಾಣಿಸಿಕೊಂಡಂತಾಗಿದೆ. ಆಗಸ್ಟ್ 2022 ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನ ಅವರ ಕೊನೆಯ ಫೈನಲ್ ಆಗಿತ್ತು.
ಸೇನ್ ಪ್ರಸ್ತುತ ವಿಶ್ವದ 19ನೇ ಶ್ರೇಯಾಂಕದ ಆಟಗಾರನಾಗಿದ್ದು 21-17, 21-14 ಅಂಕಗಳ ನೇರ ಗೇಮ್‌ಗಳಲ್ಲಿ 11ನೇ ಶ್ರೇಯಾಂಕದ ನಿಶಿಮೊಟೊ ಅವರನ್ನು ಮಣಿಸಿದ್ದಾರೆ. ಈ ಮೂಲಕ ಈ ಇಬ್ಬರ ಹೆಡ್ ಟು ಹೆಡ್ ಅಂಕಿಅಂಶಗಳಲ್ಲಿ 2-1 ಅಂತರದ ಮುನ್ನಡೆಯನ್ನು ಭಾರತೀಯ ಶಟ್ಲರ್ ಪಡೆದುಕೊಂಡಿದ್ದಾರೆ. 44 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ ಲಕ್ಷ್ಯ ಸೇನ್.

ಈ ಋತುವಿನಲ್ಲಿ ಥಾಯ್ಲೆಂಡ್ ಓಪನ್‌ನಲ್ಲಿ ಮೂರನೇ ಸ್ಥಾನ ಗಳಿಸಿದ್ದೇ ಸೇನ್ ಅವರ ಅತ್ಯುತ್ತಮ ಪ್ರದರ್ಶನ. ಆದರೆ ಈಗ ಅವರು ಕೆನಡಾ ಓಪನ್ ಪ್ರಶಸ್ತಿಯನ್ನು ಪಡೆಯುವ ಅವಕಾಶವನ್ನು ಹೊಂದಿದ್ದಾರೆ. ಭಾನುವಾರ ರಾತ್ರಿ ನಡೆಯುವ ಫೈನಲ್‌ನಲ್ಲಿ ಎರಡನೇ ಸೆಮಿಫೈನಲ್‌ನಲ್ಲಿ ಕೊಡೈ ನರೋಕಾ ವಿರುದ್ಧ ಗೆದ್ದ ಲಿ ಶಿ ಫೆಂಗ್ ವಿರುದ್ಧ ಪ್ರಶಸ್ತಿಗಾಗಿ ಕಾದಾಡಲಿದ್ದಾರೆ.
ಮತ್ತೊಂದೆಡೆ ಭಾರತದ ಅನುಭವಿ ಶಟ್ಲರ್ ಪಿವಿ ಸಿಂಧು ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ್ತಿ ಅಕಾನೆ ಯಮಗುಚಿ ವಿರುದ್ಧ ಸೋಲುಕಂಡು ನಿರಾಸೆ ಅನುಭವಿಸಿದ್ದಾರೆ. ಪ್ರಸ್ತುತ 15ನೇ ಶ್ರೇಯಾಂಕದಲ್ಲಿರುವ ಸಿಂಧು 14-21, 15-21 ಅಂಕಗಳ ನೇರ ಗೇಮ್‌ಗಳಲ್ಲಿ ಸೋತರು. ಇದು ಸಿಂಗಾಪುರ ಓಪನ್‌ನ ಆರಂಭಿಕ ಸುತ್ತಿನಲ್ಲಿ ಸೋತ ಬಳಿಕ ಯಮಗುಚಿ ವಿರುದ್ಧ ಭಾರತೀಯ ಶಟ್ಲರ್ ಸಿಂಧು ಅವರ ಸತತ ಎರಡನೇ ಸೋಲಾಗಿದೆ.
ವಿಶ್ವ ಪ್ರವಾಸದಲ್ಲಿ ಸದ್ಯ ಉತ್ತಮ ಫಾರ್ಮ್‌ನಲ್ಲಿಲ್ಲದ ಸಿಂಧು ಕಳಪೆ ಫಾರ್ಮ್‌ನಿಂದ ಹೊರಬರಲು ಹೋರಾಡುತ್ತಿದ್ದಾರೆ. ಗಾಯದ ಕಾರಣ ವಿರಾಮ ಪಡೆದುಕೊಂಡಿದ್ದ ಅವರು ಕಳೆದ ಜನವರಿಯಲ್ಲಿ ಕಮ್‌ಬ್ಯಾಕ್ ಮಾಡದ ಬಳಿಕ ಯಾವುದೇ ಪ್ರಶಸ್ತಿಗಳನ್ನು ಗೆದ್ದಿಲ್ಲ. ಪಾದದ ಗಾಯಕ್ಕೆ ಒಳಗಾಗುವ ಮೊದಲು ಆಗಸ್ಟ್ 2022ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗೆಲುವು ಸಾಧಿಸಿದ ಬಳಿಕ ಅಂಥಾ ಸಾಧನೆ ಪುನರಾವರ್ತಿಸಲು ಸಾಧ್ಯವಾಗಿಲ್ಲ. ಅವರು ಮಾರಿಡ್ ಸ್ಪೇನ್ ಮಾಸ್ಟರ್ಸ್‌ನಲ್ಲಿ ರನ್ನರ್ ಅಪ್ ಫಿನಿಶ್ ಮತ್ತು ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications