ಕೆನಡಾ ಓಪನ್: ಎರಡನೇ ಸುತ್ತಿನಿಂದಲೇ ನಿರ್ಗಮಿಸಿದ ಪರುಪಲ್ಲಿ ಕಶ್ಯಪ್
ಕೆನಡಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಆರಂಭವಾಗಿದ್ದು ಭಾರತದ ಪುರುಷರ ಡಬಲ್ಸ್ ಜೋಡಿ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲ ನೇರ ಗೇಮ್‌ಗಳ ಗೆಲುವಿನೊಂದಿಗೆ ಎರಡನೇ ಸುತ್ತಿಗೆ ಪ್ರವೇಶಿಸಿಸಿದ್ದಾರೆ. ಆದರೆ ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪರುಪಲ್ಲಿ ಕಶ್ಯಪ್ ತಮ್ಮ ಸುತ್ತಿನ ಸೆಣೆಸಾಟದಲ್ಲಿ ಸೋತು ನಿರ್ಗಮಿಸಿದ್ದಾರೆ.
2021 ರ ಓರ್ಲಿಯನ್ಸ್ ಮಾಸ್ಟರ್ಸ್ ಮತ್ತು 2022 ಸೈಯದ್ ಮೋದಿ ಇಂಟರ್‌ನ್ಯಾಶನಲ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ ವಿಶ್ವದ 37 ನೇ ಶ್ರೇಯಾಂಕದ ಕೃಷ್ಣ ಮತ್ತು ವಿಷ್ಣುವರ್ಧನ್ 32ರ ಘಟ್ಟದಲ್ಲಿ ಚೈನೀಸ್ ತೈಪೆಯ ಚೆನ್ ಝಿ ರೇ ಮತ್ತು ಲು ಚೆನ್ ಅವರನ್ನು ಎದುರಿಸಿದರು. ಈ ಪಂದ್ಯದಲ್ಲಿ ಭಾರತೀಯ ಜೋಡಿ 21-14, 21-16 ಅಂತರದ ಗೆಲುವು ಸಾಧಿಸಿದ್ದಾರೆ.

ಒಲಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಮತ್ತು ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಲಕ್ಷ್ಯ ಸೇನ್ ಟೋಕಿಯೊ ಒಲಿಂಪಿಕ್ಸ್ ಬಿ ಸಾಯಿ ಪ್ರಣೀತ್ ಮತ್ತು ರುತ್ವಿಕಾ ಶಿವಾನಿ ಗಡ್ಡೆ ಅವರು ಕೂಡ ಇಂದು ಈ ಟೂರ್ನಿಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದ ಮೊದಲ ಸುತ್ತಿನ ಸೆಣೆಸಾಟಕ್ಕೆ ಸಜ್ಜಾಗಿದ್ದಾರೆ.
ಮಾಜಿ ವಿಶ್ವ ನಂ.6 ಆಟಗಾರ ಕಶ್ಯಪ್ 2018 ರಿಂದ ಬಿಡಬ್ಲ್ಯುಎಫ್ ಟೂರ್ನಿಯನ್ನು ಗೆಲ್ಲು ಸಾರ್ಧಯವಾಗಿಲ್ಲ. ಪ್ರಸ್ತುತ ಅವರು ಒಲಿಂಪಿಕ್ಸ್.ಕಾಮ್ ಪ್ರಕಾರ 189ನೇ ಶ್ರೇಯಾಂಕವನ್ನು ಹೊಂದಿದ್ದಾರೆ. ಕಶ್ಯಪ್ ಮಂಗಳವಾರ ಅರ್ಹತಾ ಸುತ್ತಿನಲ್ಲಿ ಜರ್ಮನಿಯ ವಿಶ್ವದ ನಂ. 67ರ ಕೈ ಸ್ಕೇಫರ್ ವಿರುದ್ಧ ಗೆಲುವು ಸಾಧಿಸಿದ್ದರು. ಮೊದಲ ಗೇಮ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದರೂ, ಕಶ್ಯಪ್ 21-14, 22-20 ರಲ್ಲಿ ಗೆಲ್ಲಲು ಎರಡು ಗೇಮ್ ಪಾಯಿಂಟ್‌ಗಳನ್ನು ಕಾಯ್ದುಕೊಳ್ಳಬೇಕಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications