Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೀನಾ ಓಪನ್ 2023: ಸಾತ್ವಿಕ್- ಚಿರಾಗ್ ಜೋಡಿಗೆ ಮೊದಲ ಸುತ್ತಿನಲ್ಲೇ ಆಘಾತ: ಹೋರಾಟ ಅಂತ್ಯ

ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯ ಆಟಗಾರರ ಆಘಾತಕಾರಿ ಪ್ರದರ್ಶನ ಎರಡನೇ ದಿನವೂ ಮುಂದುವರಿಯಿತು. ಮೊದಲ ದಿನದಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರೀ ನಿರಾಸೆ ಅನುಭವಿಸಿದ ಭಾರತ ಎರಡನೇ ದಿನ ಡಬಲ್ಸ್ ವಿಭಾಗದಲ್ಲಿ ಆಘಾತ ಅನುಭವಿಸಿದೆ. ಸಾತ್ವಿಕ್-ಚಿರಾಗ್ ಜೋಡಿ ಪುರುಷರ ಡಬಲ್ಸ್‌ನಲ್ಲಿ ಅನಿರೀಕ್ಷಿತ ರೀತಿಯಲ್ಲಿ ಸೋಲು ಕಂಡು ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.

ಚೀನಾ ಓಪನ್ ಟೂರ್ನಮೆಂಟ್‌ನಲ್ಲಿ ಎರಡನೇ ಸೀಡ್ ಜೋಡಿಯಾಗಿ ಸಾತ್ವಿಕ್-ಚಿರಾಗ್ ಕಣಕ್ಕಿಳಿದಿದ್ದರು. ಈ ಬಲಿಷ್ಠ ಜೋಡಿಗೆ ಮೊದಲ ಸುತ್ತಿನಲ್ಲಿ ಇಂಡೋನೇಷಿಯಾದ ಮುಹಮ್ಮದ್ ಶೋಹಿಬುಲ್ ಫಿಕ್ರಿ ಮತ್ತು ಬಗಾಸ್ ಮೌಲಾನಾ ಎದುರಾಳಿಯಾಗಿ ಸವಾಲೊಡ್ಡಿದರು. ಆದರೆ ಈ ಮುಖಾಮುಖಿಯಲ್ಲಿ ಭಾರತೀಯ ಜೋಡಿ ತೀವ್ರ ಪೈಪೊಟಿ ನೀಡಿದ್ದರೂ ಗೆಲುವು ಸಾಧ್ಯವಾಗದೆ ನಿರಾಸೆ ಅನುಭವಿಸಿದ್ದಾರೆ.

China Open 2023: Satwik-Chirag pair defeat in 1st round suffer shocking early exit

68 ನಿಮಿಷಗಳ ಕಾಲ ನಡೆದ ಈ ಪಂದ್ಯವು ಅತ್ಯಂತ ರೋಚಕವಾಗಿ ಸಾಗಿತ್ತು. ಆದರೆ ಅಂತಿಮವಾಗಿ 17-21, 21-11, 17-21 ಅಂತರದಿಂದ ಇಂಡೋನೇಷ್ಯಾ ತಂಡ ಗೆಲುವಿನ ನಗೆ ಬೀರಿತ್ತು. ಈ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಪ್ರಬಲ ಹೋರಾಟ ನಡೆಸಿ ಮೂರು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿಕೊಂಡರು. ಆದಾಗ್ಯೂ, ಅವರು ಫಿಕ್ರಿ ಮತ್ತು ಮೌಲಾನಾ ಅವರ ಸವಾಲನ್ನು ತಡೆಯಲು ಸಾಧ್ಯವಾಗಲಿಲ್ಲ. ಇಂಡೋನೇಷ್ಯಾ ಶಟ್ಲರ್‌ಗಳು ಆಟದ ಉದ್ದಕ್ಕೂ ಸ್ಥಿರವಾದ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ನಿರ್ಣಾಯಕ ಗೇಮ್‌ನಲ್ಲಿ ತಮ್ಮ ಹಿನ್ನಡೆಯನ್ನು 12-13ಕ್ಕೆ ಇಳಿಸಿಕೊಂಡರೂ ಗೇಮ್ ತಮ್ಮ ಪರವಾಗಿ ಮಾಡಿಕೊಳ್ಳಲು ವಿಫಲವಾದರು. ಅಂತಿಮವಾಗಿ 13-16 ಮತ್ತು ನಂತರ 14-18 ಅಂತರದಿಂದ ಹಿನ್ನಡೆ ಕಂಡುಬಳಿಕ ಸೋಲೊಪ್ಪಿಕೊಂಡರು. ಈ ಸೋಲು ಚೀನಾ ಓಪನ್ ಸೂಪರ್ 1000 ನಲ್ಲಿ ಭಾರತದ ಅಭಿಯಾನವನ್ನು ಅಂತ್ಯಗೊಳಿಸಿದೆ. ಏಕೆಂದರೆ N. ಸಿಕ್ಕಿ ರೆಡ್ಡಿ ಮತ್ತು ರೋಹನ್ ಕಪೂರ್ ಸೇರಿದಂತೆ ಇತರ ಭಾರತೀಯ ಶಟ್ಲರ್‌ಗಳು ಸಹ ಮೊದಲ ಸುತ್ತಿನಲ್ಲಿ ಹೋರಾಟ ಅಂತ್ಯಗೊಳಿಸಿದರು.

ಇನ್ನು ಸಿಂಗಲ್ಸ್ ವಿಭಾಗದಲ್ಲಿಯೂ ಭಾರತದ ಸ್ಟಾರ್ ಶಟ್ಲರ್‌ಗಳು ಮೊದಲ ದಿನವೇ ಭಾರೀ ನೀರಸ ಪ್ರದರ್ಶನ ನೀಡಿ ಹೊರಬಿದ್ದಿದ್ದರು. ಚೀನಾದ ಚಾಂಗ್‌ಜೌನಲ್ಲಿ ಆರಂಭವಾದ ಸೂಪರ್ 1000 ಟೂರ್ನಮೆಂಟ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿರುವ ಹೆಚ್‌ಎಸ್ ಪ್ರಣಯ್, ಲಕ್ಷ್ಯ ಸೇನ್ ಸೇರಿದಂತೆ ಪ್ರಮುಖರು ಸೋತು ಹೊರಬಿದ್ದಿದ್ದಾರೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೂ ಮುನ್ನ ಈ ರೀತಿಯ ಪ್ರದರ್ಶನ ಈಗ ಭಾರತೀಯ ಅಭಿಮಾನಿಗಳ ಪಾಳಯದಲ್ಲಿ ಕಳವಳ ಮೂಡಿಸಿದೆ.

ಎಚ್‌ಎಸ್ ಪ್ರಣಯ್ ಚೀನಾ ಓಪನ್‌ನ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ಎನ್‌ಜಿ ತ್ಸೆ ಯೋಂಗ್ ಅವರನ್ನು ಎದುರಿಸಿದ್ದರು. ಈ ಪಂದ್ಯದಲ್ಲಿ ಪ್ರಣಯ್ ಮೂರು ಗೇಮ್‌ಗಳಲ್ಲಿ ಸೋತು ಆಘಾತಕಾರಿಯಾಗಿ ಮೊದಲ ಸುತ್ತಿನಿಂದಲೇ ನಿರ್ಗಮಿಸಿದ್ದಾರೆ.

ಮತ್ತೊಂದೆಡೆ ಹಾಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ ಅವರು ಡೆನ್ಮಾರ್ಕ್‌ನ ಆ್ಯಂಡರ್ಸ್ ಆ್ಯಂಟನ್ಸೆನ್ ವಿರುದ್ಧ ಸೋಲಿನ ಕಹಿ ಅನುಭವಿಸಿದರು. ಮೂರು ಗೇಮ್‌ಗಳಲ್ಲಿ ಲಕ್ಷ್ಯ ಸೇನ್ 21-23, 21-16, 9-21 ಅಂತರದಿಂದ ಸೋತಿದ್ದು ಒಂದು ಗಂಟೆ 18 ನಿಮಿಷಗಳಲ್ಲಿ ಪಂದ್ಯ ಮುಗಿಸಿ ಹೋರಾಟ ಕೊನೆಗೊಳಿಸಿದರು. ಇನ್ನು ಪ್ರಿಯಾಂಶು ರಾಜಾವತ್ 13-21, 24-26 ರಿಂದ ಇಂಡೋನೇಷ್ಯಾದ ಶೇಸರ್ ಹಿರೇನ್ ರುಸ್ತಾವಿಟೊ ವಿರುದ್ಧ ಸೋಲು ಕಂಡಿದ್ದಾರೆ. ಇದರೊಂದಿಗೆ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

Story first published: Wednesday, September 6, 2023, 13:20 [IST]
Other articles published on Sep 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+