ಚೀನಾ ಓಪನ್: ಸಿಂಧು, ಶ್ರೀಕಾಂತ್ ಸೋಲಿನೊಂದಿಗೆ ಭಾರತದ ಸ್ಪರ್ಧೆ ಅಂತ್ಯ

ಬೀಜಿಂಗ್, ಸೆಪ್ಟೆಂಬರ್ 21: ಚೀನಾದ ಚಾಂಗ್ಝೌ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್ ನ ಕ್ಸಿನ್ ಚೆಂಗ್ ಜಿಮ್ನಾಷಿಯಂನಲ್ಲಿ ನಡೆದ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಭಾರತದ ಪಿವಿ ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಹೊರ ಬಿದ್ದಿದ್ದಾರೆ. ಕ್ವಾರ್ಟರ್ ಫೈನಲ್ ನಲ್ಲಿ ಇಬ್ಬರೂ ಸೋಲನುಭವಿಸಿದ್ದರಿಂದ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಶುಕ್ರವಾರ (ಸೆಪ್ಟೆಂಬರ್ 21) ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವ 3ನೇ ಶ್ರೇಯಾಂಕಿತೆ ಸಿಂಧು ಅವರು ಚೀನಾದ ಚೆನ್ ಯೂಫೀ ಎದುರು 21-11, 11-21, 15-21ರ ಹಿನ್ನಡೆ ಅನುಭವಿಸುವುದರೊಂದಿಗೆ ನಿರಾಸೆ ಮೂಡಿಸಿದರು.
ಪುರುಷರ ವಿಭಾಗದ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ಆಟಗಾರ ಕೆಂಟೊ ಮೊಮೊಟಾ ಅವರು ಭಾರತ ಸ್ಟಾರ್ ಆಟಗಾರ ಶ್ರೀಕಾಂತ್ ವಿರುದ್ಧ 21-9, 21-11ರ ನೇರ ಸೆಟ್ ಗೆಲುವು ದಾಖಲಿಸುವುದರೊಂದಿಗೆ ಸೆಮಿಫೈನಲ್ ಗೆ ಪ್ರವೇಶಿಸಿದ್ದಾರೆ.
Story first published: Friday, September 21, 2018, 18:34 [IST]
Other articles published on Sep 21, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications