For Quick Alerts
ALLOW NOTIFICATIONS  
For Daily Alerts

CWG 2022: ಚಿನ್ನದ ಪದಕದ ಕನಸು ಜೀವಂತವಾಗಿಸಿದ ಸಿಂಧು: ಸತತ ಎರಡನೇ ಬಾರಿ ಫೈನಲ್‌ಗೆ ಲಗ್ಗೆ

CWG 2022: PV Sindhu enterd 2nd successive Games badminton final: eye on Gold medal

ಎರಡು ಬಾರಿ ಒಲಿಂಪಿಕ್ಸ್‌ ಪದಕ ಗೆದ್ದ ಸಾಧನೆ ಮಾಡಿರುವ ಪಿವಿ ಸಿಂಧು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಫೈನಲ್ ಹಂತಕ್ಕೇರಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಈ ಮೂಲಕ ತಮ್ಮ ಚೊಚ್ಚಲ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕವನ್ನು ಮುಡಿಗೇರಿಸಿಕೊಳ್ಳಳು ಸಫಲವಾಗಲಿದ್ದಾರಾ ಎಂಬುದು ಕುತೂಹಲ ಮೂಡಿಸಿದೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಸ್ಪರ್ಧೆಯಲ್ಲಿ ಪಿವಿ ಸಿಂಧು ಸೆಮಿಫೈನಲ್ ಹಂತದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಿಂಗಾಪೂರ್‌ನ ಜೊಯಾ ಮಿನ್ ಎವೊ ವಿರುದ್ಧ ನೇರ ಸೆಟ್‌ಗಳ ಗೆಲುವು ಸಾಧಿಸಿ ಫೈನಲ್ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಸತತ ಎರಡನೇ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಂತಾಗಿದೆ.

ಈ ಹಿಂದೆ ಗೋಲ್ಡ್ ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದವರೇ ಆದ ಸೇನಾ ನೆಹ್ವಾಲ್ ಅವರನ್ನು ಫೈನಲ್‌ನಲ್ಲಿ ಎದುರಿಸಿದ್ದ ಪಿವಿ ಸಿಂಧು ಸೋಲು ಅನುಭವಿಸಿದ್ದರು. ಇನ್ನು ಈ ಬಾರಿಯ ಸೆಮಿಫೈನಲ್‌ನಲ್ಲಿ ಸಿಂಗಾಪೂರ್‌ನ ಆಟಗಾರ್ತಿಯ ವಿರುದ್ಧ ಪಿವಿ ಸಿಂಧು ನೆರ ಸೆಟ್‌ಗಳಿಂದ ಗೆಲುವು ಸಾಧಿಸಿದ್ದರೂ ಸಾಕಷ್ಟು ಪೈಪೋಟಿಯನ್ನು ಎದುರಿಸಿದ್ದಾರೆ. 21-19, 21-17 ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪಿವಿ ಸಿಂಧು ಇತ್ತೀಚೆಗೆ ಅದ್ಭುತವಾದ ಫಾರ್ಮ್‌ನಲ್ಲಿದ್ದು ಸತತವಾಗಿ ಗೆಲುವು ಸಾಧಿಸುತ್ತಾ ಮುನ್ನುಗ್ಗುತ್ತಿದ್ದಾರೆ. ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರು ಒಂದು ಪಂದ್ಯದಲ್ಲಿಯೂ ಸೋಲು ಅನುಭವಿಸಿಲ್ಲ. ಮಿಶ್ರ ಡಬಲ್ಸ್‌ಬಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸಿರುವ ಪಿವಿ ಸಿಂಧು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಮಲೇಷ್ಯಾ ವಿರುದ್ಧ 1-3 ಅಂತರದಿಂದ ಭಾರತ ಸೋಲು ಅನುಭವಿಸಿದ್ದರೂ ಸಿಂಧು ಮಾತ್ರವೇ ಭಾರತಕ್ಕೆ ಗೆಲುವು ತಂದುಕೊಂಡಿದ್ದರು.

ಭಾರತದ ಪರವಾಗಿ ಈವರೆಗೆ ಪದಕ ಗೆದ್ದ ಕ್ರೀಡಾಪಟುಗಳು

ಸಂಕೇತ್ ಸರ್ಗರ್: ಪುರುಷರ 55 ಕೆಜಿ ವೇಟ್ ಲಿಫ್ಟಿಂಗ್: ಬೆಳ್ಳಿ
ಗುರುರಾಜ ಪೂಜಾರಿ ಪುರುಷರ 61 ಕೆಜಿ ವೇಟ್ ಲಿಫ್ಟಿಂಗ್: ಕಂಚು
ಮೀರಾಬಾಯಿ ಚಾನು: ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್: ಚಿನ್ನ
ಬಿಂದ್ಯಾರಾಣಿ ದೇವಿ: ಮಹಿಳೆಯರ 55 ಕೆಜಿ ವೇಟ್ ಲಿಫ್ಟಿಂಗ್: ಬೆಳ್ಳಿ
ಜೆರೆಮಿ ಲಾಲ್ರಿನ್ನುಂಗಾ: ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್: ಚಿನ್ನ
ಅಚಿಂತಾ ಶೆಯುಲಿ: ಪುರುಷರ 73 ಕೆಜಿ ವೇಟ್‌ಲಿಫ್ಟಿಂಗ್: ಚಿನ್ನ
ಸುಶೀಲಾ ದೇವಿ : ಮಹಿಳೆಯರ 48 ಕೆಜಿ ಜೂಡೋ: ಬೆಳ್ಳಿ
ವಿಜಯ್ ಕುಮಾರ್ ಯಾದವ್: ಪುರುಷರ 60 ಕೆಜಿ ಜೂಡೋ: ಕಂಚು
ಹರ್ಜಿಂದರ್ ಕೌರ್: ಮಹಿಳೆಯರ 71 ಕೆಜಿ ವೇಟ್ ಲಿಫ್ಟಿಂಗ್: ಕಂಚು
ಭಾರತ ವನಿತೆಯರ ತಂಡ ಮಹಿಳಾ ಲಾನ್ ಬೌಲ್: ಚಿನ್ನ
ವಿಕಾಸ್ ಠಾಕೂರ್: ಪುರುಷರ 96 ಕೆಜಿ ವೇಟ್ ಲಿಫ್ಟಿಂಗ್: ಬೆಳ್ಳಿ
ಭಾರತ ಪುರುಷರ ತಂಡ: ಟೇಬಲ್ ಟೆನಿಸ್: ಚಿನ್ನ
ಭಾರತ ಮಿಶ್ರ ತಂಡ ಮಿಶ್ರ ತಂಡ ಬ್ಯಾಡ್ಮಿಂಟನ್: ಬೆಳ್ಳಿ
ಲವ್‌ಪ್ರೀತ್ ಸಿಂಗ್: ಪುರುಷರ 109 ಕೆಜಿ ವೇಟ್‌ಲಿಫ್ಟಿಂಗ್: ಕಂಚು
ಸೌರವ್ ಘೋಸಲ್: ಪುರುಷರ ಸಿಂಗಲ್ಸ್ ಸ್ಕ್ವಾಷ್: ಕಂಚು
ತುಲಿಕಾ ಮಾನ್: ಮಹಿಳೆಯರ +78 ಕೆಜಿ ಜೂಡೋ; ಬೆಳ್ಳಿ
ಗುರುದೀಪ್ ಸಿಂಗ್ ಪುರುಷರ +109 ಕೆಜಿ ವೇಟ್‌ಲಿಫ್ಟಿಂಗ್: ಕಂಚು
ತೇಜಸ್ವಿನ್ ಶಂಕರ್: ಪುರುಷರ ಹೈಜಂಪ್ ಅಥ್ಲೆಟಿಕ್ಸ್: ಕಂಚಿನ ಪದಕ
ಮುರಳಿ ಶ್ರೀಶಂಕರ್: ಪುರುಷರ ಲಾಂಗ್ ಜಂಪ್ ಅಥ್ಲೆಟಿಕ್ಸ್: ಬೆಳ್ಳಿ
ಸುಧೀರ್ ಪುರುಷರ ಹೆವಿವೇಟ್ ಪ್ಯಾರಾ ಪವರ್ ಲಿಫ್ಟಿಂಗ್ ಚಿನ್ನ
ಅಂಶು ಮಲಿಕ್: ಮಹಿಳೆಯರ 57 ಕೆಜಿ ಫ್ರೀಸ್ಟೈಲ್ ಕುಸ್ತಿ: ಬೆಳ್ಳಿ
ಬಜರಂಗ್ ಪುನಿಯಾ: ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ: ಚಿನ್ನ
ಸಾಕ್ಷಿ ಮಲಿಕ್: ಮಹಿಳೆಯರ 62 ಕೆಜಿ ಫ್ರೀಸ್ಟೈಲ್ ಕುಸ್ತಿ: ಚಿನ್ನ
ದೀಪಕ್ ಪುನಿಯಾ: ಪುರುಷರ 86 ಕೆಜಿ ಫ್ರೀಸ್ಟೈಲ್ ಕುಸ್ತಿ: ಚಿನ್ನ
ದಿವ್ಯಾ ಕಕ್ರಾನ್: ಮಹಿಳೆಯರ 68 ಕೆಜಿ ಫ್ರೀಸ್ಟೈಲ್ ಕುಸ್ತಿ: ಕಂಚಿನ ಪದಕ
ಮೋಹಿತ್ ಗ್ರೆವಾಲ್: ಪುರುಷರ 125 ಕೆಜಿ ಫ್ರೀಸ್ಟೈಲ್ ಕುಸ್ತಿ: ಕಂಚಿನ ಪದಕ
ಪ್ರಿಯಾಂಕಾ ಗೋಸ್ವಾಮಿ: ಮಹಿಳೆಯರ 10000 ಮೀಟರ್ ಓಟದ ನಡಿಗೆ: ಬೆಳ್ಳಿ
ಅವಿನಾಶ್ ಮುಕುಂದ್ ಸಾಬ್ಲೆ: ಪುರುಷರ 3000 ಮೀಟರ್ ಸ್ಟೀಪಲ್ ಚೇಸ್ : ಬೆಳ್ಳಿ
ಭಾರತ ಪುರುಷರ ತಂಡ ಪುರುಷರ ಲಾನ್ ಬೌಲ್‌: ಬೆಳ್ಳಿ
ಜೈಸ್ಮಿನ್ ಲಂಬೋರಿಯಾ: ಮಹಿಳೆಯರ 60 ಕೆಜಿ ಬಾಕ್ಸಿಂಗ್: ಕಂಚು
ಪೂಜಾ ಗೆಹ್ಲೋಟ್: ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ: ಕಂಚಿನ ಪದಕ
ರವಿಕುಮಾರ್ ದಹಿಯಾ: ಪುರುಷರ 57 ಕೆಜಿ ಫ್ರೀಸ್ಟೈಲ್ ಕುಸ್ತಿ: ಚಿನ್ನ
ವಿನೇಶ್ ಫೋಗಟ್: ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ಕುಸ್ತಿ: ಚಿನ್ನ
ನವೀನ್: ಪುರುಷರ 74 ಕೆಜಿ ಫ್ರೀಸ್ಟೈಲ್ ಕುಸ್ತಿ: ಚಿನ್ನ
ಪೂಜಾ ಸಿಹಾಗ್: ಮಹಿಳೆಯರ 76 ಕೆಜಿ ಫ್ರೀಸ್ಟೈಲ್ ಕುಸ್ತಿ: ಕಂಚಿನ ಪದಕ
ಹುಸ್ಸಾಮ್ ಉದ್ದೀನ್ ಮೊಹಮ್ಮದ್: ಪುರುಷರ 54 ಕೆಜಿ- 57 ಕೆಜಿ ಫೆದರ್‌ವೇಟ್ ಬಾಕ್ಸಿಂಗ್: ಕಂಚು
ದೀಪಕ್ ನೆಹ್ರಾ: ಪುರುಷರ ಫ್ರೀಸ್ಟೈಲ್ 97 ಕೆಜಿ ಕುಸ್ತಿ: ಕಂಚಿನ ಪದಕ
ಸೋನಾಲ್ಬೆನ್ ಮನುಭಾಯ್ ಪಟೇಲ್: ಮಹಿಳೆಯರ ಸಿಂಗಲ್ಸ್ ಪ್ಯಾರಾ ಟೇಬಲ್ ಟೆನಿಸ್: ಕಂಚು
ರೋಹಿತ್ ಟೋಕಾಸ್ ಪುರುಷರ 63.5 ಕೆಜಿ-67 ಕೆಜಿ ಓವರ್ ವೆಲ್ಟರ್ ವೇಟ್ ಬಾಕ್ಸಿಂಗ್: ಕಂಚು
ಭಾವಿನಾ ಹಸ್ಮುಖಭಾಯ್ ಪಟೇಲ್: ಮಹಿಳಾ ಸಿಂಗಲ್ಸ್ ಪ್ಯಾರಾ ಟೇಬಲ್ ಟೆನಿಸ್: ಚಿನ್ನ

Story first published: Sunday, August 7, 2022, 16:45 [IST]
Other articles published on Aug 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+