For Quick Alerts
ALLOW NOTIFICATIONS  
For Daily Alerts

ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್: 2ನೇ ಸುತ್ತಿಗೆ ಪ್ರವೇಶಿಸಿದ ಕಿಡಂಬಿ ಶ್ರೀಕಾಂತ್

Denmark Open: Kidambi Srikanth and Treesa Jolly-Gayatri Gopichand Enter 2nd Round

ಮಂಗಳವಾರ ಒಡೆನ್ಸ್‌ನಲ್ಲಿ ನಡೆದ ಡೆನ್ಮಾರ್ಕ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಕಿಡಂಬಿ ಶ್ರೀಕಾಂತ್ ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್ ಆಂಗಸ್ ಅವರನ್ನು ಎದುರಿಸಿದ್ದಾರೆ. ಈ ಪೈಪೋಟಿಯ ಪಂದ್ಯದಲ್ಲಿ ಗೆಲುವು ಸಾಧಿಸಿದ ಕಿಡಂಬಿ ಶ್ರೀಕಾಂತ್ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಐದು ವರ್ಷಗಳ ಹಿಂದೆ ಅವರು ಚಾಂಪಿಯನ್ ಪಟ್ಟಕ್ಕೇರಿದ್ದ ತಾಣದಲ್ಲಿಯೇ ಕಣಕ್ಕಿಳಿದ 2021 ರ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ಶ್ರೀಕಾಂತ್ ಹಾಗೂ ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್ ಆಂಗಸ್ ವರುದ್ಧದ ಹೋರಾಟ 56 ನಿಮಿಷಗಳ ಕಾಲ ಸಾಗಿತು. ಈ ಪೈಪೋಟಿಯ ಪಂದ್ಯದಲ್ಲಿ ಶ್ರೀಕಾಂತ್ 17-21 21-14 21-12 ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಮತ್ತೊಂದೆಡೆ ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತರಾದ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು ತಮ್ಮ ಮಹಿಳೆಯರ ಡಬಲ್ಸ್ ಆರಂಭಿಕ ಪಂದ್ಯದಲ್ಲಿ ಡೆನ್ಮಾರ್ಕ್‌ನ ಅಲೆಕ್ಸಾಂಡ್ರಾ ಬೋಜೆ ಮತ್ತು ಅಮಾಲಿ ಮೆಗೆಲುಂಡ್ ಅವರನ್ನು 21-15 21-15 ರಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದರು. ಭಾರತದ ಈ ಜೋಡಿ ಎರಡನೇ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಜೊಂಗ್‌ಕೋಲ್ಫಾನ್ ಕಿತ್ತಿತಾರಾಕುಲ್ ಮತ್ತು ಥಾಯ್ಲೆಂಡ್‌ನ ರವಿಂದ ಪ್ರಜೊಂಗ್‌ಜೈ ಅವರನ್ನು ಎದುರಿಸಲಿದೆ.

3-3 ಹೆಡ್-ಟು-ಹೆಡ್ ದಾಖಲೆಯೊಂದಿಗೆ ಈ ಪಂದ್ಯಕ್ಕೆ ಇಳಿದ ಶ್ರೀಕಾಂತ್‌ಗೆ ಆಂಗಸ್ ಆರಂಭದಲಲ್ಇಯೇ ಭಾರೀ ಪೈಪೋಟಿ ನೀಡಿದರು. ಆದರೆ ಹಾಂಗ್ ಕಾಂಗ್ ಆಟಗಾರನ ವಿರುದ್ಧ ಮಧ್ಯಂತರದಲ್ಲಿ 11-8 ಮುನ್ನಡೆ ಸಾಧಿಸಿದ್ದರಿಂದ ಈ ಮೇಲುಗೈಯನ್ನು ಮುಂದುವರಿಸಿಕೊಂಡು ಸಾಗುವಲ್ಲಿ ಯಶಸ್ವಿಯಾದರು.

Story first published: Tuesday, October 18, 2022, 23:55 [IST]
Other articles published on Oct 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+