ಡೆನ್ಮಾರ್ಕ್ ಓಪನ್: ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಹೋರಾಟ ಕ್ವಾ. ಫೈನಲ್‌ಗೆ ಅಂತ್ಯ

ಡೆನ್ಮಾರ್ಕ್ ಓಪನ್ ಸೂಪರ್ 750 ಟೂರ್ನಮೆಂಟ್‌ನಲ್ಲಿ ಭಾರತದ ಲಕ್ಷ್ಯ ಸೇನ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿ ಹೋರಾಟ ಅಂತ್ಯಗೊಳಿಸಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಸೆಣೆಸಾಟದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್‌ಗೆ ಜಪಾನ್‌ನ ಕೊಡೈ ನರೋಕಾ ಎದುರಾಳಿಯಾಗಿದ್ದರು. ಈ ಪಂದ್ಯದಲ್ಲಿ ಬೆಂಗಳೂರು ಮೂಲದ ಆಟಗಾರ ನೇರ ಗೇಮ್‌ಗಳಿಂದ ಜಪಾನ್ ಆಟಗಾರನಿಗೆ ಶರಣಾಗಿದ್ದಾರೆ. ಇದಕ್ಕೂ ಮುನ್ನ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಮಲೇಷ್ಯಾದ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ವಿರುದ್ಧ ನೇರ ಗೇಮ್‌ಗಳ ಸೋಲು ಅನುಭವಿಸಿ ನಿರ್ಗಮಿಸಿದ್ದರು.
2021 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್ 2018 ರ ಯೂತ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತರಾದ ನರೋಕಾ ವಿರುದ್ಧ 17-21 12-21 ಅಂತರದಲ್ಲಿ ಸೋಲು ಕಂಡಿದ್ದಾರೆ. ಈ ಜೋಡಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಒಟ್ಟು ಮೂರು ಬಾರಿ ಮುಖಾಮುಖಿಯಾಗಿದ್ದು ಈ ಪೈಕಿ ಜಪಾನಿನ ಆಟಗಾರ ಎರಡು ಬಾರಿ ಗೆದ್ದಿದ್ದಾರೆ.
ಇನ್ನು ಇದಕ್ಕೂ ಮುನ್ನ ಲಕ್ಷ್ಯ ಸೇನ್ ಭಾರತದವರೇ ಆದ ಎಚ್‌ಎಸ್ ಪ್ರಣಯ್ ವಿರುದ್ಧ ಸೆಣೆಸಾಟ ನಡೆಸಿದ್ದರು. ಈ ಪಂದ್ಯದಲ್ಲಿ ಲಕ್ಷ್ಯಸೇನ್ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದ್ದು ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ಗೆ ಹೆಜ್ಜೆಯಿಟ್ಟಿದ್ದರು. 2021 ರ ವಿಶ್ವ ಚಾಂಪಿಯನ್‌ಶಿಪ್‌ಗಳ ಕಂಚಿನ ಪದಕ ವಿಜೇತ ಸೇನ್ ಪಣಯ್ ವಿರುದ್ಧದ ಪಂದ್ಯದಲ್ಲಿ 39 ನಿಮಿಷಗಳಲ್ಲಿ ಗೆಲುವು ಸಾಧಿಸಿದ್ದರು. ವಿಶ್ವದ 13 ನೇ ಶ್ರೇಯಾಂಕಿತ ಪ್ರಣಯ್ ಅವರನ್ನು 21-9 21-18 ರಿಂದ ಸೋಲಿಸಿ ಬಳಿಕ ಅಂತಿಮ 8ರ ಘಟ್ಟದಲ್ಲಿ ಜಪಾನ್‌ನ ಕೊಡೈ ನರೋಕಾ ಅವರೊಂದಿಗೆ ಸೆಣೆಸಾಟ ನಡೆಸಿದ್ದಾರೆ.
ಇನ್ನು ಇದೇ ಟೂರ್ನಿಯ ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಸ್ಟಾರ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೂಡ ನಿರಾಸೆ ಅನುಭವಿಸಿದರು. ಭಾರತದ ಈ ಜೋಡಿ ನಾಲ್ಕನೇ ಶ್ರೇಯಾಂಕದ ಮಲೇಷ್ಯಾದ ಜೋಡಿಯಾದ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ವಿರುದ್ಧ ನೇರ ಗೇಮ್‌ಗಳಿಂದ ಸೋಲು ಅನುಭವಿಸುವ ಮೂಲಕ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.
ಮಲೇಷಿಯಾದ ಜೋಡಿಯ ವಿರುದ್ಧದ ಪಂದ್ಯದಲ್ಲಿ ಭಾರತದ ಆಟಗಾರರು ಕಠಿಣ ಪೈಪೋಟಿಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 16-21 19-21 ಅಂತರದಿಂದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಸೋಲು ಅನುಭವಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications