Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೆನ್ಮಾರ್ಕ್ ಓಪನ್‌ನಿಂದ ಹೊರಬಿದ್ದ ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ

Denmark Open: Satwiksairaj Rankireddy and Chirag Shetty lost in quarterfinals

ಡೆನ್ಮಾರ್ಕ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಸ್ಟಾರ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ನಿರಾಸೆ ಅನುಭವಿಸಿದ್ದಾರೆ. ಭಾರತದ ಈ ಜೋಡಿ ನಾಲ್ಕನೇ ಶ್ರೇಯಾಂಕದ ಮಲೇಷ್ಯಾದ ಜೋಡಿಯಾದ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ವಿರುದ್ಧ ನೇರ ಗೇಮ್‌ಗಳಿಂದ ಸೋಲು ಅನುಭವಿಸುವ ಮೂಲಕ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.

ಮಲೇಷಿಯಾದ ಜೋಡಿಯ ವಿರುದ್ಧದ ಪಂದ್ಯದಲ್ಲಿ ಭಾರತದ ಆಟಗಾರರು ಕಠಿಣ ಪೈಪೋಟಿಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಗೆಲುವು ದಕ್ಕಿಸಿಕೊಳ್ಳಳು ಸಾಧ್ಯವಾಗಲಿಲ್ಲ. ಅಂತಿವಾಗಿ 16-21 19-21 ಅಂತರದಿಂದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಸೋಲು ಅನುಭವಿಸಿದೆ.

ಇನ್ನು ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನ ಚಿನ್ನದ ಪದಕ ವಿಜೇತ ಲಕ್ಷ್ಯ ಸೇನ್ ಭಾರತದವರೇ ಆದ ಎಚ್‌ಎಸ್ ಪ್ರಣಯ್ ವಿರುದ್ಧ ಸೆಣೆಸಾಟ ನಡೆಸಿದ್ದರು. ಈ ಪಂದ್ಯದಲ್ಲಿ ಲಕ್ಷ್ಯಸೇನ್ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದ್ದು ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ಗೆ ಹೆಜ್ಜೆಯಿಟ್ಟಿದ್ದಾರೆ. 2021 ರ ವಿಶ್ವ ಚಾಂಪಿಯನ್‌ಶಿಪ್‌ಗಳ ಕಂಚಿನ ಪದಕ ವಿಜೇತ ಸೇನ್ ಪಣಯ್ ವಿರುದ್ಧದ ಪಂದ್ಯದಲ್ಲಿ 39 ನಿಮಿಷಗಳಲ್ಲಿ ಗೆಲುವು ಸಾಧಿಸಿದ್ದಾರೆ. ವಿಶ್ವದ 13 ನೇ ಶ್ರೇಯಾಂಕಿತ ಪ್ರಣಯ್ ಅವರನ್ನು 21-9 21-18 ರಿಂದ ಸೋಲಿಸಿದ್ದು ಅಂತಿಮ 8ರ ಘಟ್ಟದಲ್ಲಿ ಜಪಾನ್‌ನ ಕೊಡೈ ನರೋಕಾ ಅವರೊಂದಿಗೆ ಸೆಣೆಸಾಟ ನಡೆಸಲಿದ್ದಾರೆ.

ಕುತೂಹಲಕಾರಿ ಅಂಶವೆಂದರೆ ಆಗಸ್ಟ್‌ನಲ್ಲಿ ಟೋಕಿಯೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ರಣಯ್ ಪ್ರಿ- ಕ್ವಾರ್ಟರ್‌ ಫೈನಲ್‌ನಲ್ಲಿ ಲಕ್ಷ್ಯ ಅವರನ್ನು ಸೋಲಿಸಿದರು. ಜೂನ್‌ನಲ್ಲಿ ನಡೆದ ಇಂಡೋನೇಷ್ಯಾ ಓಪನ್‌ನಲ್ಲಿ ಪ್ರಣಯ್ ಲಕ್ಷ್ಯ ಸೇನ್ ಅವರನ್ನು ಸೋಲಿಸಿದ್ದರೆ, ವರ್ಷದ ಆರಂಭದಲ್ಲಿ ನಡೆದ ಜರ್ಮನ್ ಓಪನ್ ಮತ್ತು ಇಂಡಿಯಾ ಓಪನ್‌ನಲ್ಲಿ ಪ್ರಣಯ್ ಅವರನ್ನು ಲಕ್ಷ್ಯ ಸೇನ್ ಸೋಲಿಸಿದ್ದರು. ಇದೀಗ ಮತ್ತೊಮ್ಮೆ ಪ್ರಣಯ್ ಅವರನ್ನು ಲಕ್ಷ್ಯ ಸೇನ್ ಸೋಲಕಿಸುವ ಮೂಲಕ ಮೇಲುಗೈ ಸಾಧಿಸಿದ್ದಾರೆ.

ಇದಕ್ಕೂ ಮುನ್ನ ಡೆನ್ಮಾರ್ಕ್ ಓಪನ್‌ನಲ್ಲಿ ಭಾರತದ ಲಕ್ಷ್ಯ ಸೇನ್ ಮತ್ತು ಹೆಚ್‌ಎಸ್ ಪ್ರಣಯ್ ಉತ್ತಮ ಆರಂಭವನ್ನು ಪಡೆದುಕೊಂಡಿದ್ದರು. ಮೊದಲ ಸುತ್ತಿನಲ್ಲಿ ಶ್ರೇಯಾಂಕ ರಹಿತ ಲಕ್ಷ್ಯ ಸೇನ್ ಭರ್ಜರಿ ಪ್ರದರ್ಶನ ನೀಡಿ ವಿಶ್ವದ ನಂ. 6 ಆಟಗಾರ ಆಂಟನಿ ಗಿಂಟಿಂಗ್ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿದರು. ಮತ್ತೊಂದೆಡೆ ಎಚ್‌ ಎಸ್ ಪ್ರಣಯ್ ಅವರು ವಿಶ್ವ ಚಾಂಪಿಯನ್‌ ಶಿಪ್‌ನ ಕಂಚಿನ ಪದಕ ವಿಜೇತ ಚೀನಾದ ಜಾವೊ ಜುನ್ ಪೆಂಗ್ ಅವರ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯಗಳಲ್ಲಿ ನೇರ ಗೇಮ್‌ಗಳಲ್ಲಿ ಮಣಿಸಿದ್ದರು.

Story first published: Friday, October 21, 2022, 23:56 [IST]
Other articles published on Oct 21, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+