Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

70ರ ಹರೆಯದ ಹಣ್ಣು ಮುದುಕನಿಗೆ ಪಿವಿ ಸಿಂಧು ವರಿಸುವಾಸೆಯಂತೆ!

Elderly man files petition seeking to marry PV Sindhu

ಚೆನ್ನೈ, ಸೆಪ್ಟೆಂಬರ್ 17: ಎಂಥೆಂತದೋ ಹುಚ್ಚು ಆಸೆಗಳಿಗೆ ಅರ್ಜಿ ಸಲ್ಲಿಸಿದ ಭೂಪರ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಅಜ್ಜ ಭಾರತದ ಬ್ಯಾಡ್ಮಿಂಟನ್ ರಾಣಿಗೇ ಕಣ್ಹಾಕಿದ್ದಾನೆ. ತಮಿಳುನಾಡಿನ 70ರ ಮುದುಕನೊಬ್ಬನಿಗೆ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ವರಿಸುವಾಸೆಯಂತೆ.

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ವಾರದ ಸಾರ್ವಜನಿಕ ಸಭೆಯ ವೇಳೆ ಜಿಲ್ಲಾಧಿಕಾರಿಗೆ ಬಂದ ಅರ್ಜಿ ನೋಡಿ ಜಿಲ್ಲಾಧಿಕಾರಿ ತಬ್ಬಿಬ್ಬಾಗಿದ್ದಾರೆ. ಮಲೈಸಾಮಿ ಎಂಬ ಹಣ್ಣು ಮುದುಕ, ತಾನು ಸಿಂಧುವನ್ನು ಅಪಹರಿಸಿ ವರಿಸುವುದಾಗಿ ಅರ್ಜಿಯಲ್ಲಿ ತಿಳಿಸಿದ್ದಾನೆ. ಹೀಗೆಂದು ಇಂಡಿಯಾ ಟುಡೇ ವರದಿ ಮಾಡಿದೆ.

ವರದಿಯಲ್ಲಿರುವಂತೆ, ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಮಲೈಸಾಮಿ, ಇತ್ತೀಚೆಗಷ್ಟೇ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರ ಗೆದ್ದಿದ್ದ 24ರ ಹರೆಯದ ಪಿವಿ ಸಿಂಧುವಿನ ಭಾವಚಿತ್ರ, ತನ್ನ ಭಾವಚಿತ್ರ ಮತ್ತು ಪತ್ರವೊಂದನ್ನು ಕೊಟ್ಟಿದ್ದಾನದಲ್ಲದೆ ಪತ್ರದಲ್ಲಿ, ತನಗೆ ಸಿಂಧುವನ್ನು ಮದುವೆಯಾಗುವ ಆಸೆಯಿರುವುದನ್ನು ತಿಳಿಸಿದ್ದಾರೆ.

ಗಮ್ಮತ್ತು ಇಲ್ಲಿಗೇ ಮುಗಿಯೋಲ್ಲ; ಅರ್ಜಿಯಲ್ಲಿ ಅಜ್ಜ ಮಲೈಸಾಮಿ, ತಾನು ನಿಜವಾಗಿಯೂ 16ರ ಹರೆಯದ ಬಾಲಕ. ತನ್ನ ಜನ್ಮ ದಿನಾಂಕ 4 ಏಪ್ರಿಲ್ 2004 ಎಂದು ಹೇಳಿಕೊಂಡಿದ್ದಾನೆ. ಕ್ರೀಡಾ ವೃತ್ತಿ ಜೀವನದಲ್ಲಿ ಸಿಂಧು ಯಶಸ್ವಿ ಗಳಿಸಿರುವುದರಿಂದ ಅವರನ್ನು ತನ್ನ ಜೀವನ ಸಂಗಾತಿಯಾಗಿಸಿಕೊಳ್ಳಲು ಬಯಸಿದೆ ಎಂದೂ ಬರೆದುಕೊಂಡಿದ್ದಾನೆ.

ಮುದುಕನ ಪತ್ರ, ಅವನ ಹುಚ್ಚು ಆಸೆ ನೋಡಿ ಜಿಲ್ಲಾಧಿಕಾರಿ ಒಮ್ಮೆ ತಬ್ಬಿಬ್ಬಾದರೂ ಮತ್ತೆ ಮುಸಿಮುಸಿ ನಕ್ಕಿರಬೇಕು. ಸಭೆಯಲ್ಲಿ ನೆರೆದ ಜನ ಕೂಡ ಒಂದು ಕ್ಷಣ 'ಎಲಾ ಮುದುಕನೇ..' ಹಲ್ಲು ಬಿಟ್ಟಿರಲಿಕ್ಕೂ ಸಾಕು. ಏನೇ ಇರ್ಲಿ; ಹುಣಸೆ ಮರಕ್ಕೆ ಮುಪ್ಪಾದ್ರೂ ಹುಳಿ ಮುಪ್ಪಲ್ಲ ಅನ್ನೋ ಗಾದೆ ಸುಳ್ಳಲ್ಲ ನೋಡಿ!

Story first published: Wednesday, September 18, 2019, 1:24 [IST]
Other articles published on Sep 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+