Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರೆಂಚ್ ಓಪನ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಿಂಧು, ಸೈನಾ, ಶ್ರೀಕಾಂತ್

French Open: PV Sindhu enters quarters, Sai Praneeth bows out

ಪ್ಯಾರಿಸ್, ಅಕ್ಟೋಬರ್ 26: ಫ್ರಾನ್ಸ್ ನ ಪ್ಯಾರೀಸ್ ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಅವರು ಜಪಾನ್ ಆಟಗಾರ್ತಿ ಸಯಕಾ ವಿರುದ್ಧ ಜಯ ಸಾಧಿಸುವುದರೊಂದಿಗೆ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದಾರೆ.

ಗುರುವಾರ (ಅಕ್ಟೋಬರ್ 25) ನಡೆದ ಮಹಿಳಾ ಸಿಂಗಲ್ಸ್ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಪಿವಿ ಸಿಂಧು, ಸಯಕಾ ವಿರುದ್ಧ 21-17 21-16ರ ನೇರ ಸೆಟ್ ಗೆಲುವು ದಾಖಲಿಸಿದರು. ಮುಂದಿನ ಸ್ಪರ್ಧೆಯಲ್ಲಿ ಸಿಂಧು ಅವರು ವಿಶ್ವ ನಂ. 7ನೇ ಆಟಗಾರ್ತಿ ಚೀನಾದ ಹಿ ಬಿಂಗ್ಜಿಯಾವೋ ವಿರುದ್ಧ ಸೆಣಸಾಡಲಿದ್ದಾರೆ.

ಭಾರತದ ಮತ್ತೊಬ್ಬ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಜಪಾನ್ ಆಟಗಾರ್ತಿ ನೋಜೊಮಿ ಒಕುಹರಾ ವಿರುದ್ಧ 21, 21-14, 21-17ರ ವಿಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರೆ, ಹಾಲಿ ಚಾಂಪಿಯನ್ ಕಿದಂಬಿ ಶ್ರೀಕಾಂತ್ ಅವರೂ ಸೌತ್ ಕೊರಿಯಾದ ಡಾಂಗ್ ಕೆನ್ ಲೀ ವಿರುದ್ಧ ಗೆದ್ದು ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.

Story first published: Friday, October 26, 2018, 15:25 [IST]
Other articles published on Oct 26, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+