ಜರ್ಮನ್ ಓಪನ್ 2023: ಟೂರ್ನಿಯಿಂದ ಹಿಂದೆ ಸರಿದ ಕಿಡಂಬಿ ಶ್ರೀಕಾಂತ್, ಲಕ್ಷ್ಯ ಸೇನ್‌ಗೆ ಮುನ್ನಡೆಸುವ ಹೊಣೆಗಾರಿಕೆ

ಜರ್ಮನ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರದಿಂದ ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಚಾಲನೆ ಪಡೆಯಲಿದೆ. ಈ ಪ್ರತಿಷ್ಠಿತ ಟೂರ್ನಿಯಿಂದ ಮಾಜಿ ವಿಶ್ವ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್ ಹಿಂದೆ ಸರಿದಿದ್ದಾರೆ. ಹಿಂದಿನ ಆವೃತ್ತಿಯಲ್ಲಿ ಫೈನಲಿಸ್ಟ್ ಆಗಿದ್ದ ಶ್ರೀಕಾಂತ್ ಈ ಬಾರಿ ಹಿಂದಕ್ಕೆ ಸರಿದಿದ್ದು ಭಾರತದ ಸವಾಲನ್ನು ಮುನ್ನಡೆಸುವ ಜವಾಬ್ಧಾರಿ ಲಕ್ಷ್ಯ ಸೇನ್ ಹೆಗಲೇರಿದೆ.
ಲಕ್ಷ್ಯ ಸೇನ್ ಮತ್ತು ಹೊಸದಾಗಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಮಿಥುನ್ ಮಂಜುನಾಥ್ ಈ ಟೂರ್ನಿಯಲ್ಲಿ ಭಾಗವಹಿಸಲಿರುವ ಭಾರತದ ಅಗ್ರ ಆಟಗಾರರಾಗಲಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಸೇನ್ ಕಳೆದ ವರ್ಷ ಸೆಮಿಫೈನಲ್‌ನಲ್ಲಿ ವಿಶ್ವದ ನಂ. 1 ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಸೋಲಿಸಿದರು ಆದರೆ ಫೈನಲ್‌ನಲ್ಲಿ ಸೋಲು ಕಂಡಿದ್ದರು.
ಈ ಬಾರಿ ಆರನೇ ಶ್ರೇಯಾಂಕದ ಯುವ ಆಟಗಾರ ಲಕ್ಷ್ಯಸೇನ್ ಆರಂಭಿಕ ಸುತ್ತಿನಲ್ಲಿ ಫ್ರಾನ್ಸ್‌ನ ಕ್ರಿಸ್ಟೋ ಪೊಪೊವ್ ಅವರನ್ನು ಎದುರಿಸಲಿದ್ದಾರೆ ಮತ್ತು ಅವರು ಆರಂಭಿಕ ಸುತ್ತುಗಳನ್ನು ದಾಟಲು ಯಶಸ್ವಿಯಾದರೆ ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಮಲೇಷ್ಯಾದ ಲೀ ಜಿ ಜಿಯಾ ಅವರನ್ನು ಎದುರಿಸುವ ನಿರೀಕ್ಷೆಯಿದೆ.
ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ಗಳು ಮತ್ತು ಜರ್ಮನ್ ಓಪನ್‌ಗಳನ್ನು ಒಳಗೊಂಡಿರುವ ಯುರೋಪಿಯನ್ ಸರ್ಕ್ಯೂಟ್‌ನಲ್ಲಿ ಲಕ್ಷ್ಯ ಸೇನ್‌ಗೆ ಖ್ಯಾತ ಫಿಸಿಯೋಥೆರಪಿಸ್ಟ್ ಹೀತ್ ಮ್ಯಾಥ್ಯೂಸ್ ಸಾಥ್ ನೀಡಲಿದ್ದಾರೆ. ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್ (BATC) ಟೂರ್ನಿಯಲ್ಲಿ ಭಾರತದ ಕಂಚಿನ ಪದಕ ವಿಜೇತ ತಂಡದ ಭಾಗವಾಗಿದ್ದ ಸೇನ್, ಜರ್ಮನ್ ಓಪನ್ (ಮಾರ್ಚ್ 7-12), ಆಲ್ ಇಂಗ್ಲೆಂಡ್ (ಮಾರ್ಚ್ 14-19) ಮತ್ತು ಸ್ವಿಸ್ ಓಪನ್ (ಮಾರ್ಚ್ 21-26) ಈ ಮೂರು ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಮಂಜುನಾಥ್ ಅವರು ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯಿಂದ ಸ್ಪೂರ್ತಿಗೊಂಡಿದ್ದು ಮಾಜಿ ವಿಶ್ವ ಚಾಂಪಿಯನ್ ಲೋಹ್ ಕೀನ್ ಯೂ ಅವರನ್ನು ಎದುರಿಸಲಿದ್ದಾರೆ. ಇನ್ನು ಮಹಿಳೆಯರ ಸಿಂಗಲ್ಸ್ ಡ್ರಾದಲ್ಲಿ ಮಾಳವಿಕಾ ಬನ್ಸೋಡ್ ಮತ್ತು ಸೈನಾ ನೆಹ್ವಾಲ್ ಕಣಕ್ಕಿಳಿದರೆ 2022 ರ ಸಿಡಬ್ಲ್ಯೂಜಿಯಲ್ಲಿ ಸ್ಪರ್ಧಿಸಿದ್ದ ಅಶ್ವಿನಿ ಪೊನ್ನಪ್ಪ ಮತ್ತು ಬಿ ಸುಮೀತ್ ರೆಡ್ಡಿ ಮಿಶ್ರ ಡಬಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications