ಜರ್ಮನ್ ಓಪನ್: ಮೊದಲ ಸುತ್ತಿನಲ್ಲೇ ಆಟ ಮುಗಿಸಿದ ಭಾರತೀಯ ಶಟ್ಲರ್‌ಗಳು!

ಜರ್ಮನ್ ಓಪನ್‌ನಲ್ಲಿ ಭಾರತೀಯ ಶಟ್ಲರ್‌ಗಳ ಹೋರಾಟ ಮೊದಲ ದಿನದಲ್ಲಿಯೇ ಅಂತ್ಯವಾಗಿದೆ. ಸಿಂಗಲ್ಸ್ ವಿಭಾಗದಲ್ಲಿ ಭಾರತದ ಎಲ್ಲಾ ನಾಲ್ವರು ಆಟಗಾರರು ಕೂಡ ಮೊದಲ ಸುತ್ತಿನಲ್ಲಿಯೇ ಸೋಲು ಅನುಭವಿಸಿದ್ದಾರೆ. ಈ ಮೂಲಕ ಭರವಸೆ ಮೂಡಿಸಿದ್ದ ಭಾರತದ ಶಟ್ಲರ್‌ಗಳು ನೀರಸ ಪ್ರದರ್ಶನ ನೀಡುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಬುಧವಾರ ನಡೆದ ಜರ್ಮನ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್‌ನಲ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಅಗ್ರ ಶ್ರೇಯಾಂಕ ಶಟ್ಲರ್ ಫ್ರಾನ್ಸ್‌ನ ಕ್ರಿಸ್ಟೋ ಪೊಪೊವ್ ವಿರುದ್ಧ ನೇರ ಗೇಮ್‌ಗಳಲ್ಲಿ ಸೋಲು ಅನುಭವಿಸಿದರು. ಈ ಮೂಲಕ ಮೊದಲ ಸುತ್ತಿನಿಂದಲೇ ನಿರ್ಗಮಿಸಿದರು.
ವಿಶ್ವದ 12ನೇ ಶ್ರೇಯಾಂಕದ ಮತ್ತು ಆರನೇ ಸೀಡ್‌ನ ಆಟಗಾರನಾಗಿ ಕಣಕ್ಕಿಳಿದ ಸೇನ್ ವಿಶ್ವದ 41ನೇ ಶ್ರೇಯಾಂಕದ ಪೊಪೊವ್ ವಿರುದ್ಧ ಸೋಲು ಕಂಡದ್ದಾರೆ. 46 ನಿಮಿಷಗಳ ಕಾಲ ನಡೆದ ಈ ಸೆಣೆಸಾಟದಲ್ಲಿ 319-21, 16-21 ಅಂತರದಿಂದ ಲಕ್ಷ್ಯ ಸೇನ್ ಆಘಾತ ಅನುಭವಿಸಿದರು. ಮೂರು ಭಾರತೀಯ ಆಟಗಾರರು ಕೂಡ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿಯೇ ಸೋಲು ಕಂಡಿದ್ದಾರೆ. ಈ ಮೂಲಕ ಜರ್ಮನ್ ಓಪನ್‌ನಲ್ಲಿ ಭಾತದ ಆಟಗಾರರ ಹೋರಾಟ ಅಂತ್ಯವಾಗಿದೆ.
ಇನ್ನು ಮಾಳವಿಕಾ ಬನ್ಸೋಡ್ 13-21, 14-21 ಅಂತರದಿಂದ ಐದನೇ ಶ್ರೇಯಾಂಕದ ಚೀನಾದ ಆಟಗಾರ್ತಿ ವಾಂಗ್ ಝಿ ಯಿ ವಿರುದ್ಧ ಸೋಲು ಕಂಡರೆ ಇತ್ತೀಚೆಗಷ್ಟೇ ರಾಷ್ಟ್ರೀಯ ಚಾಂಪಿಯನ್ ಎನಿಸಿಕೊಂಡ ಮಿಥುನ್ ಮಂಜುನಾಥ್ 8-21, 21-19, 11-21 ಅಂತರದಿಂದ ಸಿಂಗಾಪುರದ ನಾಲ್ಕನೇ ಶ್ರೇಯಾಂಕದ ಶಟ್ಲರ್ ಮಾಜಿ ವಿಶ್ವ ಚಾಂಪಿಯನ್ ಲೋಹ್ ಕೀನ್ ಯೂ ವಿರುದ್ಧ ಸೋಲು ಕಂಡರು.
ಅರ್ಹತಾ ಸುತ್ತಿನಲ್ಲಿ ಐರ್ಲೆಂಡ್‌ನ ರಾಚೆಲ್ ದರ್ರಾಗ್ ಅವರನ್ನು ಸೋಲಿಸಿ ಪ್ರಧಾನ ಸುತ್ತಿಗೆ ಮುನ್ನಡೆದ ತಸ್ನಿಮ್ ಮಿರ್ ಕೂಡ ಮೊದಲ ಸುತ್ತಿನಲ್ಲಿ ತಮ್ಮ ಹೋರಾಟ ಅಂತ್ಯಗಳಿಸಿದ್ದಾರೆ. ಅವರು ಎಂಟನೇ ಶ್ರೇಯಾಂಕದ ಥಾಯ್ ಶಟ್ಲರ್ ಪೋರ್ನ್‌ಪಾವೀ ಚೊಚುವಾಂಗ್ ವಿರುದ್ಧ 25 ನಿಮಿಷಗಳ ಹೋರಾಟದಲ್ಲಿ 8-21, 10-21 ಅಂತರದಿಂದ ಸೋಲು ಕಂಡಿದ್ದಾರೆ.
ಮಾರ್ಚ್ 14 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ಪ್ರಾರಂಭವಾಗುವ ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ಭಾರತ ತಂಡ ಮುಂದಿನ ಹೋರಾಟ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications