For Quick Alerts
ALLOW NOTIFICATIONS  
For Daily Alerts

ಅರ್ಜುನ ಪ್ರಶಸ್ತಿ ನಾಮನಿರ್ದೇಶನದ ವಿರುದ್ಧ ಗುಡುಗಿದ ಬ್ಯಾಡ್ಮಿಂಟನ್ ತಾರೆ

Hs Prannoy Slams Arjuna Award Selection

ಅರ್ಜುನ ಪ್ರಶಸ್ತಿಗೆ ತನ್ನ ಹೆಸರನ್ನು ನಾಮನಿರ್ದೇಶನಗೊಳಿಸದಕ್ಕೆ ಬೇಸರಗೊಂಡಿರುವ ಭಾರತೀಯ ಶಟ್ಲರ್ ಹೆಚ್‌ಎಸ್ ಪ್ರಣಯ್ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸತತ ಎರಡನೇ ವರ್ಷ ಈ ಪ್ರಶಸ್ತಿಗೆ ತನ್ನನ್ನು ನಾಮನಿರ್ದೇಶನಗೊಳಿಸದ ಕಾರಣ ಟ್ವಿಟ್ಟರ್‌ನಲ್ಲಿ ಕಟು ಶಬ್ಧಗಳಲ್ಲಿ ಅಸಮಾದಾನವನ್ನು ವ್ಯಕ್ತಪಡಿಸಿದ್ದಾರೆ.

ಬ್ಯಾಡ್ಮಿಂಟನ್ ಅಸೊಸಿಯೇಶನ್ ಆಫ್ ಇಂಡಿಯಾ ಮಂಗಳವಾರ ಭಾರತದ ಅಗ್ರ ಡಬಲ್ಸ್ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಹಾಗೂ ಸಿಂಗಲ್ಸ್ ಆಟಗಾರ ಸಮೀರ್ ವರ್ಮ ಅವರನ್ನು ಪ್ರಶಸ್ತಿಯ ಆಯ್ಕೆಗಾಗಿ ಹೆಸರಿಸಿದೆ. ತನಗಿಂತ ಕಡಿಮೆ ಸಾಧನೆ ಮಾಡಿದ ಆಟಗಾರರನ್ನು ಆಯ್ಕೆ ಮಾಡಿದ ಕಾರಣಕ್ಕೆ ಪ್ರಣಯ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

"ಅರ್ಜುನ ಪ್ರಶಸ್ತಿಯದ್ದು ಮತ್ತೆ ಅದೇ ಹಳೆಯ ಕಥೆ. ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಪದಕಗಳನ್ನು ಹೊಂದಿರುವ ಆಟಗಾರನನ್ನು ಅಸೋಸಿಯೇಷನ್ ಸಹ ಶಿಫಾರಸು ಮಾಡಿಲ್ಲ.ಆದರೆ ಈ ಯಾವುದೇ ಪ್ರಮುಖ ಟೂರ್ನಿಗಳಲ್ಲಿ ಇಲ್ಲದ ವ್ಯಕ್ತಿಯನ್ನು ಶಿಫಾರಸು ಮಾಡಿದ್ದಾರೆ. ಈ ದೇಶವೇ ತಮಾಷೆಯಾಗಿದೆ" ಎಂದು ಟ್ವಿಟ್ಟರ್‌ನಲ್ಲಿ ಪ್ರಣಯ್ ಬರೆದುಕೊಂಡಿದ್ದಾರೆ.

2018ರ ಬ್ಯಾಡ್ಮಿಂಟನ್ ಅಸೊಸಿಯೇಶನ್ ಆಫ್ ಇಂಡಿಯಾ ಕಳುಹಿಸಿದ ಮೂರು ಶಿಫಾರಸ್ಸಿನಲ್ಲಿ ಸಾತ್ವಿಕ್-ಚಿರಾಗ್ 2018ರ ಕಾಮನ್‌ವೆಲ್ತ್ ಗೇಮ್ಸ್‌ನ ಬೆಲ್ಳಿ ಪದಕ ವಿಜೇತರಾಗಿದ್ದರು. ಆದರೆ ಸಮೀರ್ ಈ ಪ್ರತಿಷ್ಟಿತ ಟೂರ್ನಿಯಲ್ಲಿ ಎಂದೂ ಪಾಲ್ಗೊಂಡಿಲ್ಲ. ಆದರೆ ಬ್ಯಾಡ್ಮಿಂಟನ್ ಅಸೊಸಿಯೇಶನ್ ಆಫ್ ಇಂಡಿಯಾ ಕಳೆದ ನಾಲ್ಕು ವರ್ಷಗಳ ಪ್ರದರ್ಶನವನ್ನು ಗಮನದಲ್ಲಿಟ್ಟು ಈ ನಾಮನಿರ್ದೇಶನವನ್ನು ಮಾಡಿದೆ ಎಂದು ಸ್ಪಷ್ಟಪಡಿಸಿದೆ.

ಆದರೆ ಇದರ ಆಧಾರದಲ್ಲೂ ಪ್ರಣಯ್ ಪ್ರದರ್ಶನವೇ ಉತ್ಕೃಷ್ಟವಾಗಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರಣಯ್ 2018ರಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದರು. ಮೊದಲ ಬಾರಿಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಾಂಪಿಯನ್ ಆದ ಡಬಲ್ಸ್ ತಂಡದ ಸದಸ್ಯನಾಗಿ ಚಿನ್ನದ ಪದಕ ಗೆದ್ದರು. ವುಹಾನ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಕಂಚು ಗೆದ್ದರು. 2018 ರ ಮೇ ತಿಂಗಳಲ್ಲಿ ವಿಶ್ವದ 8 ನೇ ಶ್ರೇಯಾಂಕವನ್ನು ಗಳಿಸಿದರು.

Story first published: Wednesday, June 3, 2020, 18:53 [IST]
Other articles published on Jun 3, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+