Paris Olympics 2024 Badminton: ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಇಬ್ಬರು ಷಟ್ಲರ್ಸ್ ಮುಖಾಮುಖಿ
ಆಗಸ್ಟ್ 1 ಗುರುವಾರ, ಪ್ಯಾರಿಸ್ ಒಲಿಂಪಿಕ್ 2024ರ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಗುಂಪು ಹಂತದ ಪಂದ್ಯದಲ್ಲಿ ಭಾರತದ ಸ್ಟಾರ್ ಷಟ್ಲರ್ ಎಚ್‌ಎಸ್ ಪ್ರಣೋಯ್ 16-21, 21-11, 21-12 ಸೆಟ್‌ಗಳ ಅಂತರದಿಂದ ವಿಯೆಟ್ನಾಂನ ಲೆ ಡಕ್ ಫಾಟ್ ಅವರನ್ನು ಸೋಲಿಸಿದ್ದಾರೆ.
ಈ ಗೆಲುವಿನೊಂದಿಗೆ ಗುಂಪು ವಿಜೇತರಾಗಿ ಎಚ್‌ಎಸ್ ಪ್ರಣೋಯ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈಗ 16ರ ಸುತ್ತಿನಲ್ಲಿ ತಮ್ಮದೇ ದೇಶದವರಾದ ಲಕ್ಷ್ಯ ಸೇನ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯ ಇಂದು ಸಂಜೆ 5:40 ಗಂಟೆಗೆ ನಡೆಯಲಿದೆ.

ಬುಧವಾರ ಲಾ ಚಾಪೆಲ್ಲೆ ಅರೆನಾದಲ್ಲಿ ನಡೆದ ಪಂದ್ಯದಲ್ಲಿ 13ನೇ ಶ್ರೇಯಾಂಕಿತ ಆಟಗಾರ ಪ್ರಣಯ್ ಅವರು 62 ನಿಮಿಷಗಳಲ್ಲಿ ತಮ್ಮ ಶ್ರೇಯಾಂಕ ರಹಿತ ವಿಯೆಟ್ನಾಂ ಎದುರಾಳಿಯನ್ನು ಸುಲಭವಾಗಿ ಸೋಲಿಸಿದರು . ಕಳೆದ ವರ್ಷ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ 32ರ ಹರೆಯದ ಭಾರತದ ಷಟ್ಲರ್ ಪ್ರಣಯ್ ಮೊದಲ ಗೇಮ್ ನಲ್ಲಿ ಅನಿರೀಕ್ಷಿತ ಸೋಲು ಎದುರಿಸಬೇಕಾಯಿತು.
ಇದಾದ ಬಳಿಕ ಪ್ಯಾರಿಸ್ ಒಲಿಂಪಿಕ್‌ನಲ್ಲಿ ಪ್ರಣಯ್ ಬಲವಾದ ಪುನರಾಗಮನವನ್ನು ಮಾಡುವ ಮೂಲಕ ಎರಡು ಮತ್ತು ಮೂರನೇ ಗೇಮ್‌ಗಳನ್ನು ಸುಲಭವಾಗಿ ಗೆದ್ದು ಪ್ರೀ-ಕ್ವಾಟರ್ ಫೈನಲ್ ಲಗ್ಗೆ ಇಟ್ಟಿದ್ದಾರೆ.
16ನೇ ಸುತ್ತಿನ ಪಂದ್ಯದಲ್ಲಿ ಪ್ರಣಯ್ ವಿರುದ್ಧ ಲಕ್ಷ್ಯ
ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಯುವ ಶಟ್ಲರ್ ಲಕ್ಷ್ಯ ಸೇನ್ 21-18, 21-12ರಲ್ಲಿ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರನ್ನು ಸೋಲಿಸಿ ಪ್ರೀ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಅದೇ ದಿನ ರಾತ್ರಿ ನಡೆದ ಮತ್ತೊಂದು ಪಂದ್ಯದಲ್ಲಿ ವಿಯೆಟ್ನಾಂನ ಲೆ ಡಕ್ ಫಾಟ್ ಅವರನ್ನು 16-21, 21-11, 21-12 ಸೆಟ್‌ಗಳಿಂದ ಎಚ್‌ಎಸ್ ಪ್ರಣೋಯ್ ಸೋಲಿಸಿ ಪ್ರೀ ಕ್ವಾರ್ಟರ್‌ಫೈನಲ್ ಲಗ್ಗೆ ಇಟ್ಟಿದ್ದಾರೆ.
ಇಂದು (ಗುರುವಾರ) ನಡೆಯಲಿರುವ 16ರ ಘಟ್ಟದ ಪಂದ್ಯದಲ್ಲಿ ಭಾರತದ ಈ ಇಬ್ಬರು ಸ್ಟಾರ್ ಷಟ್ಲರ್‌ಗಳು ಮುಖಾಮುಖಿಯಾಗಲಿದ್ದಾರೆ. ಈ ಪಂದ್ಯದ ನಂತರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಬ್ಬರ ಪ್ರಯಾಣ ಕೊನೆಗೊಳ್ಳಲಿದೆ.
ಪ್ರಣಯ್ vs ಲಕ್ಷ್ಯ ಹೆಡ್ ಟು ಹೆಡ್
ಭಾರತದ ಅನುಭವಿ ಶಟ್ಲರ್ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಇದುವರೆಗೆ 7 ಬಾರಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಪ್ರಣಯ್ ಮೇಲೆ ಲಕ್ಷ್ಯ ಸೇನ್ ಪ್ರಾಬಲ್ಯ ಸಾಧಿಸಿದ್ದಾರೆ.
ಇಬ್ಬರ ನಡುವೆ ಆಡಿದ ಒಟ್ಟು 7 ಪಂದ್ಯಗಳಲ್ಲಿ ಲಕ್ಷ್ಯ ಸೇನ್ 4 ಬಾರಿ ಗೆದ್ದರೆ, ಪ್ರಣಯ್ ಮೂರು ಬಾರಿ ಜಯ ಕಂಡಿದ್ದಾರೆ. ಇಬ್ಬರೂ ಆಟಗಾರರು ಕೊನೆಯ ಬಾರಿಗೆ 14 ಜನವರಿ 2022 ರಂದು ಇಂಡಿಯಾ ಓಪನ್‌ನಲ್ಲಿ ಮುಖಾಮುಖಿಯಾಗಿದ್ದರು.
ಈ ವೇಳೆ ಲಕ್ಷ್ಯ 21-14, 9-21, 14-21ರಲ್ಲಿ ಪ್ರಣಯ್ ಅವರನ್ನು ಮಣಿಸಿದರು. ಇದೀಗಾ 2 ವರ್ಷಗಳ ಬಳಿಕ ಸೆಣಸಾಡಲಿರುವ ಭಾರತದ ಇಬ್ಬರು ಶಟ್ಲರ್‌ಗಳ ನಡುವೆ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications