ನಾನೀಗ ಫಿಟ್ ಆಗಿದ್ದೇನೆ, ಅಂಕಣಕ್ಕಿಳಿಯಲು ರೆಡಿಯಾಗಿದ್ದೇನೆ: ಸಿಂಧು

ನವದೆಹಲಿ: 'ಐ ರಿಟೈರ್' ಪೋಸ್ಟ್ ಮೂಲಕ ಬ್ಯಾಡ್ಮಿಂಟನ್ ಪ್ರೇಮಿಗಳಿಗೆ ಚಮಕ್ ನೀಡಿದ್ದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು, ತಾನೀಗ ಸಂಪೂರ್ಣ ಫಿಟ್ ಆಗಿದ್ದೇನೆ. ಆರೋಗ್ಯ ವಿಚಾರದಲ್ಲಷ್ಟೇ ಅಲ್ಲ, ಪಂದ್ಯಾಟಕ್ಕೂ ತಯಾರಾಗಿದ್ದೇನೆ ಎಂದಿದ್ದಾರೆ.
ಸಿಂಧು ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಒಂದು ತುಂಬಾ ವೈರಲ್ ಆಗಿತ್ತು. ನಾನು ನಿವೃತ್ತಿಯಾಗಿದ್ದೇನೆ (ಐ ರಿಟೈರ್) ಎಂದು ಪೋಸ್ಟ್ ಮಾಡಿದ್ದ ಸಿಂಧು, ಪೋಸ್ಟ್‌ನ ಕೊನೆಗೆ ತಾನು ಕೊರೊನಾ ಪಿಡುಗಿನ ವೇಳೆಯ ಭೀತಿ, ಮಾನಸಿಕ ತೊಳಲಾಟ, ನಕಾರಾತ್ಮಕತೆಯಿಂದ ನಿವೃತ್ತಳಾಗಿದ್ದೇನೆ ಎನ್ನುವ ಮೂಲಕ ಅಭಿಮಾನಿಗಳಿಗೆ 'ಮಿನಿ ಹಾರ್ಟ್ ಅಟ್ಯಾಕ್' ನೀಡಿದ್ದರು.
ಕೊರೊನಾ ವೇಳೆಯ ಸಂದರ್ಭಗಳನ್ನು ಸ್ಮರಿಸಿ ಮಾತನಾಡಿರುವ ಸಿಂಧು, 'ನಮ್ಮ ದೈನಂದಿನ ದಿನಚರಿಯನ್ನು ಏಕಾಏಕಿ ನಿಲ್ಲಿಸಬೇಕಾದ ಸಂದರ್ಭ ಬಂದಾಗ ತುಂಬಾ ಕಷ್ಟವಾಗಿತ್ತು. ಎಲ್ಲದಕ್ಕೂ ಬಿಡುವು ನೀಡಿ ನಮ್ಮ ಬಗ್ಗೆ ನಾವು ಜಾಗೃತೆ ವಹಿಸೋದು ಎಷ್ಟು ಮಹತ್ವದ್ದು ಅನ್ನೋದೂ ಅದೇ ಸಮಯಕ್ಕೆ ನನಗೆ ಅರ್ಥವಾಯ್ತು,' ಎಂದಿದ್ದಾರೆ.
'ನಾನೀಗ ಸಂಪೂರ್ಣ ಫಿಟ್ ಆಗಿದ್ದೇನೆ. ಪಂದ್ಯಾಟಗಳಿಗೆ ಸಜ್ಜಾಗುತ್ತಿದ್ದೇನೆ. ಏಷ್ಯಾದಲ್ಲಿನ ಟೂರ್ನಮೆಂಟ್‌ಗಳಿಗೆ ನಾನೀಗ ಎದುರು ನೋಡುತ್ತಿದ್ದೇನೆ,' ಎಂದು ಸಿಂಧು ಹೇಳಿಕೊಂಡಿದ್ದಾರೆ. ಸಿಂಧು ಒಲಿಂಪಿಕ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದಿರುವ ಸಾಧಕಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications