ವರ್ಲ್ಡ್ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಬಂಗಾರ ಗೆದ್ದ ಮಾನಸಿ ಜೋಷಿ

ನವದೆಹಲಿ, ಆಗಸ್ಟ್ 28: ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವರ್ಲ್ಡ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಬಂಗಾರ ಗೆದ್ದ ಮೂವರು ಆಟಗಾರರಲ್ಲಿ ಮಾನಸಿ ಜೋಷಿಯೂ ಒಬ್ಬರು. ಒಂದು ಕಾಲಿಲ್ಲದ ಮಾನಸಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರಬೇಕಾದರೆ ಅದರ ಹಿಂದಿರುವ ಅವರ ಶ್ರಮ ಅರ್ಥವಾಗಬಹುದು.
ಆಗಸ್ಟ್ 25ರಂದು ಮಹಿಳಾ ಸಿಂಗಲ್ಸ್ ಎಸ್‌ಎಲ್3 ವಿಭಾಗದ ಫೈನಲ್‌ನಲ್ಲಿ ಸ್ಪರ್ಧಿಸಿದ್ದ 30ರ ಹರೆಯದ ಮಾನಸಿ, ತನ್ನದೇ ತಂಡದ ವಿಶ್ವ ನಂ.1 ಆಟಗಾರ್ತಿ ಪಾರುಲ್ ಪಾರ್‌ಮರ್ ಅವರನ್ನು 21-12, 21-7ರ ನೇರ ಸೆಟ್‌ನಿಂದ ಹಿಮ್ಮೆಟ್ಟಿಸಿ ಚಿನ್ನದ ಪದಕ ಗೆದ್ದಿದ್ದರು. ಇದೇ ದಿನ ಪಿವಿ ಸಿಂಧು ಕೂಡ ವರ್ಲ್ಡ್ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರ ಗೆದ್ದು ಇತಿಹಾಸ ಬರೆದಿದ್ದರು.
ಮಂಗಳವಾರ (ಆಗಸ್ಟ್ 27) ಟ್ವೀಟ್ ಮಾಡಿದ್ದ ಮಾನಸಿ, 'ಇದನ್ನು ನಾನು ಗಳಿಸಿದ್ದೇನೆ. ಇದಕ್ಕೆ ನಾನು ಅಷ್ಟೇ ಶ್ರಮವಹಿಸಿದ್ದೇನೆ,' ಎಂದು ಬರೆದುಕೊಂಡಿದ್ದರು. ದೇಶಕ್ಕೆ ಚಿನ್ನದ ಗೌರವ ತಂದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿಗೆ ಟ್ವಿಟರ್‌ನಲ್ಲಿ ಶುಭಾಷಯಗಳ ಮಹಾಪೂರ ಹರಿದುಬಂದಿದೆ. 'ವೋಗ್ ಇಂಡಿಯಾ' ಮಹಿಳಾ ಮ್ಯಾಗಝಿನ್, ಮಾನಸಿಯ ಅತ್ಯಾಕರ್ಷಕ ಚಿತ್ರದೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿನಂದಿಸಿದೆ.
'ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಸಿಂಧುವನ್ನು ಮೇಲಕ್ಕಿಡುವ ಭರದಲ್ಲಿ ವರ್ಲ್ಡ್ ಪ್ಯಾರಾ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರ ಗೆದ್ದ ಮಾನಸಿ ಜೋಷಿಯನ್ನು ನಾವು ಮರೆತಿದ್ದೇವೆ. ಅವರನ್ನೂ ಅಭಿನಂದಿಸಬೇಕಿದೆ,' ಎಂದು ಪುದುಚೇರಿ ರಾಜ್ಯಪಾಲೆ ಕಿರಣ್ ಬೇಡಿ ಟ್ವೀಟ್ ಮಾಡಿದ್ದಾರೆ. ಮಾನಸಿ 2011ರಲ್ಲಿ ಅಪಘಾತದಲ್ಲಿ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications