Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಲಿಂಪಿಕ್ಸ್ ಫೈನಲ್ಸ್ ರಿಪೀಟ್: ಸಿಂಧು vs ಮರಿನ್ ಫೈಟ್

ನವದೆಹಲಿ, ಏಪ್ರಿಲ್ 02: ಇಂಡಿಯನ್ ಓಪನ್ ಸೂಪರ್ ಸೀರಿಸ್ 2017ರಲ್ಲಿ ಪಿವಿ ಸಿಂಧು ಅವರು ಕೊರಿಯಾದ ಸಂಗ್‌ ಜೀ ಯೂನ್ ಅವರನ್ನು ಸೋಲಿಸಿ ಫೈನಲಿಗೆ ಲಗ್ಗೆ ಇಟ್ಟಿದ್ದಾರೆ. ಅಂತಿಮ ಹಣಾಹಣಿಯಲ್ಲಿ ಸ್ಪೇನಿನ ಮರೀನ್ಮರಿನ್ ರನ್ನು ಎದುರಿಸಲಿದ್ದಾರೆ. ಕಳೆದ ಒಲಿಂಪಿಕ್ಸ್ ನ ಅಂತಿಮ ಹಣಾಹಣಿಯ ರಿಪೀಟ್ ಪಂದ್ಯ ಇದಾಗಲಿದೆ. ಮರಿನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿಂಧು ಸಜ್ಜಾಗಿದ್ದಾರೆ.

ನವದೆಹಲಿಯಲ್ಲಿ ಭಾನುವಾರ ನಡೆದ ಸೆಮಿಫೈನಲ್ ನಲ್ಲಿ ಕೊರಿಯಾದ ವಿಶ್ವದ ನಂ 4 ಆಟಗಾರ್ತಿ ಜೀ ಯೂನ್ ಅವರನ್ನು 21-18, 14-21, 21-14 ಗಳಿಂದ ಸೋಲಿಸಿ ಫೈನಲ್‌ ಪ್ರವೇಶಿಸಿದರು. ಸಿರಿಫೋರ್ಟ್ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಶುಕ್ರವಾರದಂದು ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಅವರು ಸೈನಾ ನೆಹ್ವಾಲ್ ಅವರನ್ನು ಸಿಂಧು ಮಣಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

 Sindhu enters final, sets up title date with Marin

ಮತ್ತೊಂದು ಉಪಾಂತ್ಯ ಪಂದ್ಯದಲ್ಲಿ ಸ್ಪೇನ್ ದೇಶದ ಮರಿನ್ ಅವರು 21-16, 21-14ರ ನೇರ ಗೇಮ್‌ಗಳಲ್ಲಿ ಜಪಾನ್ ದೇಶದ ಅಕಾನೆ ಯಾಮಾಗುಚಿ ವಿರುದ್ಧ ಜಯ ಗಳಿಸಿ, ಫೈನಲ್ ಪ್ರವೇಶಿಸಿದ್ದಾರೆ.

ರಿಯೋ ಒಲಿಂಪಿಕ್ಸ್ ನಲ್ಲಿ ಅಂತಿಮ ಹಣಾಹಣಿಯಲ್ಲಿ ಸ್ಪೇನಿನ ಕರೋಲಿನ್ ಮರೀನ್ ಅವರು ಗೆಲುವು ಸಾಧಿಸಿದ್ದರು. ಸಿಂಧು ಅವರು ಬೆಳ್ಳಿಗೆ ತೃಪ್ತಿ ಪಟ್ಟಿದ್ದರು.

ಮರಿನ್ ವಿರುದ್ಧದ ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿ, ದುಬೈ ಫೈನಲ್ಸ್ ನಲ್ಲಿ ನಾನು ಜಯ ಗಳಿಸಿದ್ದೆ. ಪಿಬಿಎಲ್ ನಲ್ಲಿ ನನ್ನನ್ನು ಆಕೆ ಸೋಲಿಸಿದರು. ಈಗ ದೆಹಲಿಯಲ್ಲಿ ಉತ್ತಮ ಬೆಂಬಲದೊಂದಿಗೆ ಜಯದ ನಿರೀಕ್ಷೆಯಲ್ಲಿದ್ದೇನೆ ಎಂದರು.

ಚೀನಾ ಓಪನ್ ಸೀರಿಸ್, ಹಾಂಕಂಗ್ ಓಪನ್ ಫೈನಲ್, ಪ್ರೀಮಿಯರ್ ಬಾಡ್ಮಿಂಟನ್ ಲೀಗ್ (ಪಿಬಿಎಲ್) ನಲ್ಲಿ ಚೆನ್ನೈ ಸ್ಮಾಶರ್ಸ್ ಗೆ ಕಪ್, ಸೈಯದ್ ಮೋದಿ ಇಂಟರ್ ನ್ಯಾಷನಲ್ ಗ್ರಾನ್ ಪ್ರೀಯಲ್ಲಿ ಜಯದೊಂದಿಗೆ ವರ್ಷಾರಂಭ ಮಾಡಿದ ಸಿಂಧು ಈಗ ಇಂಡಿಯನ್ ಓಪನ್ ಸೀರಿಸ್ ಫೈನಲ್ ತಲುಪಿದ್ದಾರೆ. (ಪಿಟಿಐ)

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+