Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ಬ್ಯಾಡ್ಮಿಂಟನ್ ಡಬಲ್ಸ್ ಕೋಚ್ ತಾನ್ ಕಿಮ್ ಹರ್ ರಾಜೀನಾಮೆ

India’s doubles badminton coach Tan Kim Her resigns

ನವದೆಹಲಿ, ಮಾರ್ಚ್ 2: ಭಾರತದ ಬ್ಯಾಡ್ಮಿಂಟನ್ ಡಬಲ್ಸ್‌ಗೆ ತರಬೇತುದಾರರಾಗಿದ್ದ ಮಲೇಷ್ಯನ್ ಕೋಚ್ ತಾನ್ ಕಿಮ್ ಹರ್ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಕ್ಕೆ ಕೋಚ್ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಕಿಮ್ ಹರ್ ಹೇಳಿಕೊಂಡಿದ್ದಾರೆ.

47ರ ಹರೆಯದ ತಾನ್ ಕಿಮ್ ಹರ್ ಒಂದೂವರೆ ವರ್ಷಗಳ ಕಾಲ ರಾಷ್ಟ್ರೀಯ ಬ್ಯಾಡ್ಮಿಂಟನ್ ಡಬಲ್ಸ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. 2020ರ ಟೋಕಿಯೋ ಒಲಿಂಪಿಕ್ಸ್‌ ಬಳಿಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ)ದೊಂದಿಗಿನ ಅವರ ಒಪ್ಪಂದ ಮುಗಿಯುವುದರಲ್ಲಿತ್ತು. ಆದರೆ ಕಾಲಾವಧಿಗೂ ಮುನ್ನವೇ ತಾನ್ ಕಿಮ್ ರಾಜೀನಾಮೆ ನೀಡಿದ್ದಾರೆ.

'ಹೌದು. ತಾನ್ ಕಿಮ್ ಹರ್ ಅವರು ಡಬಲ್ಸ್ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸುಮಾರು ಒಂದು ತಿಂಗಳ ಮುಂಚೆಯೇ ಈ ನಿರ್ಧಾರವನ್ನು ಅವರು ತಿಳಿಸಿದ್ದರು. ಕೌಟುಂಬಿಕ ಕಾರಣದಿಂದಾಗಿ ತಾನ್ ಕಿಮ್ ಅವರು ಸೀನಿಯರ್ ನ್ಯಾಷನಲ್ಸ್ ಟೂರ್ನಿಯ ವೇಳೆ ಭಾರತದಿಂದ ತವರಿಗೆ ತೆರಳಿದ್ದರು' ಎಂದು ಬಿಎಐ ಕಾರ್ಯದರ್ಶಿ ಓಮರ್ ರಶೀದ್ ಮಾಹಿತಿ ನೀಡಿದ್ದಾರೆ.

Story first published: Saturday, March 2, 2019, 17:30 [IST]
Other articles published on Mar 2, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+