ಮಕಾವ್, ನವೆಂಬರ್, 29: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಮತ್ತೊಂದು ಸಾಧನೆ ಮುಡಿಗೇರಿಸಿಕೊಂಡಿದ್ದಾರೆ. ಪಿ.ವಿ. ಸಿಂಧು 120,000 ಡಾಲರ್ ಬಹುಮಾನದ "ಮಕಾವ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ'ಯ ಚಾಂಪಿಯಮ್ ಆಗಿ ಹೊರಹೊಮ್ಮಿದ್ದಾರೆ.
ಭಾನುವಾರ ನಡೆದ ಫೈನಲ್‌ನಲ್ಲಿ ಭರ್ಜರಿ ಜಯಗಳಿಸಿ ಪ್ರಶಸ್ತಿಯ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಜಪಾನಿನ ಮಿನಾತ್ಸು ಮಿಟಾನಿ ವಿರುದ್ಧ 21-9, 21-23, 21-14 ಅಂತರದ ಗೆಲುವು ಸಾಧಿಸಿ ಪಿವಿ ಸಿಂಧು ಸಂಭ್ರಮಿಸಿದರು. ಮೊದಲ ಪಂದ್ಯವನ್ನು ಸಿಂಧು 10 ಅಂಕಗಳ ಅಂತರದಲ್ಲಿ ಗೆದ್ದುಕೊಂಡಿದ್ದರು.

ಇದು ಪಿವಿ ಸಿಂಧು ಅವರಿಗೆ ಹ್ಯಾಟ್ರಿಕ್ ಪ್ರಶಸ್ತಿಯ ಗರಿ ತಂದು ಕೊಟ್ಟಿದೆ. ಸಿಂಧು ಸೆಮಿಫೈನಲ್ ನಲ್ಲಿ ಜಪಾನಿನ ಅಕಾನೆ ಯಮಗುಚಿ ವಿರುದ್ಧ ಗೆಲುವು ಸಾಧಿಸಿ ಪೈನಲ್ ಗೆ ಏರಿದ್ದರು.