17 ವರ್ಷಗಳ ಬಳಿಕ ಭಾರತದಲ್ಲಿ BWF ವಿಶ್ವ ಚಾಂಪಿಯನ್‌ಶಿಪ್ ಆಯೋಜನೆ
ಭಾರತದ ಬ್ಯಾಡ್ಮಿಂಟನ್ ಅಭಿಮಾನಿಗಳಿಗೆ ಗುಡ್ ನ್ಯೂಸ್.. ಭಾರತವು 17 ವರ್ಷಗಳ ಬಳಿಕ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ಆತಿಥ್ಯವಹಿಸಲಿದೆ. 2009ರಲ್ಲಿ ಭಾರತ ಕೊನೆಯ ಬಾರಿಗೆ ಈ ಟೂರ್ನಿಯನ್ನು ಆಯೋಜಿಸತ್ತು. ಆಗ ಈ ಟೂರ್ನಿಯನ್ನು ಹೈದರಾಬಾದ್ ಆಯೋಜಿಸಿತ್ತು. ಈ ಬಾರಿಯ ಟೂರ್ನಿಯನ್ನು ದೆಹಲಿ ಆಯೋಜಿಸಲಿದೆ ಎಂದು ತಿಳಿದಿದೆ. ಸೋಮವಾರ ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟವು ಈ ಬಗ್ಗೆ ಘೋಷಣೆ ಮಾಡಿದೆ.
ಫ್ರಾನ್ಸ್‌ನ ಪ್ಯಾರೀಸ್‌ನಲ್ಲಿ ನಡೆದ 29ನೇ ಆವೃತ್ತಿಯ ಸಮಾರಂಭ ನಡೆದಾಗ ಈ ಬ್ಗೆ ಘೋಷಣೆ ಮಾಡಲಾಗಿದೆ. ಈ ಘೋಷಣೆಯ ವೇಳೆ ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟದ ಅಧ್ಯಕ್ಷ ಖುನ್ಯಿಂಗ್ ಪಟಮಾ ಲೀಸ್ವಡ್ಟ್ರಾಕುಲ್ ಮತ್ತು ಭಾರತೀಯ ಬ್ಯಾಡ್ಮಿಂಟನ್ ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ ಹಾಜರಿದ್ದರು. ಪ್ಯಾರಿಸ್‌ನಲ್ಲಿ ಪ್ರದರ್ಶಿಸಲಾದ ಭವ್ಯತೆಯನ್ನು ಭಾರತವು ಕಾಪಾಡಿಕೊಳ್ಳುತ್ತದೆ ಎಂದು ಮಿಶ್ರಾ ಭರವಸೆ ನೀಡಿದರು.

ಪ್ಯಾರಿಸ್ ಸಂಸ್ಕೃತಿ, ಭವ್ಯತೆಯ ಅದೇ ಮಾನದಂಡಗಳನ್ನು ಕಾಪಾಡಿಕೊಳ್ಳಲು ಮತ್ತು ಮುನ್ನಡೆಸಲು ಭಾರತವು ತನ್ನ 100 ಪ್ರತಿಶತ ಪ್ರಯತ್ನಿಸುತ್ತದೆ. ಬ್ಯಾಡ್ಮಿಂಟನ್ ಕುಟುಂಬವನ್ನು ದೆಹಲಿಗೆ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಸಂಜಯ್ ಮಿಶ್ರಾ ಹೇಳಿದರು. ಪ್ಯಾರೀಸ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಭಾರತ ಕೇವಲ 1 ಪದಕವನ್ನು ಗೆದ್ದಿದೆ. ಭಾರತದ ಪರವಾಗಿ, ಸಾತ್ವಿಕ್ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಪುರುಷರ ಡಬಲ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಈ ಜೋಡಿ 16 ನೇ ಸುತ್ತಿನಲ್ಲಿ ಚೀನಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಇನ್ನು ಎಂಟರ ಘಟ್ಟದ ಪಂದ್ಯದಲ್ಲಿ ಸಾತ್ವಿಕ್ ಚಿರಾಗ್ ಜೋಡಿ 2ನೇ ಶ್ರೇಯಾಂಕಿತ ಮಲೇಷ್ಯಾದ ಆರನ್ ಚಿಯಾ/ಸೋಹ್ ವೂಯಿ ಯಿಕ್ ಅವರನ್ನು 21-12, 21-19 ಅಂತರದಲ್ಲಿ ಸೋಲಿಸಿತು. ಆದರೆ ಸೆಮಿಫೈನಲ್‌ನಲ್ಲಿ ಚೀನಾ ಆಟಗಾರರ ವಿರುದ್ಧ ನಿರಾಸೆ ಅನುಭವಿಸಿತು.
ಭಾರತದ ಸಾಧನೆ
ಭಾರತ ಎರಡನೇ ಬಾರಿಗೆ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ಅನ್ನು ಆಯೋಜಿಸುವ ಕನಸು ಕಾಣುತ್ತಿದೆ. 2009ರಲ್ಲಿ ಭಾರತ ಆಯೋಜಿಸಿದ್ದ ಟೂರ್ನಿಯಲ್ಲೂ ಚೀನಾ ಅಗ್ರ ಸ್ಥಾನವನ್ನು ಪಡೆದಿತ್ತು. ಈ ಟೂರ್ನಿಯಲ್ಲಿ ಭಾರತ ಆಟಗ ಒಂದೇ ಒಂದು ಪದಕ ಗೆದ್ದಿರಲಿಲ್ಲ. ಭಾರತ ಈ ವರೆಗೆ ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 15 ಪದಕಗಳನ್ನು ಗೆದ್ದಿದೆ. ಇದರಲ್ಲಿ 1 ಬಂಗಾರ, 3 ಬೆಳ್ಳಿ ಹಾಗೂ 11 ಕಂಚಿನ ಪದಕಗಳು ಸೇರಿವೆ. ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಭಾರತದ ಪರ ಅತಿ ಹೆಚ್ಚು ಪದಕ ಗೆದ್ದ ಕ್ರೀಡಾ ಪಟು. ಇವರು ಒಂದು ಬಂಗಾರ, 2 ಬೆಳ್ಳಿ, 2 ಕಂಚಿನ ಸಾಧನೆ ಮಾಡಿದ್ದಾರೆ.
ಸ್ಟಾರ್ ಸೈನಾ ನೆಹ್ವಾಲ್ 2 ಕಂಚಿನ ಸಾಧನೆ ಮಾಡಿದ್ದಾರೆ. ಇನ್ನು ಕೆ ಶ್ರೀಕಾಂತ್ 1 ಬೆಳ್ಳಿ ಪದಕ ಗೆದ್ದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications