ಭಾರತೀಯ ಬ್ಯಾಡ್ಮಿಂಟನ್ ದಂತಕತೆ ನಂದು ನಾಟೇಕರ್ ನಿಧನ

ನವದೆಹಲಿ: 1956ರಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಚೊಚ್ಚಲ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದ್ದ ಬ್ಯಾಡ್ಮಿಂಟನ್ ದಂತಕತೆ ನಂದು ನಾಟೇಕರ್ ಅವರು ಬುಧವಾರ (ಜುಲೈ 28) ಸಾವನ್ನಪ್ಪಿದ್ದಾರೆ. ಸುದೀರ್ಘ ವೃತ್ತಿ ಜೀವನ ಕಂಡಿದ್ದ ನಂದು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.
88 ವರ್ಷ ಪ್ರಾಯವಾಗಿದ್ದ ನಂದು ನಾಟೆಕರ್, ತನ್ನ ವೃತ್ತಿ ಬದುಕಿನಲ್ಲಿ 100ಕ್ಕೂ ಅಧಿಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನಾಟೇಕರ್ ಅವರು ತಮ್ಮ ಪುತ್ರ ಗೌರವ್ ನಾಟೇಕರ್ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
"ಅವರು (ನಾಟೇಕರ್) ನೆಮ್ಮದಿಯಾಗಿ ಕೊನೆಯುಸಿರೆಳೆದಿದ್ದಾರೆ. ಅವರ ಕೊನೇ ಘಳಿಗೆಯಲ್ಲಿ ನಾವೆಲ್ಲರೂ ಅವರ ಜೊತೆಗಿದ್ದೆವು. ಕಳೆದ ಕೆಲವಾರು ತಿಂಗಳುಗಳಿಂದ ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಅಂತೂ ಅವರು ಶಾಂತಿಯುತವಾಗಿ ನಮ್ಮನ್ನಗಲಿದ್ದಾರೆ," ಎಂದು ಗೌರವ್ ಪಿಟಿಐಗೆ ತಿಳಿಸಿದ್ದಾರೆ.
ತಾನು ಆಡುತ್ತಿದ್ದ ಸಮಯ ನಾಟೇಕರ್ ಅವರು ದೇಶದಲ್ಲಿ ಅತೀ ಹೆಚ್ಚು ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಬ್ಯಾಡ್ಮಿಂಟನ್‌ನಲ್ಲಿ ನಂದು ಅವರು ವಿಶ್ವ 3ನೇ ಶ್ರೇಯಾಂಕಕ್ಕೇರಿದ್ದರು. ನಂದು ಜನಿಸಿದ್ದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ. ಅವರಿಗೆ 1961ರಲ್ಲಿ ಅರ್ಜುನ ಪ್ರಶಸ್ತಿ ಲಭಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications