ಇಂಡೋನೇಷ್ಯಾ ಓಪನ್: ಕ್ವಾರ್ಟರ್‌ಫೈನಲ್ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿದ ಪ್ರಣಯ್
ಪುರುಷರ ಸಿಂಗಲ್ಸ್ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಭಾರತದ ಶಟ್ಲರ್ ಹೆಚ್‌ಎಸ್ ಪ್ರಣಯ್ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. 3ನೇ ಶ್ರೇಯಾಂಕದ ಕೊಡೈ ನರೋಕಾ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿದ 7ನೇ ಶ್ರೇಯಾಂಕದ ಎಚ್‌ಎಸ್ ಪ್ರಣಯ್ ಈ ಸಾಧನೆ ಮಾಡಿದ್ದಾರೆ. ಇಂಡೋನೇಷ್ಯಾ ಓಪನ್‌ನಲ್ಲಿ ಪ್ರಣಯ್ ಅವರ ಮೂರನೇ ಸೆಮಿಫೈನಲ್ ಪ್ರವೇಶವಾಗಿದೆ.
ಇಂಡೋನೇಷ್ಯಾ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಉಳಿದಿರುವ ಏಕೈಕ ಭಾರತೀಯ ಶಟ್ಲರ್ ಆಗಿದ್ದಾರೆ ಪ್ರಣಯ್. ಎದುರಾಳಿ ನರವೋಕಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಹಿಮ್ಮೆಟ್ಟಿಸಿದ ಎಚ್‌ಎಸ್ ಪ್ರಣಯ್ ಅದ್ಭುತವಾಗಿ ಮೇಲುಗೈ ಸಾಧಿಸುತ್ತಾ ಸಾಗಿದ್ದಾರೆ. ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತ ಪ್ರಣಯ್ ನರೋಕಾ ಅವರನ್ನು ಅಂಗಳದಾದ್ಯಂತ ಓಡುವಂತೆ ಮಾಡಿದರು. ಕೇವಲ 55 ನಿಮಿಷಗಳಲ್ಲಿ 21-18, 21-16 ಅಂತರದಲ್ಲಿ ಪ್ರಣಯ್ ಜಯಗಳಿಸಿದ್ದಾರೆ.

ಎಚ್‌ಎಸ್ ಪ್ರಣಯ್ ಜಕಾರ್ತದಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಸೆಮಿಫೈನಲ್‌ಗೆ ತೆರಳುವ ಮುನ್ನ ಅವರು ಕೆಂಟಾ ನಿಶಿಮೊಟೊ, ಎನ್‌ಜಿ ಕಾ ಲಾಂಗ್ ಆಂಗಸ್ ಮತ್ತು ನರೊಕಾ ಅವರನ್ನು ಮಣಿಸಿದ್ದು ಅರ್ಹವಾಗಿಯೇ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ ತಮ್ಮ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ಲಿ ಶಿ ಫೆಂಗ್ ವಿರುದ್ಧ ಸೋಲುಕಂಡಿದ್ದಾರೆ. ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರನ್ನು ಮಣಿಸಿದ್ದ ವಿಶ್ವದ ನಂ.20 ಆಟಗಾರ ಚೀನಾದ ಶಟ್ಲರ್ ವಿರುದ್ಧ ತೀವ್ರ ಪೈಪೋಟಿ ನಡೆಸಿ ಸೋಲು ಕಂಡಿದ್ದಾರೆ. 14-21, 21-14, 12-21 ಅಂತರದಲ್ಲಿ ಸೋಲುವ ಮೂಲಕ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications