Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Indonesia Open 2023: ದಕ್ಷಿಣ ಕೊರಿಯಾ ಮಣಿಸಿ ಫೈನಲ್ ತಲುಪಿದ ಭಾರತದ ಸಾತ್ವಿಕ್-ಚಿರಾಗ್ ಜೋಡಿ

ಶನಿವಾರ, ಜೂನ್ 17ರಂದು ಜಕಾರ್ತದಲ್ಲಿ ನಡೆದ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಸೆಮಿಫೈನಲ್ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್ ದಕ್ಷಿಣ ಕೊರಿಯಾದ ಕಾಂಗ್ ಮಿನ್ ಹ್ಯುಕ್-ಸಿಯೊ ಸೆಯುಂಗ್ ಜೇ ಜೋಡಿಯನ್ನು 17-21, 21-19, 21-18 ಸೆಟ್‌ಗಳಿಂದ ಸೋಲಿಸಿದ ಭಾರತ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಪ್ರಶಸ್ತಿ ಹಂತ ತಲುಪಿದೆ.

ಇಂಡೋನೇಷ್ಯಾ ಓಪನ್ ವರ್ಲ್ಡ್ ಟೂರ್ ಸೂಪರ್ 1000 ಪಂದ್ಯಾವಳಿಯಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಡಬಲ್ಸ್ ಜೋಡಿಯ ಮೊದಲ ಫೈನಲ್ ಪ್ರವೇಶವಾಗಿದೆ.

Indonesia Open 2023


2022ರ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಭಾರತದ ಡಬಲ್ಸ್ ಜೋಡಿಯು ದಕ್ಷಿಣ ಕೊರಿಯಾದ ಕಾಂಗ್ ಮಿನ್ ಹ್ಯುಕ್ ಮತ್ತು ಸಿಯೊ ಸೆಯುಂಗ್ ಜೇ ಜೋಡಿಯನ್ನು ರೋಚಕವಾಗಿ ಸೋಲಿಸಿ, ಯಾವುದೇ ಸೂಪರ್ 1000 ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪ್ರಸ್ತುತ ವಿಶ್ವದ ನಂ.6 ಶ್ರೇಯಾಂಕದ ಸಾತ್ವಿಕ್-ಚಿರಾಗ್ ಮೊದಲ ಗೇಮ್ ಅನ್ನು 17-21 ರಲ್ಲಿ ಸೋತರು. ಆದರೆ BWF ವಿಶ್ವ ಶ್ರೇಯಾಂಕದಲ್ಲಿ 12ನೇ ಸ್ಥಾನದಲ್ಲಿರುವ ದಕ್ಷಿಣ ಕೊರಿಯಾದ ಕಾಂಗ್-ಸಿಯೊ ಜೋಡಿಯನ್ನು ಸೋಲಿಸಲು ಮುಂದಿನ ಎರಡು ಗೇಮ್‌ಗಳನ್ನು ಗೆಲ್ಲಲು ಆಕ್ರಮಣಕಾರಿ ಆಟಕ್ಕಿಳಿದರು. 67 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಜೋಡಿ ಗೆದ್ದು ಬೀಗಿತ್ತು.

Indonesia Open 2023

ಭಾರತದ ಸಾತ್ವಿಕ್-ಚಿರಾಗ್ ಜೋಡಿಯು ವಿಶ್ವ ನಂ.3 ಶ್ರೇಯಾಂಕದ ಮಲೇಷ್ಯಾದ ಆರೋನ್ ಚಿಯಾ-ಸೋಹ್ ವೂಯಿ ಯಿಕ್ ಮತ್ತು ವಿಶ್ವ ನಂ.25 ಶ್ರೇಯಾಂಕದ ಇಂಡೋನೇಷ್ಯಾದ ಪ್ರಮುದ್ಯ ಕುಸುಮವರ್ದನಾ-ಯೆರೆಮಿಯಾ ರಂಬಿಟನ್ ನಡುವಿನ 2ನೇ ಸೆಮಿಫೈನಲ್ ವಿಜೇತರನ್ನು ಎದುರಿಸಲಿದ್ದಾರೆ.

ಇದಕ್ಕೂ ಮೊದಲು ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಜೋಡಿ ಇಂಡೋನೇಷ್ಯಾ ಓಪನ್‌ನ ಪುರುಷರ ಡಬಲ್ಸ್ ಸೆಮಿಫೈನಲ್‌ಗೆ ಲಗ್ಗೆ ಇಡಲು ಅಗ್ರ ಶ್ರೇಯಾಂಕದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಅರ್ಡಿಯಾಂಟೊ ಅವರನ್ನು ಸೋಲಿಸಿದ್ದರು.

Indonesia Open 2023

ಇನ್ನು ಮಲೇಷ್ಯಾ ಮಾಸ್ಟರ್ಸ್ ಚಾಂಪಿಯನ್ ಎಚ್‌ಎಸ್ ಪ್ರಣಯ್ ಅವರು ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಎದುರಿಸಲಿದ್ದಾರೆ.

ಕ್ವಾರ್ಟರ್ ಫೈನಲ್‌ನಲ್ಲಿ ಎಚ್‌ಎಸ್ ಪ್ರಣಯ್ ಅವರು ಜಪಾನ್‌ನ ಕೊಡೈ ನರೋಕಾ ಅವರನ್ನು ನೇರ ಗೇಮ್‌ಗಳ ಮೂಲಕ ಸೋಲಿಸಿ ಪುರುಷರ ಸಿಂಗಲ್ಸ್ ಸೆಮಿಫೈನಲ್ ತಲುಪಿದ್ದಾರೆ. ಏಳನೇ ಶ್ರೇಯಾಂಕದ ಭಾರತದ ಬ್ಯಾಡ್ಮಿಂಟನ್ ತಾರೆ ಪ್ರಣಯ್ 55 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 3ನೇ ಶ್ರೇಯಾಂಕದ ಜಪಾನ್ ಷಟ್ಲರ್‌ನನ್ನು 21-18, 21-16 ಗೇಮ್‌ಗಳಿಂದ ಮಣಿಸಿದ್ದರು.

Story first published: Saturday, June 17, 2023, 18:14 [IST]
Other articles published on Jun 17, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+