ಇಂಡೋನೇಷ್ಯಾ ಓಪನ್ 2023ರಲ್ಲಿ ಇಂದು ಭಾರತದ ಇಬ್ಬರು ಬಲಿಷ್ಠ ಶಟ್ಲರ್‌ಗಳು ಮುಖಾಮುಖಿಯಾಗಿದ್ದರು. ಕಿಡಂಬಿ ಶ್ರೀಕಾಂತ್ ಹಾಗೂ ಲಕ್ಷ್ಯ ಸೇನ್ ಕ್ವಾರ್ಟರ್‌ಫೈನಲ್‌ಗಾಗಿ ನಡೆದ ಸೆಣೆಸಾಟದ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಈ ರೋಚಕ ಸೆಣೆಸಾಟದಲ್ಲಿ ಕಿಡಂಬಿ ಶ್ರೀಕಾಂತ್ ಲಕ್ಷ್ಯ ಸೇನ್ ವಿರುದ್ಧ ಗೆದ್ದು ಬೀಗಿದ್ದಾರೆ.
16ರ ಘಟ್ಟದ ಈ ಪಂದ್ಯ 45 ನಿಮಿಷಗಳ ಕಾಲ ನಡೆನಡೆದಿದ್ದು ಈ ಸೆಣೆಸಾಟದಲ್ಲಿ ಶ್ರೀಕಾಂತ್ ಲಕ್ಷ್ಯ ಸೇನ್ ಅವರನ್ನು 21-17, 22-20 ಅಂಕಗಳಿಂದ ಸೋಲಿಸಿದ್ದಾರೆ. ಈ ಮೂಲಕ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು. ನಿರೀಕ್ಷೆಯಂತೆಯೇ ಇಬ್ಬರು ಆಟಗಾರರಿಂದ ತೀವ್ರ ಪೈಪೋಟಿಯ ಸೆಣೆಸಾಟ ನಡೆದರೂ ಶ್ರೀಕಾಂತ್ ನೇರ ಸೆಟ್‌ಗಳ ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ಆಟಗಾರರು ಕೂಡ ಈ ಪಂದ್ಯಕ್ಕೂ ಮುನ್ನ ಅದ್ಭುತ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಕಣಕ್ಕಿಳಿದಿದ್ದರು. ಸೇನ್ ಅವರು ಮಾಜಿ ವಿಶ್ವ ನಂ.2 ಲೀ ಜಿ ಜಿಯಾ ಅವರನ್ನು 21-17, 21-13 ನೇರ ಗೇಮ್‌ಗಳಲ್ಲಿ ಸೋಲಿಸಿದರೆ, ಶ್ರೀಕಾಂತ್ ಚೀನಾದ ಲು ಗುವಾಂಗ್ ಜು ಅವರನ್ನು 21-13, 21-19 ರಿಂದ ಮಣಿಸಿ ಅಂತಿಮ 16ರ ಘಟ್ಟಕ್ಕೆ ಪ್ರವೇಶಿಸಿದ್ದರು.
ಈ ಪಂದ್ಯ ಆರಂಭದಿಂದಲೂ ಸಮಬಲದಿಂದ ಕೂಡಿತ್ತು. ಆದರೆ ಸೇನ್ ಗೇಮ್ 1ರಲ್ಲಿ ಮೊದಲಾರ್ಧದಲ್ಲಿ 11-10 ಅಂತರದಿಂದ ಮುನ್ನಡೆ ಸಾಧಿಸಿದ್ದರು. ಆದರೆ ಪಂದ್ಯವನ್ನು ಪುನರಾರಂಭಿಸಿದ ಬಳಿಕ ಶ್ರೀಕಾಂತ್ ಮುನ್ನಡೆ ಸಾಧಿಸಿದರು. ಆದರೆ ಇಬ್ಬರೂ ಅಂಕಗಳನ್ನು ವಿನಿಮಯ ಮಾಡಿಕೊಳ್ಳುತ್ತಲೇ ಇದ್ದರು. ಹಾಗಿದ್ದರೂ ಶ್ರೀಕಾಂತ್ ಮಾಡಿದ ಒಂದೆರಡು ತಪ್ಪುಗಳು ಸೇನ್ ಮತ್ತೆ ಸ್ಪರ್ಧೆಗೆ ಬರಲು ಅವಕಾಶ ಮಾಡಿಕೊಟ್ಟತ್ತು. ಅಂತಿಮ ಹಂತದಲ್ಲಿ ಶ್ರೀಕಾಂತ್ ಮೊದಲ ಗೇಮನ್ನು ತಮ್ಮ ಪರವಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಇನ್ನು ಎರಡನೇ ಸೆಟ್ ಕೂಡ ಬಹಳ ಪೈಪೋಟಿಯಿಂದ ಕೂಡಿತ್ತು. ಇಬ್ಬರೂ ಇನ್ನೊಬ್ಬರಿಗೆ ಮುನ್ನಡೆ ನೀಡಲು ಸಿದ್ಧರಿಲ್ಲ ಎಂಬಂತಿತ್ತು ಈ ಸೆಣೆಸಾಟ. ಇದು ಒಂದು ಹಂತದಲ್ಲಿ ಇದು 10-10 ಅಂತರದಲ್ಲಿತ್ತು. ಈ ಹಂತದಲ್ಲಿ ಸೇನ್ ಮತ್ತೊಮ್ಮೆ ಮುನ್ನಡೆ ಸಾಧಿಸಿದರು. ಈ ಸಂದರ್ಭದಲ್ಲಿ ಶ್ರೀಕಾಂತ್ ತಮ್ಮಲ್ಲಿದ್ದ ಬಲಿಷ್ಠ ಅಸ್ತ್ರಗಳನ್ನು ಪ್ರಯೋಗಿಸಲು ಆರಂಭಿಸಿದರು. ಹೀಗಾಘಿ ಆರು ಗೇಮ್‌ಗಳ ಮುನ್ನಡೆಯೊಂದಿಗೆ ಎರಡನೇ ಸೆಟ್ಟನ್ನು ಕೂಡ 20-14 ಅಂತರದಿಂದ ತಮ್ಮ ವಶಕ್ಕೆ ಪಡೆದುಕೊಂಡರು.