Indonesia Open 2023: ಸೂಪರ್ 1000 ಟೂರ್ನಿಯಲ್ಲಿ ಡಬಲ್ಸ್ ಪ್ರಶಸ್ತಿ ಗೆದ್ದ ಸಾತ್ವಿಕ್-ಚಿರಾಗ್ ಜೋಡಿ
ಭಾನುವಾರ, ಜೂನ್ 18ರಂದು ಜಕಾರ್ತಾದಲ್ಲಿ ನಡೆದ 2023ರ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ 1000 ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಡಬಲ್ಸ್ ಜೋಡಿ ಎಂಬ ಹೆಗ್ಗಳಿಕೆಗೆ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪಾತ್ರರಾದರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಮತ್ತು ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ವಿಶ್ವದ ನಂ.6 ಶ್ರೇಯಾಂಕದ ಜೋಡಿ, ಜಕಾರ್ತದಲ್ಲಿ ನಡೆದ 2 ಗೇಮ್‌ಗಳ ರೋಚಕ ಹೋರಾಟದಲ್ಲಿ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕಾ ಜೋಡಿಯನ್ನು ಸೋಲಿ ಇತಿಹಾಸವನ್ನು ಬರೆದಿದ್ದಾರೆ.

ಇಂಡೋನೇಷ್ಯಾ ಓಪನ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಅವರ ಗೆಲುವು ಅಭೂತಪೂರ್ವವಾಗಿತ್ತು. ಈ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಡಬಲ್ಸ್ ಜೋಡಿಯಾಗಿದ್ದಾರೆ. ಇದಕ್ಕೂ ಮೊದಲು ಸೈನಾ ನೆಹ್ವಾಲ್ (2010, 2012) ಮತ್ತು ಕಿಡಂಬಿ ಶ್ರೀಕಾಂತ್ (2017) ಈ ಹಿಂದೆ ಜಕಾರ್ತಾದಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಇತಿಹಾಸ ರಚಿಸಿದ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ
ಜಕಾರ್ತದಲ್ಲಿ ಭಾನುವಾರ ನಡೆದ ಇಂಡೋನೇಷ್ಯಾ ಓಪನ್‌ನ ಪುರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಮಲೇಷ್ಯಾದ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ಅವರನ್ನು 21-17, 21-18 ನೇರ ಸೆಟ್‌ಗಳಿಂದ ಮಣಿಸಿದರು.
ಮೊದಲು ಭಾರತೀಯ ಜೋಡಿ ನಿಧಾನಗತಿಯ ಆರಂಭ ಪಡೆದರು. ಆದರೆ ನೇರ ಗೇಮ್‌ಗಳಲ್ಲಿ ಪಂದ್ಯವನ್ನು ಗೆಲ್ಲಲು ಆಕ್ರಮಣಕಾರಿ ಆಟದ ಮೊರೆ ಹೋದರು. ಅಂತಿಮವಾಗಿ ಭಾರತದ ಜೋಡಿ ತಮ್ಮ ಮೊದಲ ಸೂಪರ್ 1000 ಪ್ರಶಸ್ತಿಯನ್ನು ಗೆದ್ದು ಇತಿಹಾಸ ಬರೆದರು.
ಏಷ್ಯನ್ ಚಾಂಪಿಯನ್ ಕೂಡ ಆಗಿರುವ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿಯ ಎದುರು ಕೇವಲ 43 ನಿಮಿಷಗಳಲ್ಲಿ ಹಾಲಿ ವಿಶ್ವ ಚಾಂಪಿಯನ್ಸ್ ಜೋಡಿ ಮಂಡಿಯೂರಿದರು. ಮೊದಲ ಗೇಮ್‌ನ ಆರಂಭದಲ್ಲಿ ಭಾರತೀಯರು ಎಡವಿದರೆ, ಆ ಬಳಿಕ ಎಚ್ಚೆತ್ತುಕೊಂಡು ವೇಗವನ್ನು ಹೆಚ್ಚಿಸಿಕೊಂಡರು, ಮಧ್ಯದ ವಿರಾಮದ ವೇಳೆಗೆ 11-9 ರಿಂದ ಮುನ್ನಡೆ ಪಡೆದರು.
ಮತ್ತೊಂದೆಡೆ, ಎರಡನೇ ಗೇಮ್‌ನ ಪ್ರಕ್ರಿಯೆಯಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ ಪ್ರಾಬಲ್ಯ ಮೆರೆದರು. ಮಲೇಷಿಯಾದ ಜೋಡಿ ಕೊನೆಗೆ ಗೆಲುವಿನ ಹತ್ತಿರ ಬಂದರೂ, ಭಾರತೀಯರ ಆಕ್ರಮಣಕಾರಿ ಆಟಕ್ಕೆ ಸೋಲಬೇಕಾಯಿತು.
ಇದಕ್ಕೂ ಮೊದಲು ಭಾರತದ ಸ್ಟಾರ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಶನಿವಾರ ಜಕಾರ್ತದಲ್ಲಿ ನಡೆದ ಇಂಡೋನೇಷ್ಯಾ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದು ಫೈನಲ್‌ಗೆ ಪ್ರವೇಶಿಸಿದರು.
ಬ್ಯಾಡ್ಮಿಂಟನ್ ಸೂಪರ್ 1000 ಟೂರ್ನಿಯ ಫೈನಲ್ ಹಣಾಹಣಿಗೆ ಮೊದಲ ಬಾರಿಗೆ ಪ್ರವೇಶ ಪಡೆದರು. ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಶ್ರೇಯಾಂಕ ರಹಿತ ದಕ್ಷಿಣ ಕೊರಿಯಾದ ಮಿನ್ ಹ್ಯುಕ್ ಕಾಂಗ್ ಮತ್ತು ಸೆಯುಂಗ್ ಜೇ ಸಿಯೋ ವಿರುದ್ಧ ಮೂರು ಗೇಮ್‌ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications