Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಡೋನೇಷ್ಯಾ ಓಪನ್: ಪಿವಿ ಸಿಂಧು, ಪ್ರಣಾಯ್ ಕ್ವಾರ್ಟರ್ ಫೈನಲ್ಸ್‌ಗೆ

Indonesia Open: Birthday girl PV Sindhu, HS Prannoy enter quarter-finals

ಜಕಾರ್ತ, ಜುಲೈ 5: ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪಿವಿ ಸಿಂಧು ಮತ್ತು ಎಚ್.ಎಸ್. ಪ್ರಣಾಯ್ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.

ಗುರುವಾರ 23ನೇ ವರ್ಷಕ್ಕೆ ಕಾಲಿಟ್ಟ ಸಿಂಧು, ತಮ್ಮ ಜನ್ಮದಿನವನ್ನು ಸ್ಮರಣೀಯವನ್ನಾಗಿಸಿಕೊಂಡರು. ಆಕ್ರಮಣಕಾರಿ ಪ್ರದರ್ಶನ ತೋರಿದ ಅವರು ನೇರ ಸೆಟ್‌ಗಳಲ್ಲಿ ಜಯಿಸಿದರು.

ಜಪಾನ್‌ನ ಅಯಾ ಒಹೊರಿ ಅವರನ್ನು 21-17, 21-14 ಸೆಟ್‌ಗಳಿಂದ ಮಣಿಸಿ ಮಹಿಳೆಯರ ಸಿಂಗಲ್ಸ್ ವಿಭಾಗದ ಎಂಟರ ಘಟ್ಟ ತಲುಪಿದರು.

ಪುರುಷರ ವಿಭಾಗದಲ್ಲಿ ಪ್ರಣಾಯ್ ಜಪಾನ್‌ನ ವಾಂಗ್ ಟ್ಸು ವೀ ಅವರನ್ನು 21-23, 21-15, 21-13 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದರು.



ಇದಕ್ಕೂ ಮೊದಲು ಮಂಗಳವಾರ ನಡೆದ ಪಂದ್ಯದಲ್ಲಿ ಸಿಂಧು ರೋಚಕ ಗೆಲುವು ಕಂಡಿದ್ದರು. ಥಾಯ್ಲೆಂಡ್‌ನ ಪೊರ್ನ್‌ಪಾವೀ ಚೊಚುವಾಂಗ್ ಅವರನ್ನು 21-15, 19-21, 21-13 ನಿಂದ ಸೋಲಿಸಿದ್ದರು.

ಇಂಡೋನೇಷ್ಯನ್ ಓಪನ್ ಜಯಿಸಿದ ಆಟಗಾರರಿಗೆ 1,250,000 ಡಾಲರ್ ಬಹುಮಾನ ದೊರಕಲಿದೆ.



ಸೋಮವಾರ ನಡೆದ ಪಂದ್ಯದಲ್ಲಿ ಒಲಿಂಪಿಕ್ ಚಾಂಪಿಯನ್ ಚೀನಾದ 8ನೇ ಶ್ರೇಯಾಂಕದ ಲಿನ್ ಡಾನ್ ಅವರಿಗೆ ಆಘಾತ ನೀಡಿದ್ದ 13ನೇ ಶ್ರೇಯಾಂಕದ ಪ್ರಣಾಯ್ ಅಚ್ಚರಿ ಮೂಡಿಸಿದ್ದರು.

ಮೊದಲ ಸುತ್ತಿನಲ್ಲಿ 21-15ರಿಂದ ಜಯಿಸಿದ್ದ ಪ್ರಣಾಯ್, ಎರಡನೆಯ ಸುತ್ತಿನಲ್ಲಿ 9-21ರ ಭಾರಿ ಹಿನ್ನಡೆ ಅನುಭವಿಸಿದ್ದರು. ಆದರೆ ಮೂರನೇ ಸುತ್ತಿನಲ್ಲಿ ಮತ್ತೆ ಪುಟಿದ್ದೆದ್ದು 21-14ರ ಅಂತರದಲ್ಲಿ ಲಿನ್ ಡಾನ್ ಅವರನ್ನು ಮಣಿಸಿದ್ದರು.

Story first published: Thursday, July 5, 2018, 14:07 [IST]
Other articles published on Jul 5, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+