Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಡೋನೇಷ್ಯಾ ಓಪನ್ 2023: 2ನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ ಪಿವಿ ಸಿಂಧು

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಭಾರತದ ಶಟ್ಲರ್ ಪಿವಿ ಸಿಂಧು ಇಂಡೋನೇಷ್ಯಾ ಓಪನ್‌ನಲ್ಲಿ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ. ಚೈನೀಸ್ ತೈಪೆಯ ಶಟ್ಲರ್ ತೈ ತ್ಸು-ಯಿಂಗ್ ವಿರುದ್ಧ ನೇರ ಗೇಮ್‌ಗಳಲ್ಲಿ ಸೋಲು ಅನುಭವಿಸಿದ ಸಿಂಧು ಈ ಸೆಣೆಸಾಟದಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಅಂತಿಮ 16ರ ಸುತ್ತಿನ ಈ ಸೆಣೆಸಾಟದಲ್ಲಿ ಪಿವಿ ಸಿಂಧು 18-21, 16-21 ಅಂತರದ ನೇರ ಸೆಟ್‌ಗಳಿಂದ ತ್ಸು-ಯಿಂಗ್ ವಿರುದ್ಧ ಸೋಲು ಕಂಡಿದ್ದಾರೆ. ಈ ಮೂಲಕ ತ್ಸು-ಯಿಂಗ್ ವಿರುದ್ಧ ಸಿಂದು ತಮ್ಮ ಕಳಪೆ ದಾಖಲೆಯನ್ನು ಮುಂದುವರಿಸಿದರು. ಇಬ್ಬರ ಮುಖಾಮುಖಿಯಲ್ಲಿ ಸಿಂಧು 5-19ರ ಅಂತರದಿಂದ ಹಿಂದಿದ್ದಾರೆ. ತ್ಸು-ಯಿಂಗ್ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಅವರನ್ನು ಎದುರಿಸಲಿದ್ದಾರೆ.

Indonesia Open: PV Sindhu ended her campaign after losing to Chinese Taipei’s Tai Tzu Ying

ರೋಮಾಂಚಕ ಮುಖಾಮುಖಿಯಲ್ಲಿ ತ್ಸು-ಯಿಂಗ್ ಭಾರತದ ಸಿಂಧು ವಿರುದ್ಧ ತನ್ನಲ್ಲಿನ ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸಿದರು. ತೀವ್ರ ಪೈಪೋಟಿ ಹಾಗೂ ರಣತಂತ್ರದ ಹೊಡೆತಗಳಿಂದ ತುಂಬಿದ ಈ ಮುಖಾಮುಖಿ ಅಭಿಮಾನಿಗಳನ್ನು ತಮ್ಮ ಆಸನಗಳ ತುದಿಯಲ್ಲಿರುವಂತೆ ಮಾಡಿತ್ತು. ಆರಂಭಿಕ ಕ್ಷಣಗಳಲ್ಲಿ ಸಿಂಧು ತನ್ನ ಲಯವನ್ನು ಕಂಡುಕೊಳ್ಳಲು ಹೆಣಗಾಡಿದರು ಹೀಗಾಗಿ ತ್ಸು-ಯಿಂಗ್ ಆರಂಭಿಕ ಮುನ್ನಡೆ ಸಾಧಿಸಿದರು ಈ ಮೂಲಕ ಸತತ ನಾಲ್ಕು ಅಂಕಗಳನ್ನು ಗೆದ್ದುಕೊಂಡಿದ್ದರು.

ಆದರೂ ಮಾಜಿ ವಿಶ್ವ ನಂ.1 ಶಟ್ಲರ್ ಸಿಂಧು ಪಂದ್ಯದಲ್ಲಿ ತನ್ನ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಎದುರಾಳಿ ಅನಗತ್ಯ ತಪ್ಪು ಮಾಡಿದಾಗ ಅಂಕ ಗಳಿಸಿದರು. ತ್ಸು-ಯಿಂಗ್ ಅವರ ಕೆಲ ಚಾಣಾಕ್ಷತನದ ಹೊಡೆತಗಳಿಗೆ ಪ್ರತಿಕ್ರಿಯಿಸಲು ಸಿಂದುಗೆ ಸಾಧ್ಯವಾಗಲಿಲ್ಲ. ಹೀಗಾಗಿ ಆಟದ ಉದ್ದಕ್ಕೂ ತ್ಸು-ಯಿಂಗ್ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡರು.

ಮೊದಲ ಗೇಮ್ ಕಳೆದುಕೊಂಡ ಬಳಿಕ ಎರಡನೇ ಗೇಮ್‌ನಲ್ಲಿ ಸಿಂಧು ತಿರುಗೇಟು ನೀಡುವ ಭರವಸೆ ಮೂಡಿಸಿದರು. ಆಕ್ರಮಣಕಾರಿ ಆಟ ಹಾಗೂ ಏಕಾಗ್ರಥೆಯಿಂದ ಪಂದ್ಯದಲ್ಲಿ ಹಿಡಿತ ಸಾಧಿಸುವ ವಿಶ್ವಾಗಳಿಸಿಕೊಂಡರು. ಹೀಗಾಗಿ ಪಂದ್ಯದಲ್ಲಿ ಮೊದಲ ಬಾರಿಗೆ ಮುನ್ನಡೆಯನ್ನು ಕೂಡ ಸಾಧಿಸಿದರು. ಇದು ಕಮ್‌ಬ್ಯಾಕ್‌ನ ವಿಶ್ವಾಸ ಮೂಡಿಸಿತು. ಆದರೆ ತ್ಸು-ಯಿಂಗ್ ಅಸಾಧಾರಣ ಎದುರಾಳಿ ಎಂಬುದನ್ನು ಸಾಬೀತುಪಡಿಸಿದರು. ಸಿಂಧು ಅವರ ಸಾಂದರ್ಭಿಕ ಲೋಪಗಳನ್ನು ಬಳಸಿಕೊಂಡ ಚೈನೀಸ್ ತೈಪೆ ಆಟಗಾರ್ತಿ ಭಾರತೀಯ ಶಟ್ಲರ್‌ನನ್ನು ಕಂಗೆಡಿಸಿದರು. ತ್ಸು-ಯಿಂಗ್ ಸತತ ಆರು ಪಾಯಿಂಟ್‌ಗಳನ್ನು ಗಳಿಸಿ ಗೆಲುವು ತಮ್ಮದಾಗಿಸಿಕೊಂಡರು.

Story first published: Thursday, June 15, 2023, 14:21 [IST]
Other articles published on Jun 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+