ಇಂಡೋನೇಷ್ಯಾ ಓಪನ್: 16ರ ಘಟ್ಟಕ್ಕೆ ಪ್ರವೇಶ ಪಡೆದ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು
ಇಂಡೋನೇಷ್ಯಾ ಓಪನ್‌ನಲ್ಲಿ ಭಾರತ ಪಿವಿ ಸಿಂಧು ಭರ್ಜರಿ ಆರಂಭ ಪಡೆದುಕೊಂಡಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಪಿವಿ ಸಿಂಧು ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ವಿರುದ್ಧದ ಅದ್ಭುತ ಗೆಲುವು ಸಾಧಿಸಿದ್ದು ಅಂತಿಮ 16ರ ಘಟ್ಟಕ್ಕೆ ಕಾಲಿಟ್ಟಿದ್ದಾರೆ. ಇಂಡೋನೇಷ್ಯಾದ ಆಟಗಾರ್ತಿಯ ವಿರುದ್ಧ ನಡೆದ ಈ ಪಂದ್ಯದಲ್ಲಿ ಪಿವಿ ಸಿಂಧು 21-19, 21-15 ಅಂತರದಿಂದ ಗೆದ್ದು ಬೀಗಿದ್ದಾರೆ.
BWFನ ಇತ್ತೀಚಿನ ಶ್ರೇಯಾಂಕ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿರುವ ಪಿವಿ ಸಿಂಧು ಈ ವರ್ಷ ಹೆಚ್ಚು ನಿರಾಸೆ ಕಂಡಿದ್ದಾರೆ. ಥಾಯ್ಲೆಂಡ್ ಮತ್ತು ಸಿಂಗಾಪುರ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ನಿರ್ಗಮಿಸುವ ಮೂಲಕ ಭಾರೀ ನಿರಾಸೆ ಅನುಭವಿಸಿದ್ದರು. ಆದರೆ ಇಂಡೋನೇಷ್ಯಾ ಓಪನ್‌ನಲ್ಲಿ ಭರ್ಜರಿ ಗೆಲುವಿನೊಂದಿಗೆ ಅವರು ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ್ದಾರೆ.

ವಿಶ್ವದ ಒಂಬತ್ತನೇ ಶ್ರೇಯಾಂಕದ ಆಟಗಾರ್ತಿಯಾಗಿರುವ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಪಿವಿ ಸಿಂಧು ನೇರ ಗೇಮ್‌ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿದ್ದಾರೆ. ಇನ್ನು ಇಂಡೋನೇಷ್ಯಾದ ಈ ಶಟ್ಲರ್ ವಿರುದ್ಧ ಕಳೆದ ಎರಡು ಪಂದ್ಯಗಳಲ್ಲಿ ಸೋಲುಕಂಡಿದ್ದ ಭಾರತೀಯ ಅನುಭವಿ ಆಟಗಾರ್ತಿ ಅದ್ಭುತ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಈ ಮೂಲಕ ಮುಂದಿನ ಹಂತಕ್ಕೆ ದಾಪುಗಾಲಿಟ್ಟಿದ್ದಾರೆ.
ಮೊದಲ ಗೇಮ್‌ನಲ್ಲಿ ಸಿಂಧುಗೆ ಸಾಕಷ್ಉ ಪೈಪೋಟಿ ಎದುರಾಯಿತಾದರೂ ಇಂಡೋನೇಷ್ಯಾದ ಎದುರಾಳಿ ವಿರುದ್ಧ 21-19 ಅಂಕಗಳಿಂದ ಗೆಲ್ಲುವಲ್ಲಿ ಯಶಸ್ವಿಯಾದರು. ನಂತರ ಎರಡನೇ ಗೇಮ್‌ನಲ್ಲಿ 21-15 ಅಂತರದಿಂದ ಮಣಿಸಿಸ ಸಿಂಧು ಎರಡನೇ ವರ್ಷದ ಮೂರನೇ BWF ಸೂಪರ್ 1000 ಈವೆಂಟ್‌ನಲ್ಲಿ ಮುಂದಿನ ಸುತ್ತಿಗೆ ಪ್ರವೇಶಿಸಿದರು.
ಎರಡು ಬಾರಿಯ ಒಲಂಪಿಕ್ ಪದಕ ವಿಜೇತೆ ಪಿವಿ ಸಿಂಧು ಇದೀಗ ಮುಂದಿನ ಸುತ್ತಿನಲ್ಲಿ ತೈವಾನ್‌ನ ತೈ ತ್ಸು ಯಿಂಗ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯ ಜೂನ್ 14 ಬುಧವಾರದಂದು ನಡೆಯಲಿದೆ. ಸಿಂಧು ಅವರು ವಿಶ್ವದ ಮಾಜಿ ನಂಬರ್ ಒನ್ ಆಟಗಾರ್ತಿ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿಲ್ಲ. ಅದರಲ್ಲೂ 2019ರಿಂದ ತೈ ತ್ಸು ಯಿಂಗ್ ಅವರನ್ನು ಸಿಂಧುಗೆ ಮಣಿಸಲು ಸಾಧ್ಯವಾಗಿಲ್ಲ. ತೈವಾನ್‌ನ ಈ ಆಟಗಾರ್ತಿಯ ವಿರುದ್ಧ ಪಿವಿ ಸಿಂಧು 5-18ರಷ್ಟು ಕಳಪೆ ಹೆಡ್ ಟು ಹೆಡ್ ದಾಖಲೆ ಹೊಂದಿದ್ದಾರೆ.
ಇನ್ನು ಭಾರತದ ಎಚ್‌ಎಸ್ ಪ್ರಣಯ್ ವಿಶ್ವದ 11 ನೇ ಶ್ರೇಯಾಂಕಿತ ಆಟಗಾರ ಕೆಂಟಾ ನಿಶಿಮೊಟೊ ವಿರುದ್ಧ ಗೆಲುವು ಸಾಧಿಸಿದ್ದಾರೆ. 50 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ನೇರ ಗೇಮ್‌ಗಳಲ್ಲಿ ಸೋಲಿಸಿ ಮುಮದಿನ ಹಂತಕ್ಕೆ ಪ್ರವೇಶಿಸಿದ್ದಾರೆ ಪ್ರಣಯ್. 20-22, 21-12, 21-16 ಅಂತರದಿಮದ ನಿಶಿಮೊಟೊ ವಿರುದ್ಧ ಗೆಲುವು ಸಾಧಿಸಿದ ಭಾರತದ ಶಟ್ಲರ್ ಅಂತಿಮ 16ರ ಹಂತಕ್ಕೆ ಪ್ರವೇಶಿಸಿದ್ದಾರೆ. ಇದು ಜಪಾನಿನ ಶಟ್ಲರ್ ವಿರುದ್ಧ ಪ್ರಣಯ್ ಸಾಧಿಸಿದ ಸತತ ಎರಡನೇ ಗೆಲುವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications