For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ ನಿಂದ ಕಾಲ್ತೆಗೆದ ಜ್ವಾಲಾ ಗುಟ್ಟಾ

By Mahesh

ನವದೆಹಲಿ, ಸೆ.10: ಎಡಮೊಣಕಾಲಿನ ನೋವಿನಿಂದ ಬಳಲುತ್ತಿರುವ ಭಾರತದ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಅವರು ಈ ಬಾರಿಯ ಏಷ್ಯನ್ ಗೇಮ್ಸ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಡಬಲ್ಸ್ ಶ್ರೇಷ್ಠ ಆಟಗಾರ್ತಿಯಾಗಿರುವ ಜ್ವಾಲಾ ಗುಟ್ಟಾ ಅವರು ವೈದ್ಯರ ಸಲಹೆ ಮೇರೆಗೆ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಿದೆ.

ಜ್ವಾಲಾ ಅವರು 2011ರಲ್ಲಿ ಲಂಡನ್ನಿನಲ್ಲಿ ನಡೆದ ವಿಶ್ವ ಚಾಂಪಿಯನ್ ಮಹಿಳೆಯರ ಡಬಲ್ಸ್ ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಜೊತೆಗೂಡಿ ಕಂಚಿನ ಪದಕ ಗೆದ್ದಿದ್ದರು. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ಜ್ವಾಲಾ 2006ರಲ್ಲಿ ಮಿಶ್ರ ಡಬಲ್ಸ್ ನಲ್ಲಿ ಕಂಚು, 2010ರಲ್ಲಿ ಮಹಿಳೆಯರ ಡಬಲ್ಸ್ ನಲ್ಲಿ ಚಿನ್ನ ಹಾಗೂ ಮಿಶ್ರ ಡಬಲ್ಸ್ ನಲ್ಲಿ ಬೆಳ್ಳಿ, ಇತ್ತೀಚೆಗೆ ಗ್ಲಾಸ್ಗೋದಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು.[ಸತತ 7ನೇ ಚಿನ್ನದ ಬೇಟೆಯಲ್ಲಿ ಕಬಡ್ಡಿ ಕಲಿಗಳು]

Jwala Gutta pulls out of Asian Games 2014 due to knee injury

ಭಾರತದಿಂದ 679 ಕ್ರೀಡಾಳುಗಳು: ದಕ್ಷಿಣ ಕೊರಿಯಾದ ಇಂಚೆಯಾನ್ ನಲ್ಲಿ ಸೆ.19ರಿಂದ ಅಕ್ಟೋಬರ್ 4ರ ತನಕ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕಾಗಿ ಭಾರತೀಯ ಒಲಿಂಪಿಕ್ಸ್ ಸಮಿತಿ(IOA) ಸುಮಾರು 942 ಕ್ರೀಡಾಪಟುಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಅದರೆ, ಕ್ರೀಡಾ ಸಚಿವ ಸರ್ವಾನಂದ ಸೊನೊವಾಲ್ ಅವರು 942 ಕ್ರೀಡಾಪಟುಗಳ ಬದಲಿಗೆ 679 ಜನರನ್ನು ಆಯ್ಕೆ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಅವರ ಅಂಕಿತವೂ ಸಿಕ್ಕಿದೆ.

679 ಜನರ ಪೈಕಿ 516 ಅಥ್ಲೀಟ್ ಗಳು 163 ಕೋಚ್ ಗಳು ಹಾಗೂ ಸಹಾಯಕ ಸಿಬ್ಬಂದಿ ಇದ್ದಾರೆ. ಭಾರತ ಈ ಬಾರಿ 28 ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದೆ. ಕಳೆದ ಬಾರಿ 35 ಸ್ಪರ್ಧೆಗಳಲ್ಲಿ ಭಾಗವಹಿಸಿತ್ತು. ಭಾರತ ಸ್ಪರ್ಧಿಸಲಿರುವ ಕ್ರೀಡೆಗಳು ಇಂತಿದೆ:

ಅಕ್ವಾಟಿಕ್ಸ್(ಈಜು), ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬಾಡ್ಮಿಂಟನ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಕನೋಯಿಂಗ್ ಹಾಗೂ ಕಯಾಗಿಂಗ್, ಸೈಕಲಿಂಗ್, ಈಕ್ವೇಸ್ಟ್ರಿಯನ್, ಫುಟ್ಬಾಲ್, ಗಾಲ್ಫ್, ಜಿಮ್ನಾಸ್ಟಿಕ್ಸ್, ಹ್ಯಾಂಡ್ ಬಾಲ್, ಹಾಕಿ, ಜ್ಯೂಡೋ, ಕಬಡ್ಡಿ, ರೋಯಿಂಗ್, ಸೆಪಾಂಗ್ ಟಾಕ್ರಾ, ಶೂಟಿಂಗ್, ಸ್ಕ್ವಾಶ್, ಟೆಕ್ವಾಂಡೋ, ಟೇಬಲ್ ಟೆನಿಸ್, ಟೆನಿಸ್, ವಾಲಿಬಾಲ್, ಕುಸ್ತಿ, ವುಶು, ವೇಟ್ ಲಿಫ್ಟಿಂಗ್ ಹಾಗೂ ಯಾಚಿಂಗ್

ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಸುಮಾರು 45 ದೇಶಗಳು 39 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿವೆ. ಎಂದಿನಂತೆ ಬಿಸಿಸಿಐ ಕ್ರಿಕೆಟ್ ತಂಡವನ್ನು ಕಳಿಸುತ್ತಿಲ್ಲ.

Story first published: Wednesday, January 3, 2018, 10:14 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+