For Quick Alerts
ALLOW NOTIFICATIONS  
For Daily Alerts

ಕೊರಿಯಾ ಓಪನ್: ಸೆಮಿಫೈನಲ್ ಪ್ರವೇಶಿಸಿದ ಸಾತ್ವಿಕ್-ಚಿರಾಗ್ ಶೆಟ್ಟಿ ಜೋಡಿ

ವಿಶ್ವದ ನಂ. 3 ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೊರಿಯಾ ಓಪನ್ 2023ರ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ಮೂರನೇ ಶ್ರೇಯಾಂಕದ ಈ ಜೋಡಿ ಕ್ವಾರ್ಟರ್-ಫೈನಲ್‌ನಲ್ಲಿ ಜಪಾನ್‌ನ ಟಕುರೊ ಹಾಕಿ ಮತ್ತು ಯುಗೊ ಕೊಬಯಾಶಿ ವಿರುದ್ಧ ಆಕರ್ಷಕ ಪ್ರದರ್ಶನವನ್ನು ಪ್ರದರ್‍ಯಶನ ನೀಡಿ ಗೆಲುವು ಸಾಧಿಸಿದ್ದಾರೆ. 21-14, 21-17 ನೇರ ಗೇಮ್ಸ್‌ಗಳಲ್ಲಿ ಈ ಜಯವನ್ನು ಸಾಧಿಸಿದ್ದು 40 ನಿಮಿಷಗಳಲ್ಲಿ ಪಂದ್ಯ ಮುಕ್ತಾಯ ಕಂಡಿದೆ.

ಸೆಮಿಫೈನಲ್‌ವರೆಗಿನ ಪಯಣದಲ್ಲಿ ಸವಾಲುಗಳಿಲ್ಲದೇ ಇರಲಿಲ್ಲ. ಎರಡನೇ ಗೇಮ್‌ನ ಆರಂಭಿಕ ಹಂತದಲ್ಲಿ ಭಾರತದ ಜೋಡಿ 3-6ರಲ್ಲಿ ಹಿನ್ನಡೆ ಕಂಡಿತು. ಆದೆ ಅದಾದ ಬಳಿಕ ತಿರುಗಿಬಿದ್ದ ಭಾರತೀಯ ಆಟಗಾರರು ಸತತ ಆರು ಅಂಕಗಳನ್ನು ಗಳಿಸಿ 14-9 ಮುನ್ನಡೆ ಸಾಧಿಸಿದರು. ನಂತರ ಮತ್ತೆ ಪೈಪೋಟಿ ನಡೆಸಿ 16-16 ರಲ್ಲಿ ಸಮಬಲ ಸಾಧಿಸಿದ ಜಪಾನ್ ಜೋಡಿಯ ಅದ್ಭುತ ಹೋರಾಟದ ಹೊರತಾಗಿಯೂ ರಂಕಿರೆಡ್ಡಿ ಮತ್ತು ಶೆಟ್ಟಿ ತಮ್ಮ ಆಟವನ್ನು ವೇಗ ಹೆಚ್ಚಿಸಿಕೊಂಡರು. ಈ ಮೂಲಕ ಈ ಪಂದ್ಯವನ್ನು ಗೆದ್ದು ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

Korea Open 2023: Satwiksairaj Rankireddy and Chirag Shetty enter semi-finals

ಕಳೆದ ತಿಂಗಳು ಇಂಡೋನೇಷ್ಯಾ ಓಪನ್ ಸೂಪರ್ 1000ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದ ಭಾರತದ ಈ ಜೋಡಿ ತಮ್ಮ ಅದ್ಭುತ ಫಾರ್ಮ್‌ಅನ್ನು ಕೊರಿಯಾ ಓಪನ್ 2023 ರಲ್ಲಿಯೂ ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವರ್ಷದ ಟೂರ್ನಿಗಳಲ್ಲಿ ನಾಲ್ಕನೇ ಬಾರಿಗೆ ಸೆಮಿಫಯನಲ್‌ಗೆ ಪ್ರವೇಶಿಸಿರುವುದು ಭಾರತದ ಈ ಜೋಡಿಯ ಅಬ್ಬರವನ್ನು ವ್ಯಕ್ತಪಡಿಸುತ್ತಿದೆ.

ಆದರೆ ಕೊರಿಯಾ ಓಪನ್ ಉಳಿದ ಭಾರತೀಯ ಆಟಗಾರರಿಗೆ ಯಶಸ್ಸು ನೀಡಿಲ್ಲ ಎಂಬುದು ಬೇಸರದ ಸಂಗತಿ. ಪಿವಿ ಸಿಂಧು, ಹೆಚ್‌ಎಸ್ ಪ್ರಣಯ್ ಮತ್ತು ಕಿಡಂಬಿ ಶ್ರೀಕಾಂತ್ ಸೇರಿದಂತೆ ಪ್ರಮುಖ ಆಟಗಾರರಿಂದ ಆರಂಭಿಕ ಸುತ್ತಿನಲ್ಲಿಯೇ ನಿರ್ಗಮಿಸುವ ಮೂಲಕ ಸಿಂಗಲ್ಸ್ ಅಭಿಯಾನವು ನಿರಾಶಾದಾಯಕವಾಗಿತ್ತು. ಎರಡನೇ ಸುತ್ತಿಗೆ ಮುನ್ನಡೆದ ಏಕೈಕ ಸಿಂಗಲ್ಸ್ ಆಟಗಾರರಾದ ಎಚ್‌ಎಸ್ ಪ್ರಣಯ್ ಮತ್ತು ಪ್ರಿಯಾಂಶು ರಾಜಾವತ್ ಮೂರು ಗೇಮ್‌ಗಳ ಕದನಗಳಲ್ಲಿ ಸೋಲು ಕಂಡರು.

Story first published: Friday, July 21, 2023, 21:00 [IST]
Other articles published on Jul 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+