Paris Olympics 2024 Badminton: ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ ಲಕ್ಷ್ಯ ಸೇನ್
ಜುಲೈ 28 ಭಾನುವಾರ, ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ. ಶನಿವಾರ ನಡೆದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನ ಗುಂಪು ಹಂತದ ಪಂದ್ಯದಲ್ಲಿ ಸೇನ್ ಗ್ವಾಟೆಮಾಲಾದ ಆಟಗಾರ ಕಾರ್ಡನ್ ಕೆವಿನ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿದರು.
ಮೊದಲ ಸೆಟ್ ಅನ್ನು 21-8ರಿಂದ ಸುಲಭವಾಗಿ ಗೆದ್ದುಕೊಂಡ ಸೇನ್ ಎರಡನೇ ಸೆಟ್ ನಲ್ಲಿ ಕಠಿಣ ಹೋರಾಟ ಎದುರಿಸಿದರು. ಆದರೆ, ಸೇನ್ ಎರಡನೇ ಸೆಟ್ ಅನ್ನು 22-20 ರಿಂದ ಗೆದ್ದು ಬೀಗಿದರು.

ಮೊದಲ ಸೆಟ್
ಪ್ಯಾರಿಸ್‌ನಲ್ಲಿ ಪದಕ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿರುವ 22 ವರ್ಷದ ಲಕ್ಷ್ಯ ಸೇನ್, ಪಂದ್ಯದಲ್ಲಿ ವೇಗವಾಗಿ ಪ್ರಾರಂಭಿಸಿದರು. 37 ವರ್ಷದ ಎದುರಾಳಿಗೆ ಪಾಯಿಂಟ್‌ಗಳನ್ನು ಪಡೆಯಲು ಯಾವುದೇ ಅವಕಾಶವನ್ನು ನೀಡಲಿಲ್ಲ. ಮೊದಲ ಸೆಟ್‌ನಲ್ಲಿ ಸೇನ್ ಅದ್ಭುತ ಪ್ರದರ್ಶನ ನೀಡಿದರು.
ಮೊದಲ ಸೆಟ್‌ನ ಮಧ್ಯ ವಿರಾಮದಲ್ಲಿ 11-3 ಮುನ್ನಡೆ ಸಾಧಿಸಿದರು. ಇದಾದ ಬಳಿಕ ತಮ್ಮ ಪ್ರದರ್ಶನವನ್ನು ಮುಂದುವರಿಸಿದ ಸೇನ್ ಮೊದಲ ಸೆಟ್ ಅನ್ನು 21-8ರಿಂದ ಗೆದ್ದುಕೊಂಡರು.
ಎರಡನೇ ಸೆಟ್‌ನಲ್ಲಿ ರೋಚಕ
ಎರಡನೇ ಸೆಟ್‌ನಲ್ಲಿ ಕಾರ್ಡನ್ ಕೆವಿನ್ ಅವರು ಸೇನ್ ವಿರುದ್ಧ 6-2 ಮುನ್ನಡೆ ಸಾಧಿಸಿದರು. ಸೇನ್ ಈ ಸೆಟ್‌ನಲ್ಲಿ ಅನೇಕ ತಪ್ಪುಗಳನ್ನು ಮಾಡಿದರು. ಷಟಲ್ ಅನ್ನು ನೆಟ್‌ಗೆ ಹಲವಾರು ಬಾರಿ ಹೊಡೆದರು. ಈ ಸೆಟ್‌ನಲ್ಲಿ, ಕೆವಿನ್ ಭಾರತೀಯ ಆಟಗಾರನ ಮೇಲೆ ಪ್ರಾಬಲ್ಯ ಸಾಧಿಸಿದರು.
ಆದರೆ ಮಧ್ಯ-ವಿರಾಮದವರೆಗೆ 11-6 ರಿಂದ ಹಿನ್ನಡೆಯ ಅನುಭವಿಸಿದ್ದ ಸೇನ್ ಪುನರಾಗಮನವನ್ನು ಮಾಡಿದರು. ಈ ಸೆಟ್‌ನಲ್ಲಿ ಸೇನ್ ಭರ್ಜರಿಯಾಗಿ ಗೆದ್ದು ಬೀಗಿದರು.
ಮಧ್ಯ ವಿರಾಮದಲ್ಲಿ ಹಿಂದೆ ಬಿದ್ದ ಸೇನ್ ನಂತರ ಆಟಕ್ಕೆ ಮರಳಿದರು. ಈ ಸೆಟ್‌ನಲ್ಲಿ ಲಕ್ಷ್ಯ ಕಠಿಣ ಪೈಪೋಟಿ ಎದುರಿಸಿದರು. ಆದರೆ, ವಿಶ್ವದ 18ನೇ ಶ್ರೇಯಾಂಕದ ಭಾರತದ ಆಟಗಾರ ಲಕ್ಷ್ಯ ಸೇನ್ 41ನೇ ಶ್ರೇಯಾಂಕದ ಗ್ವಾಟೆಮಾಲಾದ ಕಾರ್ಡನ್ ಕೆವಿನ್ ಅವರನ್ನು 22-20 ರಿಂದ ಸೋಲಿಸಿ ಪಂದ್ಯವನ್ನು ಗೆದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications