Paris Olympics 2024: ಕೆಚ್ಚೆದೆಯ ಬ್ಯಾಡ್ಮಿಂಟನ್ ತಾರೆಗೆ ದಕ್ಕದ ಕಂಚಿನ ಪದಕ!
ಆಗಸ್ಟ್ 5 ಸೋಮವಾರ, ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತವು ತನ್ನ ನಾಲ್ಕನೇ ಪದಕವನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ. ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಅವರು ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನ ಕಂಚಿನ ಪದಕದ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.
ಕಠಿಣ ಪಂದ್ಯದಲ್ಲಿ ಕೆಚ್ಚೆದೆಯ ಆಟ ಪ್ರದರ್ಶಸಿದ ಲಕ್ಷ್ಯ ಸೇನ್ ಅವರು ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ 21-13, 16-21, 11-21 ಸೆಟ್‌ಗಳಿಂದ ಸೋತರು. ಇದರೊಂದಿಗೆ ಕಂಚಿನ ಪದಕ ಗೆದ್ದು ಚರಿತ್ರೆ ಸೃಷ್ಟಿಸುವ ಅವಕಾಶದಿಂದ ಲಕ್ಷ್ಯ ಸೇನ್ ವಂಚಿತರಾಗಿದ್ದಾರೆ.

ಒಲಿಂಪಿಕ್ಸ್ ಇತಿಹಾಸದಲ್ಲಿ ಇಲ್ಲಿವರೆಗೂ ಭಾರತದ ಯಾವುದೇ ಪರುಷ ಷಟ್ಲರ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪದಕ ಗೆದ್ದಿಲ್ಲ. ಒಂದು ವೇಳೆ ಇಂದು ಸೇನ್ ಪದಕ ಗೆದ್ದಿದ್ದರೆ, ಬ್ಯಾಡ್ಮಿಂಟನ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಪುರುಷ ಬ್ಯಾಡ್ಮಿಂಟನ್ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗುತ್ತಿದ್ದಾರೆ. 22 ವರ್ಷದ ಲಕ್ಷ್ಯ ಸೇನ್‌ಗೆ ಇದು ಚೊಚ್ಚಲ ಒಲಿಂಪಿಕ್ಸ್ ಆಗಿದ್ದು, ಇದರಲ್ಲಿ ಸೆಮಿಫೈನಲ್ ತಲುಪುವ ಮೂಲಕ ಅದ್ಭುತ ದಾಖಲೆಗಳನ್ನು ಮಾಡಿದ್ದಾರೆ.
ಮೊದಲ ಸೆಟ್
ಲಕ್ಷ್ಯ ಸೇನ್ ಮೊದಲ ಸೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಆರಂಭದಿಂದಲೂ ಮಲೇಷ್ಯಾದ ಎದುರಾಳಿ ಮೇಲೆ ಪ್ರಾಬಲ್ಯ ತೋರಿದರು. ಪಂದ್ಯದ ಆರಂಭದಿಂದಲೇ ಲಕ್ಷ್ಯ ಆಕ್ರಮಣಕಾರಿ ಆಟ ಪ್ರದರ್ಶಿಸಿ ಮಧ್ಯ ವಿರಾಮದ ತನಕ 11-7ರಲ್ಲಿ ಮುನ್ನಡೆ ಸಾಧಿಸಿದರು.
ಸೇನ್ ಹೊಡೆಯುತ್ತಿದ ಮಿಂಚಿನ ವೇಗದ ಸ್ಮ್ಯಾಶ್‌ಗೆ ಲಿ ಜಿ ಜಿಯಾ ಬಳಿ ಉತ್ತರವಿರಲಿಲ್ಲ. ಸೇನ್ ತಮ್ಮ ಅದ್ಭುತ ಆಟವನ್ನು ಮುಂದುವರಿಸಿ ಮೊದಲ ಸೆಟ್ ಅನ್ನು 21-13 ರಿಂದ ಸುಲಭವಾಗಿ ಗೆದ್ದುಕೊಂಡರು.
ಎರಡನೇ ಸೆಟ್
ಗೆಲುವಿನ ಉತ್ಸಾಹದಲ್ಲಿ ಸೇನ್ ಮತ್ತು ಲಿ ಜಿ ಜಿಯಾ ನಡುವೆ ಎರಡನೇ ಸೆಟ್ ರಣರೋಚವಾಗಿತ್ತು. ಇಬ್ಬರು ಸೋಲು ಒಪ್ಪಿಕೊಳ್ಳಲು ರೆಡಿ ಇರಲಿಲ್ಲ. ಆದರೂ ಸೇನ್ ಈ ಸೆಟ್‌ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಪ್ರಾರಂಭಿಸಿದರು.
ಈ ನಡುವೆ ಸೇನ್ ಎಡವಿದರು. ಲಕ್ಷ್ಯ ಆರಂಭಿಕ ಮುನ್ನಡೆ ಪಡೆದರೆ, ಮಲೇಷ್ಯಾದ ಆಟಗಾರ ಪ್ರಬಲ ಪುನರಾಗಮನ ಮಾಡಿದರು. ಮಧ್ಯ ವಿರಾಮದವರೆಗೆ 11-8 ರಿಂದ ಮುನ್ನಡೆಯುವ ಮೂಲಕ 3 ಅಂಕಗಳನ್ನು ಪಡೆದರು.
ಇದಾದ ನಂತರ, ಸೇನ್ ಆಟಕ್ಕೆ ಮರಳಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು. ಆದರೆ ಮಲೇಷ್ಯಾದ ಆಟಗಾರ ಅವರಿಗೆ ಹೆಚ್ಚಿನ ಅವಕಾಶವನ್ನು ನೀಡದೆ ಎರಡನೇ ಸೆಟ್ ಅನ್ನು 21-16 ರಲ್ಲಿ ಗೆದ್ದರು.
ಅಂತಿಮ ಸೆಟ್
ಮೂರನೇ ಸೆಟ್‌ನಲ್ಲಿ ಲಕ್ಷ್ಯ ಸೇನ್ ಮತ್ತು ಲೀ ಜಿ ಜಿಯಾ ನಡುವೆ ತೀವ್ರ ಹೋರಾಟ ಮತ್ತೆ ಏರ್ಪಟ್ಟಿತು. ಈ ಸೆಟ್‌ನಲ್ಲಿ ಮಲೇಷ್ಯಾ ಆಟಗಾರರು ಲಕ್ಷ್ಯ ಸೇನ್‌ಗಿಂತ ಅದ್ಭುತವಾಗಿ ಆಟವನ್ನು ಪ್ರದರ್ಶಿಸಿದರು.
ಏಕೆಂದರೆ ಲಕ್ಷ್ಯ ಅವರು ಬಲಗೈ ನೋವಿನಿಂದ ಬಳಲುತ್ತಿದ್ದರು. ನೋವಿನ ನಡುವೆಯೂ ಲಕ್ಷ್ಯ ಧೈರ್ಯ ಕಳೆದುಕೊಳ್ಳದೆ ಹೋರಾಟ ಮುಂದುವರಿಸಿದರು. ಆದರೆ, ಭಾರತಕ್ಕೆ ಪದಕ ಗೆಲ್ಲಲು ಅವರ ಪ್ರಯತ್ನ ಸಾಕಾಗಲಿಲ್ಲ. ಇದರ ಲಾಭ ಪಡೆದ ಲೀ ಜಿ ಜಿಯಾ ಮೂರನೇ ಸೆಟ್ ಅನ್ನು 21-11 ರಿಂದ ಗೆದ್ದು ಕಂಚಿನ ಪದಕಕ್ಕೆ ಮುತ್ತಿಕ್ಕಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications