Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್ ಬಳಿಕ ಬ್ಯಾಡ್ಮಿಂಟನ್‌ನಲ್ಲಿ 'ನೋ-ಲುಕ್ ಶಾಟ್'; ಒಲಿಂಪಿಕ್ಸ್‌ನಲ್ಲಿ ಸಂಚಲನ ಮೂಡಿಸಿದ ಲಕ್ಷ್ಯ ಸೇನ್

ಜುಲೈ 31 ಬುಧವಾರ, ಕ್ರಿಕೆಟ್‌ನಲ್ಲಿ ಬ್ಯಾಟರ್ಸ್‌ ವಿವಿಧ ರೀತಿಯಲ್ಲಿ ಸಿಕ್ಸರ್‌ ಹೊಡೆಯುತ್ತಾರೆ. ಅದರಲ್ಲೂ ನೋ-ಲುಕ್ ಶಾಟ್ ಅಂತೂ ಕ್ರಿಕೆಟ್‌ನಲ್ಲಿ ಸಾಕಷ್ಟು ಜನಪ್ರಿಯವಾಗಿದೆ.

ಭಾರತ ತಂಡದ ವಿಕೆಟ್‌ಕೀಪರ್ ಮತ್ತು ಬ್ಯಾಟರ್‌ ರಿಷಬ್ ಪಂತ್ ನೋ-ಲುಕ್ ಶಾಟ್ ಹೆಚ್ಚಾಗಿ ಆಡುತ್ತಾರೆ. ಹೀಗಾಗಿ ಪಂತ್‌ ಅವರನ್ನು ನೋ-ಲುಕ್ ಶಾಟ್ ಸ್ಪೆಷಲಿಸ್ಟ್ ಎಂದು ಪರಿಗಣಿಸಲಾಗಿದೆ.

Lakshya Sen no-look shot at Paris Olympics 2024 goes viral

ಇದೀಗ ಈ ಶಾಟ್ 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲೂ ಕಂಡು ಬಂದಿದೆ. ಆದರೆ, ಈ ಬಾರಿ ಅದು ನಡೆದಿರುವುದು ಕ್ರಿಕೆಟ್‌ನಲ್ಲಿ ಅಲ್ಲ ಬ್ಯಾಡ್ಮಿಂಟನ್‌ನಲ್ಲಿ ಎಂಬುದು ಅಚ್ಚರಿ ಮೂಡಿಸಿದೆ.

ಭಾರತದ ಯುವ ಬ್ಯಾಡ್ಮಿಂಟನ್‌ ತಾರೆ ಲಕ್ಷ್ಯ ಸೇನ್ ಈ ಅದ್ಭುವನ್ನು ಸೃಷ್ಟಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದ್ದು, ನೆಟಿಗರಿಂದ ಉತ್ತಮ ಪ್ರತಿಕ್ತಿಯೆ ವ್ಯಕ್ತವಾಗುತ್ತಿದೆ.

ಪ್ರೀ ಕ್ವಾರ್ಟರ್ ಫೈನಲ್‌ಗೆ ಲಕ್ಷ್ಯ ಲಗ್ಗೆ

ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಶ್ರೇಯಾಂಕದ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸುವ ಮೂಲಕ ಅಮೋಘ ಗೆಲುವು ಸಾಧಿಸಿದರು.

21-18, 21-12 ಸೆಟ್‌ಗಳಿಂದ ಆಲ್ ಇಂಗ್ಲೆಂಡ್ ಮತ್ತು ಏಷ್ಯನ್ ಚಾಂಪಿಯನ್ ಕ್ರಿಸ್ಟಿ ಅವರನ್ನು ಲಕ್ಷ್ಯ ಸೇನ್‌ ಸೋಲಿಸಿದರು. ಈ ಮೂಲಕ ಲಕ್ಷ್ಯ ಸೇನ್‌ ಪ್ರೀ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

'ನೋ-ಲುಕ್' ಶಾಟ್

ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಸೆಣಸಾಡುವಾಗ ಲಕ್ಷ್ಯ ಭರ್ಜರಿ ಶಾಟ್ ಮಾಡಿದರು. ಬ್ಯಾಡ್ಮಿಂಟನ್ ಪರಿಭಾಷೆಯಲ್ಲಿ ಇದು ಫೋರ್‌ಹ್ಯಾಂಡ್ ಆಗಿದೆ. ಆದರೆ ಇದು ಹಿಂಭಾಗದಿಂದ ಹೊಡೆದಿದಾಗಿತ್ತು. ಹೀಗಾಗಿ ಇದು ಕ್ರಿಕೆಟ್‌ನಲ್ಲಿ ಬ್ಯಾಟರ್ಸ್‌ ಸಿಕ್ಸರ್‌ ಹೊಡಯುವ ನೋ-ಲುಕ್ ಶಾಟ್‌ನಂತೆಯೇ ಇತ್ತು.

ಲಕ್ಷ್ಯ ಅವರ ಕಣ್ಣುಗಳು ಇನ್ನೊಂದು ಕಡೆ ಇದ್ದವು. ಆದರೆ ಕಾಕ್ ನೆಟ್‌ನ ಮೇಲೆ ಹೋಗಿದ್ದು ಮಾತ್ರವಲ್ಲದೆ, ಎದುರಾಳಿ ಅಂಕಣಕ್ಕೆ ತಲುಪಿತ್ತು. ಈ ವೇಳೆ ಲಕ್ಷ್ಯ ಸೇನ್‌ ಅವರ ನೋ-ಲುಕ್‌ ಶಾಟ್‌ ನೋಡಿದ ಪ್ರೇಕ್ಷಕರು ಬೆರಗಾಗಿ ಚಪ್ಪಾಳೆ ತಟ್ಟಿದರು.

ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ತಮ್ಮದೆ ದೇಶದವರೇ ಆದ ಎಚ್‌ಎಸ್ ಪ್ರಣಯ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಪ್ರಣಯ್ ತಮ್ಮ ಮುಂದಿನ ಪಂದ್ಯದಲ್ಲಿ ವಿಯೆಟ್ನಾಂನ ಲೆ ಡಕ್ ಫಟ್ ಅವರನ್ನು ಎದುರಿಸಲಿದ್ದಾರೆ.

Story first published: Wednesday, July 31, 2024, 22:45 [IST]
Other articles published on Jul 31, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+