Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024 Badminton: ಪ್ರಿ-ಕ್ವಾರ್ಟರ್ ಫೈನಲ್‌ಗೆ ಎಂಟ್ರಿ ಕೊಟ್ಟ ಲಕ್ಷ್ಯ ಸೇನ್

ಜುಲೈ 31 ಬುಧವಾರ, ಪ್ಯಾರಿಸ್‌ ಒಲಿಂಪಿಕ್ಸ್ 2024ರ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಅವರು ಪ್ರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಲಕ್ಷ್ಯ ಸೇನ್‌ ಅವರು ನೇರ ಸೆಟ್‌ಗಳಲ್ಲಿ ವಿಶ್ವದ ನಾಲ್ಕನೇ ಕ್ರಮಾಂಕದ ಆಟಗಾರ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ವಿರುದ್ಧ ಭರ್ಜರಿ ಜಯ ಸಾಧಿಸಿದರು

ಜೊನಾಥನ್ ಕ್ರಿಸ್ಟಿ ಎದುರು 22 ವರ್ಷದ ಲಕ್ಷ್ಯ ಸೇನ್‌ ಅವರು ಆರಂಭದಿಂದಲ್ಲೇ ತನ್ನ ಪ್ರಾಬಲ್ಯವನ್ನು ಸಾಧಿಸಿದರು. 21-18, 21-12 ಸೆಟ್‌ಗಳಿಂದ ಆಲ್ ಇಂಗ್ಲೆಂಡ್ ಮತ್ತು ಏಷ್ಯನ್ ಚಾಂಪಿಯನ್ ಕ್ರಿಸ್ಟಿ ಅವರನ್ನು ಲಕ್ಷ್ಯ ಸೇನ್‌ ಸೋಲಿಸಿದರು. ಕ್ರಿಸ್ಟಿ ಅವರು ಪ್ರಬಲ ಪೈಪೋಟಿ ನೀಡುವಲ್ಲಿ ವಿಫಲವಾದರು.

Lakshya Sen reached pre-quarter final in Paris Olympics 2024

ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ತಮ್ಮದೆ ದೇಶದವರೇ ಆದ ಎಚ್‌ಎಸ್ ಪ್ರಣಯ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಪ್ರಣಯ್ ದಿನದ ನಂತರ ವಿಯೆಟ್ನಾಂನ ಲೆ ಡಕ್ ಫಟ್ ಅವರನ್ನು ಎದುರಿಸಲಿದ್ದಾರೆ.

ಭಾನುವಾರ ನಡೆದ ಎಲ್ ಗುಂಪಿನ ಆರಂಭಿಕ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್ಸ್ ಸೆಮಿ-ಫೈನಲಿಸ್ಟ್ ಕೆವಿನ್ ಕಾರ್ಡೆನ್ ಅವರನ್ನು ಸೇನ್ ಸೋಲಿಸಿದ್ದರು. ಬಳಿಕ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಸೇನ್, ಬೆಲ್ಜಿಯಂನ ಜೂಲಿಯನ್ ಕ್ಯಾರಾಗಿ ಅವರನ್ನು ಸೋಲಿಸಿದರು.

ಇದಲ್ಲದೇ ಮಹಿಳೆಯರ ಸಿಂಗಲ್ಸ್ ನಲ್ಲಿ ಪಿವಿ ಸಿಂಧು ನೇರ ಸೆಟ್ ಗಳಿಂದ ಎಸ್ಟೋನಿಯಾ ಆಟಗಾರ್ತಿಯನ್ನು ಮಣಿಸಿದ್ದಾರೆ. ಸಿಂಧು 21-5 ಮತ್ತು 21-10 ರಿಂದ ಸುಲಭವಾಗಿ ಗೆದ್ದರು. ಈ ಗೆಲುವಿನೊಂದಿಗೆ 16ರ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

Story first published: Wednesday, July 31, 2024, 16:43 [IST]
Other articles published on Jul 31, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+